ವಕ್ಫ್ ವಿರುದ್ಧ ಸಿಡಿದೆದ್ದ BJP: 'ನಮ್ಮ ಭೂಮಿ, ನಮ್ಮ ಹಕ್ಕು' ಘೋಷಣೆಯಡಿ ರಾಜ್ಯಾದ್ಯಂತ ಪ್ರತಿಭಟನೆ ಆರಂಭ

ಕೋಲಾರದಿಂದ ಮಂಗಳೂರಿನವರೆಗೆ, ಬೆಂಗಳೂರಿನಿಂದ ವಿಜಯಪುರದವರೆಗ ವಕ್ಫ್ ವಿವಾದ ವಿರೋಧಿಸಿ ಪ್ರತಿಭಟನೆಗಳಿದಿದೆ. ಕೂಡಲೇ ಗೆಜೆಟ್ ನೋಟಿಫಿಕೇಷನ್ ರದ್ದು ಮಾಡಬೇಕೆಂದು ಆಗ್ರಹಿಸಿದೆ.
ಮಂಡ್ಯದಲ್ಲಿ ನಡೆದ ಬಿಜೆಪಿ ಪ್ರತಿಭಟನೆ
ಮಂಡ್ಯದಲ್ಲಿ ನಡೆದ ಬಿಜೆಪಿ ಪ್ರತಿಭಟನೆ
Updated on

ಬೆಂಗಳೂರು: ವಕ್ಫ್ ನೋಟಿಸ್​ಗಳ ವಿರುದ್ಧ ಸಿಡಿದೆದ್ದಿರುವ ಬಿಜೆಪಿ, ರಾಜ್ಯದಾದ್ಯಂತ ‘ನಮ್ಮ ಭೂಮಿ, ನಮ್ಮ ಹಕ್ಕು ಘೋಷಣೆಯಡಿ’ ಪ್ರತಿಭಟನೆ ಆರಂಭಿಸಿದೆ.

ಕೋಲಾರದಿಂದ ಮಂಗಳೂರಿನವರೆಗೆ, ಬೆಂಗಳೂರಿನಿಂದ ವಿಜಯಪುರದವರೆಗ ವಕ್ಫ್ ವಿವಾದ ವಿರೋಧಿಸಿ ಪ್ರತಿಭಟನೆಗಳಿದಿದೆ. ಕೂಡಲೇ ಗೆಜೆಟ್ ನೋಟಿಫಿಕೇಷನ್ ರದ್ದು ಮಾಡಬೇಕೆಂದು ಆಗ್ರಹಿಸಿದೆ.

ಶುಕ್ರವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಬಿಜೆಪಿ ನಾಯಕರು, ರೈತ ವಿರೋಧಿ ಸಚಿವ ಜಮೀರ್ ಅಹಮ್ಮದ್ ಖಾನ್ ವಜಾಗೊಳಿಸಿ, ಅಲ್ಪಸಂಖ್ಯಾತರ ಓಲೈಕೆಗಾಗಿ ರೈತರ ಬದುಕಿಗೆ ಕೊಳ್ಳೆ ಇಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧಿಕ್ಕಾರ, ಮಠ, ಮಂದಿರ, ಅನ್ನದಾತರ ಜಾಗಕ್ಕೂ ಬೇಲಿ ಹಾಕಿದ ವಕ್ಫ್ ಗೆ ಧಿಕ್ಕಾರ ಎನ್ನುವ ಬಿತ್ತಿ ಫಲಕಗಳನ್ನು ಪ್ರದರ್ಶಿಸಿದರು. ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ, ಡಿಸಿ ಕಚೇರಿ ಎದುರಿನ ರಸ್ತೆಯಲ್ಲಿ ಧರಣಿ ಹಮ್ಮಿಕೊಂಡರು.

ಮಂಡ್ಯದಲ್ಲಿ ನಡೆದ ಬಿಜೆಪಿ ಪ್ರತಿಭಟನೆ
ವಿಜಯೇಂದ್ರ ನೇತೃತ್ವದಲ್ಲೇ ವಕ್ಫ್ ಅನ್ಯಾಯದ ವಿರುದ್ಧ ಹೋರಾಟ; BJP 4ನೇ ತಂಡಕ್ಕೆ ಅವಕಾಶ ಬೇಡ; ದೆಹಲಿ ವರಿಷ್ಠರ ಭೇಟಿಗೆ ನಿರ್ಧಾರ

ಅಶೋಕ ಮಾತನಾಡಿ, ವಕ್ಫ್ ಬೋರ್ಡ್ ನೋಟೀಸ್ ಜಾರಿ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಜನ ದಂಗೆ ಏಳುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನವಾಗಿದ್ದಾರೆ. ಸಣ್ಣ ರೈತರ ಜಮೀನುಗಳನ್ನು ಕಿತ್ತುಕೊಳ್ಳುವುದು ಅವರಿಗೆ ಸಾಮಾನ್ಯ ಸಮಸ್ಯೆಯಾಗಿದೆ ಎಂದು ಕಿಡಿಕಾರಿದರು.

ಸರ್ಕಾರ ಆರೋಪವನ್ನು ನಿರಾಕರಿಸುತ್ತಿದೆ, ಆದರೆ, ರೈತರು, ಮಠಾಧೀಶರು ಮತ್ತು ಜನರೇ ಕೆ ಪ್ರತಿಭಟನೆಗೆ ಬರುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಅಲ್ಪಸಂಖ್ಯಾತ ಸಮುದಾಯದವರನ್ನು ಓಲೈಸುವ ಕಾರ್ಯದಲ್ಲಿ ನಿರತವಾಗಿದೆ, ಸಮಾಜ ವಿರೋಧಿ ಚಟುವಟಿಕೆಗಳೂ ಹೆಚ್ಚಾಗಿವೆ. ಬಿಜೆಪಿ ಆಡಳಿತದಲ್ಲಿ ನಿಯಂತ್ರಣದಲ್ಲಿದ್ದ ನಕ್ಸಲ್ ಚಟುವಟಿಕೆಗಳು ಕರ್ನಾಟಕದಲ್ಲಿ ಮತ್ತೆ ಆರಂಭವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವುದು ನಕ್ಸಲ್ ಚಟುವಟಿಕೆ ಮತ್ತು 'ಲವ್ ಜಿಹಾದ್'ನಲ್ಲಿ ತೊಡಗಿರುವವರಿಗೆ ಉತ್ತಮ ವಾತಾವರಣ ನಿರ್ಮಾಣವಾದಂತಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ವಕ್ಫ್ ಮಂಡಳಿಯು 400 ವರ್ಷಗಳಷ್ಟು ಹಳೆಯದಾದ ದೇವಾಲಯದ ಮೇಲೆ ಹಕ್ಕು ಸಾಧಿಸಿದೆ ಎಂದು ವಾಗ್ದಾಳಿ ನಡೆಸಿದರು.

ಬಳಿಕ ಮಾತನಾಡಿದ ಶೋಭಾ ಕರಂದ್ಲಾಜೆಯವರು, ಸ್ವಾತಂತ್ರ್ಯ ಪೂರ್ವದಲ್ಲಿ ಕೇವಲ 10,000ಗಳಷ್ಟಿದ್ದ ವಕ್ಫ್ ಆಸ್ತಿಗಳು, ಈಗ 9.5 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com