ಬೆಂಗಳೂರು: ಖಿನ್ನತೆ ನಿವಾರಕ ಮಾತ್ರೆ ಸೇವಿಸಿ ಮಚ್ಚು ಬೀಸಿ ರಂಪಾಟ ಮಾಡಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಯುವಕರು ಮಚ್ಚು ಬೀಸುವ ಮತ್ತು ಜನರ ಮೇಲೆ ಹಲ್ಲೆ ಮಾಡುವ ಮೂಲಕ ನಿವಾಸಿಗಳು ಭಯಭೀತರಾಗಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ.
ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧ ಪೂರೈಸಿದ್ದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಔಷಧಾಲಯವೊಂದಕ್ಕೆ ಸೀಲ್ ಮಾಡಲಾಗಿದೆ. ಕಳೆದ ವಾರ ಈ ಘಟನೆ ನಡೆದಿದೆ. ಆರೋಪಿಗಳಾದ ಸೈಯದ್, ಉಸ್ಮಾನ್ ಮತ್ತು ಸಲ್ಮಾನ್ ಅವರನ್ನು ಕರೆತಂದು ಅವರ ಫೋನ್ ಪರಿಶೀಲಿಸಿದಾಗ ಅದರಲ್ಲಿ ಒಂದು ರೀಲ್ಸ್ ಪತ್ತೆಯಾಗಿದೆ.
ಆ ರೀಲ್ಸ್ ನಲ್ಲಿ ಅವರು ಬಿಳಿ ಮಾತ್ರೆ ತೆಗೆದುಕೊಳ್ಳುತ್ತಿರುವುದನ್ನು ಗಮನಿಸಿರುವುದಾಗಿ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಿ ದೇವರಾಜ್ ಪಿಟಿಐಗೆ ತಿಳಿಸಿದ್ದಾರೆ. ಆರೋಪಿ ವಿಚಾರಣೆ ವೇಳೆ ಫಾರ್ಮಸಿಸ್ಟ್ ಔಷಧ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
Advertisement