government hospitals in Karnataka
ವಿಕ್ಟೋರಿಯಾ ಆಸ್ಪತ್ರೆ

ರಾಜ್ಯದ ಸರ್ಕಾರಿ ಆಸ್ಪತ್ರೆಗಳ OPD, IPD ಶುಲ್ಕ ಹೆಚ್ಚಳ!

ಆಸ್ಪತ್ರೆಯ ನಿರ್ವಾಹಕರು ತಮ್ಮ ದರ ಪಟ್ಟಿಗಳನ್ನು ನವೀಕರಿಸಲು ಮತ್ತು ಬದಲಾವಣೆಗಳನ್ನು ತಕ್ಷಣವೇ ಇ-ಹಾಸ್ಪಿಟಲ್ ಸಾಫ್ಟ್‌ವೇರ್ ವ್ಯವಸ್ಥೆಯಲ್ಲಿ ಪ್ರತಿಬಿಂಬಿಸುವಂತೆ ಸೂಚನೆ ನೀಡಲಾಗಿದೆ.
Published on

ಬೆಂಗಳೂರು: ಕರ್ನಾಟಕದಲ್ಲಿ ಬೆಲೆ ಏರಿಕೆ ಸರಣಿ ಮುಂದುವರೆದಿದ್ದು, ಇದೀಗ ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳ ಹೊರರೋಗಿ (ಒಪಿಡಿ) ಮತ್ತು ಒಳರೋಗಿ (ಐಪಿಡಿ) ಸೇವೆಗಳ ಶುಲ್ಕವನ್ನು ಹೆಚ್ಚಿಸಲು ರಾಜ್ಯ ಆರೋಗ್ಯ ಇಲಾಖೆ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಾದ ವಿಕ್ಟೋರಿಯಾ ಆಸ್ಪತ್ರೆ, ವಾಣಿ ವಿಲಾಸ ಆಸ್ಪತ್ರೆ, ಮಿಂಟೊ ಆಸ್ಪತ್ರೆ ಸೇರಿದಂತೆ ಪ್ರಮುಖ ಸರ್ಕಾರಿ ಆಸ್ಪತ್ರೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ರಾಜ್ಯ ಟ್ರಾಮಾ ಕೇರ್ ಕೇಂದ್ರಗಳಲ್ಲಿ ಹೊರರೋಗಿ (ಒಪಿಡಿ) ಮತ್ತು ಒಳರೋಗಿ (ಐಪಿಡಿ) ಸೇವೆಗಳ ಶುಲ್ಕವನ್ನು ರಾಜ್ಯ ಆರೋಗ್ಯ ಇಲಾಖೆ ಹೆಚ್ಚಿಸಿದೆ.

ಈ ಶುಲ್ಕಗಳಲ್ಲಿ ಹಲವು ಸೇವೆಗಳ ಶುಲ್ಕಗಳನ್ನು ದ್ವಿಗುಣಗೊಳಿಸಲಾಗಿದ್ದು, ವೈದ್ಯಕೀಯ ಸೇವಾ ಶುಲ್ಕದಲ್ಲಿ ಗಣನೀಯ ಪರಿಷ್ಕರಣೆ ಮಾಡಲಾಗಿದೆ ಮತ್ತು ಇಲಾಖೆಯ ನಿರ್ದೇಶನದಂತೆ ತಕ್ಷಣವೇ ಜಾರಿಗೊಳಿಸಲಾಗುವುದು. ಮಂಗಳವಾರ ಇಲಾಖಾ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಹೊಸ ದರಗಳನ್ನು ಅಂತಿಮಗೊಳಿಸಲಾಯಿತು ಎಂದು ತಿಳಿದುಬಂದಿದೆ.

ಒಪಿಡಿ ನೋಂದಣಿ ಶುಲ್ಕ 10 ರೂ.ನಿಂದ 20 ರೂ.ಗೆ ಏರಿಕೆಯಾಗಿದ್ದು, ಅದೇ ರೀತಿ ಒಳರೋಗಿಗಳ ಸೇವೆಯಲ್ಲಿ ಗಣನೀಯ ಏರಿಕೆ ಕಾಣಲಿದ್ದು, ಪ್ರವೇಶ ಶುಲ್ಕ 25 ರಿಂದ 50 ರೂ.ಗೆ ಏರಿಕೆಯಾಗಿದೆ. ಈ ಹಿಂದೆ 25 ರೂ.ಗಳಿದ್ದ ವಾರ್ಡ್ ಶುಲ್ಕವನ್ನು 50 ರೂ.ಗೆ ದ್ವಿಗುಣಗೊಳಿಸಲಾಗಿದೆ.

ಡಯಾಗ್ನೋಸ್ಟಿಕ್ ಸೇವೆಗಳ ವೆಚ್ಚವು ಹೊಸ ದರ ರಚನೆಯಿಂದ ಪ್ರಭಾವಿತವಾಗಿದ್ದು, ಈ ಹಿಂದೆ ರೂ 70 ರಷ್ಟಿದ್ದ ರಕ್ತ ಪರೀಕ್ಷೆಯ ಶುಲ್ಕವು ರೂ 120 ಕ್ಕೆ ಏರಿದೆ. ಒಟ್ಟಾರೆಯಾಗಿ, ವಿವಿಧ ಸೇವೆಗಳಾದ್ಯಂತ 10% ರಿಂದ 30% ವರೆಗೆ ಹೆಚ್ಚಳವು ಈ ಆರೋಗ್ಯ ಸೌಲಭ್ಯಗಳಲ್ಲಿ ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚವನ್ನು ಪ್ರತಿಬಿಂಬಿಸುತ್ತದೆ.

government hospitals in Karnataka
Bengaluru: 4 ವರ್ಷಗಳಲ್ಲಿ ರಸ್ತೆ ಅಪಘಾತ, ಸಾವು-ನೋವಿನ ಪ್ರಮಾಣ ಹೆಚ್ಚಳ!

ಈ ಶುಲ್ಕ ಬದಲಾವಣೆಗಳು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ, ವಿಶೇಷವಾಗಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI) ಅಡಿಯಲ್ಲಿ ಶುಲ್ಕಗಳನ್ನು ಪ್ರಮಾಣೀಕರಿಸುವ ವಿಶಾಲ ಪ್ರಯತ್ನದ ಭಾಗವಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು TNIE ಗೆ ತಿಳಿಸಿದ್ದಾರೆ.

ಆಸ್ಪತ್ರೆಯ ನಿರ್ವಾಹಕರು ತಮ್ಮ ದರ ಪಟ್ಟಿಗಳನ್ನು ನವೀಕರಿಸಲು ಮತ್ತು ಬದಲಾವಣೆಗಳನ್ನು ತಕ್ಷಣವೇ ಇ-ಹಾಸ್ಪಿಟಲ್ ಸಾಫ್ಟ್‌ವೇರ್ ವ್ಯವಸ್ಥೆಯಲ್ಲಿ ಪ್ರತಿಬಿಂಬಿಸುವಂತೆ ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆಯು ಆರೈಕೆಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ಅಗತ್ಯವಿರುವ ಹೆಚ್ಚಳವನ್ನು ಸಮರ್ಥಿಸಿದ್ದರೂ, ಪರಿಷ್ಕರಣೆಗಳು ಅನೇಕ ರೋಗಿಗಳಿಗೆ ಹೊರೆಯಾಗುತ್ತವೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದವರು ಕೈಗೆಟುಕುವ ಚಿಕಿತ್ಸೆಗಾಗಿ ಈ ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com