Bengaluru: ಕಾಮುಕರ ಹಾವಳಿ.. ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ 'ಬ್ಯಾಡ್ ಟಚ್', ಬೈಕರ್ ಬಂಧನ!

ಕಾಮುಕನ ಕೃತ್ಯದ ಸಿಸಿಟಿವಿ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಸಿಲಿಕಾನ್ ಸಿಟಿ ಮಂದಿ ಬೆಚ್ಚಿ ಬೀಳುವಂತೆ ಮಾಡಿದೆ.
Bengaluru Woman face bad touch
ಯುವತಿಯ ಅಸಭ್ಯವಾಗಿ ಸ್ಪರ್ಶಿಸಿದ ಬೈಕರ್
Updated on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಕಾಮುಕರ ಹಾವಳಿ ವರದಿಯಾಗಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ಅಸಭ್ಯವಾಗಿ ಮುಟ್ಟಿದ ಘಟನೆ ವರದಿಯಾಗಿದೆ.

ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಈ ಘಟನೆ ವರದಿಯಾಗಿದ್ದು, ರಸ್ತೆಯಲ್ಲಿ ಕತ್ತಲಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬೈಕ್​ನಲ್ಲಿ ಬಂದ ಕಾಮುಕನೊಬ್ಬ ಬ್ಯಾಡ್ ಟಚ್ ಮಾಡಿ ಪರಾರಿಯಾಗಿದ್ದಾನೆ.

ಕಾಮುಕನ ಕೃತ್ಯದ ಸಿಸಿಟಿವಿ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಸಿಲಿಕಾನ್ ಸಿಟಿ ಮಂದಿ ಬೆಚ್ಚಿ ಬೀಳುವಂತೆ ಮಾಡಿದೆ. ನವೆಂಬರ್ 11 ರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Bengaluru Woman face bad touch
Watch | ಕಲಬುರಗಿ ಪೊಲೀಸರ ತ್ವರಿತ ಕಾರ್ಯಾಚರಣೆ; ಅಪಹೃತ ನವಜಾತ ಶಿಶು ರಕ್ಷಣೆ

ಸಿಸಿಟಿವಿಯಲ್ಲಿ ಕೃತ್ಯ ಸೆರೆ; ಬೈಕರ್ ಬಂಧನ

ಇನ್ನು ಕಾಮುಕನ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ರಾಮಮೂರ್ತಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೈಕ್ ಸವಾರ ಅರುಣ್ ಎಂಬಾತನೇ ಅಸಭ್ಯ ವರ್ತನೆ ತೋರಿದ್ದು, ಈ ಬಗ್ಗೆ ರಾಮಮೂರ್ತಿ ನಗರ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ಯುವತಿ ದೂರಿನ ಆಧಾರದ ಮೇಲೆ ಆರೋಪಿ ಅರುಣ್​ನನ್ನು ಪೊಲೀಸರು ಬಂಧಿಸಿದ್ದು, ದೂರು ನೀಡಿದ ಎರಡೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದೇ ಮೊದಲೇನಲ್ಲ

ಇನ್ನು ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ಕಾಮುಕರ ಅಟ್ಟಹಾಸ ಇದೇ ಮೊದಲೇನಲ್ಲ., ಇತ್ತೀಚೆಗೆ ಮಹಿಳಾ ಇನ್​ಫ್ಲುಯೆನ್ಸರ್ ಒಬ್ಬರು ವ್ಲಾಗ್ ಮಾಡುವಾಗ ಬಾಲಕನೊಬ್ಬ ಆಕೆಯ ಎದೆಯನ್ನು ಸ್ಪರ್ಶಿಸಿ ಓಡಿ ಹೋದ ಘಟನೆ ಇತ್ತೀಚೆಗೆ ಬಿಟಿಎಂ ಲೇಔಟ್​ನಲ್ಲಿ ನಡೆದಿತ್ತು. ಅಂತೆಯೇ ಬೆಂಗಳೂರಿನ ಕೋಣನಕುಂಟೆಯ (Konanakunte) ಕೃಷ್ಣಾ ನಗರದಲ್ಲಿ ಮನೆ ಬಳಿ ವಾಕಿಂಗ್‌ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com