ಉತ್ತರ ಕನ್ನಡದಲ್ಲಿ 100ಕ್ಕೂ ಹೆಚ್ಚು ಪ್ರವಾಸಿಗರ ಸಾವು: ಸುರಕ್ಷತಾ ಕ್ರಮಕ್ಕೆ ಪೊಲೀಸರ ಆಗ್ರಹ

ಪ್ರವಾಸಕ್ಕೆ ಬರುವ ಪ್ರವಾಸಿಗರು ನೀರಿನಲ್ಲಿ ಮುಳುಗುವುದು, ಆಳ ಪ್ರದೇಶಗಳಲ್ಲಿ ಬೀಳುವ ಘಟನೆಗಳು ಪದೇ ಪದೇ ಸಂಭವಿಸುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕಾರವಾರ (ಉತ್ತರ ಕನ್ನಡ): ಉತ್ತರ ಕನ್ನಡದ ಪ್ರವಾಸಿ ತಾಣಗಳಲ್ಲಿ ಕಳೆದ ಐದು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಪ್ರವಾಸಿಗರು ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ)ಗಳು ಪತ್ರ ಬರೆದು, ಆಗ್ರಹಿಸಿದ್ದಾರೆ.

ಪ್ರವಾಸಕ್ಕೆ ಬರುವ ಪ್ರವಾಸಿಗರು ನೀರಿನಲ್ಲಿ ಮುಳುಗುವುದು, ಆಳ ಪ್ರದೇಶಗಳಲ್ಲಿ ಬೀಳುವ ಘಟನೆಗಳು ಪದೇ ಪದೇ ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಪ್ರವಾಸೋದ್ಯಮ ಅಧಿಕಾರಿಗಳ ಸಭೆ ಕರೆದು, ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಎಸ್ಪಿ ಎಂ.ನಾರಾಯಣ್ ಅವರು ಅಕ್ಟೋಬರ್ 9, 2024 ರಂದು ಡಿಸಿಗೆ ಪತ್ರ ಬರೆದಿದ್ದಾರೆ.

ಸಂಗ್ರಹ ಚಿತ್ರ
ಉತ್ತರ ಕನ್ನಡ: ಕಾಳಿ ನದಿ ದ್ವೀಪದಲ್ಲಿ ಸಿಲುಕಿಕೊಂಡಿದ್ದ ದನಗಾಹಿ ರಕ್ಷಣೆ

ಉತ್ತರ ಕನ್ನಡದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಜಿಲ್ಲೆಯ ಒಳಗಿನವರು ಮತ್ತು ಹೊರಗಿನವರು ಈ ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಅನೇಕ ಅವಘಡಗಳು ಸಂಭವಿಸುತ್ತಲೇ ಇರುತ್ತವೆ, ವಿಶೇಷವಾಗಿ ನೀರು ಇರುವ ಸ್ಥಳಗಳಲ್ಲಿ ಅವಘಡಗಳು ಹೆಚ್ಚಾಗಿ ಸಂಭವಿಸುತ್ತಿವೆ. 2019 ಮತ್ತು 2024 ರ ನಡುವೆ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರಲ್ಲಿ 107 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2019 ರಲ್ಲಿ 12 ಮಂದಿ, 2020 ರಲ್ಲಿ 15, 2021 ರಲ್ಲಿ 26, 2022 ರಲ್ಲಿ 20, 2023 ರಲ್ಲಿ 22 ಮತ್ತು 2024 ರಲ್ಲಿ 12 ಮಂದಿ ಜೀವ ಕಳೆದುಕೊಂಡಿದ್ದಾರೆ. ಪ್ರವಾಸಿಗರು ನೀರಿಗೆ ಇಳಿದಾಗ ಹೆಚ್ಚಿನ ಅವಘಡಗಳು ಸಂಭವಿಸಿವೆ. ಆಳ ಇರುವ ಪ್ರದೇಶಕ್ಕೆ ತೆರಳಿದಾಗ ಮುಳುಗುತ್ತಿದ್ದಾರೆಂದು ಪತ್ರದಲ್ಲಿ ಗಮನ ಸೆಳೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com