ಬೆಂಗಳೂರು: ಬಿಎಂಟಿಸಿ ವೋಲ್ವೋ ಬಸ್ ನಲ್ಲಿ ಪ್ರಯಾಣಿಕನೊಬ್ಬ ಹುಚ್ಚಾಟ ಮೆರೆದಿದ್ದು ಬಸ್ ನಿರ್ವಾಹಕನ ಹೊಟ್ಟೆಗೆ ಚಾಕು ಇರಿದಿದ್ದಾನೆ.
ವೈಟ್‌ಫೀಲ್ಡ್‌ನ ಐಟಿಪಿಎಲ್ ಸಮೀಪದ ವೈದೇಹಿ ಆಸ್ಪತ್ರೆ ಜಂಕ್ಷನ್ ಬಳಿ ಘಟನೆ ನಡೆದಿದೆ. ಸುಮಾರು 7 ಗಂಟೆ ಸುಮಾರಿಗೆ ಜಾರ್ಖಂಡ್ ಮೂಲದ ಆರೋಪಿ 25 ವರ್ಷದ ಹರ್ಷ ಸಿನ್ಹಾ ಬಿಎಂಟಿಸಿ 13ನೇ ಘಟಕದ ವೋಲ್ವೋ ಬಸ್ ನಿರ್ವಾಹಕ 45 ವರ್ಷದ ಯೋಗೇಶ್ ಗೆ ಚಾಕು ಇರಿದಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೂರಿ ಇರಿತದಿಂದ ಗಾಯಗೊಂಡಿರುವ ಯೋಗೇಶ್ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಂತರ ಆರೋಪಿ ಹರ್ಷ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಹರ್ಷ ಸಿನ್ಹಾ ಬೆಂಗಳೂರು ಟೆಲಿಪರ್ಫಾಮೆನ್ಸ್ ಹೆಸರಿನ ಬಿಪಿಒ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ತಿಂಗಳು ಈತನನ್ನು ಕಂಪನಿ ಕೆಲಸದಿಂದ ತೆಗೆದು ಹಾಕಿತ್ತು ಎಂದು ಹೇಳಲಾಗಿದೆ. ಈ ಸಂಬಂಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಕೆಲಸ ಕಳೆದುಕೊಂಡಿದ್ದರಿಂದ ಹರ್ಷ ಮಾನಸಿಕ ವರ್ತನೆ ಮೇಲೆ ನಿಗಾ ಕಳೆದುಕೊಂಡು ಹೀಗೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
Advertisement