ಕಾವೇರಿ 5ನೇ ಹಂತದಿಂದ ಬೆಂಗಳೂರು ನೀರಿನ ಸಮಸ್ಯೆ ದೂರ: ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಕಾವೇರಿ 5ನೇ ಹಂತ ಲೋಕಾರ್ಪಣೆಗೊಳಿಸಲಿದ್ದು, ಈ ಹಿನ್ನೆಲೆಯಲ್ಲಿ ಡಿಕೆ.ಶಿವಕುಮಾರ್ ಅವರು ಯೋಜನೆ ಮಹತ್ವ ಹಾಗೂ ಅನುಷ್ಠಾನದ ವೇಳೆ ಎದುರಾದ ಸವಾಲುಗಳ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್
Updated on

ಬೆಂಗಳೂರು: ನಗರದ ಹೆಚ್ಚುತ್ತಿರುವ ಜನಸಂಖ್ಯೆಯ ದಾಹವನ್ನು ಇನ್ನೂ 10 ವರ್ಷಗಳವರೆಗೆ ನೀಗಿಸಲು ಕಾವೇರಿ 5 ನೇ ಹಂತದ ನೀರು ಸಹಾಯ ಮಾಡುತ್ತದೆ’ ಎಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಕಾವೇರಿ 5ನೇ ಹಂತ ಲೋಕಾರ್ಪಣೆಗೊಳಿಸಲಿದ್ದು, ಈ ಹಿನ್ನೆಲೆಯಲ್ಲಿ ಡಿಕೆ.ಶಿವಕುಮಾರ್ ಅವರು ಯೋಜನೆ ಮಹತ್ವ ಹಾಗೂ ಅನುಷ್ಠಾನದ ವೇಳೆ ಎದುರಾದ ಸವಾಲುಗಳ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಕಾವೇರಿ 5ನೇ ಹಂತದಿಂದ ಬೆಂಗಳೂರು ನೀರಿನ ಸಮಸ್ಯೆ ದೂರಾಗಲಿದ್ದು, ನೀರಿನ ಬೇಡಿಕೆ ಆಧರಿಸಿ ಕಾವೇರಿ 6ನೇ ಹಂತದ ಅನುಷ್ಠಾನಕ್ಕೆ ತೀರ್ಮಾನ ಕೈಗೊಳ್ಳಲಾಗುವುದು. ಬೆಂಗಳೂರು ಪ್ರಸ್ತುತ 1.4 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಮುಂದಿನ ಐದು ವರ್ಷಗಳಲ್ಲಿ ಇದು 25 ಲಕ್ಷದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಕಾವೇರಿಯಿಂದ ನಗರಕ್ಕೆ ಕುಡಿಯಲು 30 ಟಿಎಂಸಿ ಅಡಿ ನೀರು ಬಳಸಬಹುದು. ಈ ಪೈಕಿ 5ನೇ ಹಂತ ಸೇರಿದಂತೆ 24 ಟಿಎಂಸಿ ಅಡಿ ನೀರನ್ನು ನಗರ ಬಳಸಿಕೊಳ್ಳುತ್ತಿದ್ದು, ಇನ್ನುಳಿದ 6 ಟಿಎಂಸಿ ಅಡಿ ನೀರು ಬಳಕೆ ಮಾಡಿಕೊಳ್ಳಲು ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿಗೆ ಈ ವರೆಗೆ 1,450 ಎಂಎಲ್'ಡಿ ಕಾವೇಲಿ ನೀರನ್ನು ನಗರದ ಮೂರನೇ ಎರಡು ಭಾಗದ ಜನರಿಗೆ ಪೂರೈಕೆ ಮಾಡಲಾಗುತ್ತಿತ್ತು. 5ನೇ ಹಂತದ ಯೋಜನೆಯಿಂದ ಹೆಚ್ಚುವರಿ 775 ಎಂಎಲ್'ಡಿ ನೀರು ಲಭ್ಯವಾಗಲಿದ್ದು, ನಗರದ ಇನ್ನೂ ಶೇ.33ರಷ್ಟು ಜನರಿಗೆ ಅಂದರೆ 50 ಲಕ್ಷ ಜನರಿಗೆ ಕಾವೇರಿ ನೀರು ಲಭ್ಯವಾಗಲಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 2008ರಲ್ಲಿ ಬಿಬಿಎಂಪಿಗೆ ಸೇರ್ಪಡೆಗೊಂಡ 110 ಹಳ್ಳಿಯ 7 ವಿಧಾನಸಭಾ ಕ್ಷೇತ್ರದ ಜನರ ಬಹುದಿನದ ಬೇಡಿಗೆ ಈ ಮೂಲಕ ಈಡೇರಿಸಲಿದೆ.

ಡಿಕೆ.ಶಿವಕುಮಾರ್
ಅಕ್ಟೋಬರ್ 16 ರಂದು ಕಾವೇರಿ 5ನೇ ಹಂತ ಲೋಕಾರ್ಪಣೆ: CM-DCMಗೆ ಆಹ್ವಾನ

ನಗರದ ಹೊರವಲಯಕ್ಕೆ ನೀರು ಪೂರೈಕೆ ವಿಳಂಬಕ್ಕೆ ಕಾರಣಗಳ ಕುರಿತು ಮಾತನಾಡಿ, ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲು, ಭೂಮಾಲೀಕರ ಮನವೊಲಿಸಲು ಹಾಗೂ ಪರಿಹಾರ ಮತ್ತಿತರ ವಿಚಾರಗಳಿಂದ ವಿಳಂಬವಾಗಿದೆ ಎಂದು ತಿಳಿಸಿದರು.

ನಗರದಿಂದ ದೂರವಿರುವ ನದಿಗಳಿಂದ ನೀರು ಪಡೆಯುವ ಯೋಜನೆ ಕುರಿತು ಮಾತನಾಡಿ, ನಮ್ಮ ಮುಂದಿನ ಗಮನವು ನಗರದ ಎಲ್ಲಾ ಕೆರೆಗಳನ್ನು ನದಿ ನೀರಿನಿಂದ ತುಂಬಿಸಿ ಅಂತರ್ಜಲವನ್ನು ಮರುಪೂರಣಗೊಳಿಸುವುದರತ್ತ ಹರಿದಿದೆ. ಸದ್ಯಕ್ಕೆ ನಮ್ಮಲ್ಲಿ 23 ಎಸ್‌ಟಿಪಿಗಳಿದ್ದು, ಕೆರೆಗಳಿಗೆ ಕೊಳಚೆ ನೀರು ಬರದಂತೆ ನೋಡಿಕೊಳ್ಳಲು ಶೀಘ್ರದಲ್ಲೇ ಯೋಜನೆ ರೂಪಿಸಲಾಗುವುದು. ಇದರೊಂದಿಗೆ ನಾವು ಅಭಿಯಾನದ ಮೂಲಕ ಮಳೆನೀರು ಕೊಯ್ಲನ್ನು ಜನಪ್ರಿಯಗೊಳಿಸುತ್ತೇವೆ. ಮುಂದಿನ ಹಂತದ ಕಾವೇರಿ ಯೋಜನೆಗೆ ಈಗ ಚಾಲನೆಯಲ್ಲಿರುವ ಕಾವೇರಿ ಕೊಳವೆ ಪಕ್ಕದಲ್ಲಿ ಹೆಚ್ಚವರಿ ಕೊಳವೆ ಅಳವಡಿಕೆ ಮಾಡಿಕೊಂಡು ನೀರು ತರಲಾಗುವುದು. ಮತ್ತೊಂದು ಕೆಆರ್‌ಎಸ್‌ನಿಂದ ಕೊಳವಣೆ ಅಳವಡಿಕೆ ಮಾಡಿಕೊಂಡು ನೀರು ತರಲಾಗುವುದು, ಈ ಕುರಿತು ಈಗಾಗಲೇ ಯೋಜನೆ ಸಿದ್ಧವಾಗಿದೆ ಎಂದರು.

ಸುಂಕ ಏರಿಕೆ ಅನಿವಾರ್ಯ

ಈಗ ಸಂಗ್ರಹಿಸುತ್ತಿರುವ ನೀರಿನ ದರ ಅತ್ಯಲ್ಪವಾಗಿದ್ದು, ಕಾವೇರಿ ನದಿಯಿಂದ ಬೆಂಗಳೂರಿಗೆ ನೀರು ಹರಿಸುವ ವೆಚ್ಚ ಹೆಚ್ಚಾಗಿದೆ. ದೀರ್ಘಕಾಲದಿಂದ ನೀರಿನ ದರವನ್ನು ಪರಿಷ್ಕರಿಸಿಲ್ಲ. ಇದೀಗ ಸುಂಕವನ್ನು ಹೆಚ್ಚಿಸಬೇಕು. ಚರ್ಚೆಯ ನಂತರ ನಿರ್ಧಾರ ಪ್ರಕಟಿಸಲಾಗುವುದು.

ನಗರದಲ್ಲಿ ನೀರು, ಸಂಚಾರ, ವಿದ್ಯುತ್, ಘನತ್ಯಾಜ್ಯ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಿದ್ದು, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇನೆ. ಸುರಂಗ ರಸ್ತೆ, ಸುರಂಗ ಮಾರ್ಗದಂತಹ ಯೋಜನೆಗಳು ಕನಸು ಕಾಣುವುದಲ್ಲ, ಅದು ಕಾರ್ಯರೂಪಕ್ಕೆ ಬರಬೇಕಿದೆ. ಆದರೆ, ಇದಕ್ಕೆ ಸಮಯ ಬೇಕಾಗುತ್ತದೆ. ಸುರಂಗ ಯೋಜನೆಗಳು ಕಾನೂನು ಮತ್ತು ಆರ್ಥಿಕ ಪರಿಣಾಮಗಳು ಸಂಬಂಧಿಸಿವೆ ಎಂದು ಹೇಳಿದರು.

ಡಿಕೆ.ಶಿವಕುಮಾರ್
ಕಾವೇರಿ 5ನೇ ಹಂತಕ್ಕೆ ಅಕ್ಟೋಬರ್ 16 ರಂದು ಚಾಲನೆ; ಮೈಸೂರು ದೀಪಾಲಂಕಾರ ಅವಧಿ ವಿಸ್ತರಣೆ: DK Shivakumar

ನಗರದಲ್ಲಿ ಸಂಚಾರ ದಟ್ಟಣೆ ಮತ್ತು ಅದನ್ನು ಸರಾಗಗೊಳಿಸುವ ಕ್ರಮಗಳ ಕುರಿತು ಮಾತನಾಡಿ, 2008ರಲ್ಲಿ ಪೆರಿಫೆರಲ್ ರಿಂಗ್ ರೋಡ್ ಯೋಜನೆಗೆ ಚಾಲನೆ ನೀಡಲಾಗಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಅವರು ಯೋಜನೆಯನ್ನು ಪ್ರಾರಂಭಿಸಿದ್ದರೆ, ಬಹಳ ಹಿಂದೆಯೇ ಪೂರ್ಣಗೊಳ್ಳುತ್ತಿತ್ತು. ಇದಕ್ಕೆ ಸರಿಯಾದ ಯೋಜನೆ ಅಗತ್ಯವಿದೆ. ಸುರಂಗ ರಸ್ತೆ ಯೋಜನೆಗೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಕಾಲಾವಕಾಶ ಬೇಕು ಎಂದರು.

ಇದೇ ವೇಳೆ ಬೆಂಗಳೂರು-ಮೈಸೂರು ನೈಸ್ ರಸ್ತೆ ವಿಸ್ತರಣೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿದ ಶಿವಕುಮಾರ್, ಇದಕ್ಕೆ ಅವಕಾಶ ನೀಡಿದರೆ ರಾಮನಗರ, ಚನ್ನಪಟ್ಟಣ, ಕನಕಪುರ, ಶ್ರೀರಂಗಪಟ್ಟಣ ಮತ್ತು ಮಂಡ್ಯ ಅಭಿವೃದ್ಧಿ ಹೊಂದುತ್ತಿತ್ತು ಎಂದರು.

ಅನೇಕ ಸರ್ಕಾರಿ ಅಧಿಕಾರಿಗಳಿಗೆ ದೇವೇಗೌಡರ ಕುಟುಂಬ ಕುರಿತು ಹೆದರುತ್ತಿದ್ದಾರೆ. ಗೌಡರ ಪುತ್ರ ಬಾಲಕೃಷ್ಣ ಗೌಡ ಅವರು ಬಿಡದಿ ಮತ್ತು ದೇವಗೆರೆಯಲ್ಲಿ ಜಮೀನು ಹೊಂದಿದ್ದಾರೆ. ಇದು ನೈಸ್ ಯೋಜನೆಯ ಮೇಲೆ ಪರಿಣಾಮ ಬೀರುತ್ತಿದೆ.

ನಾನು ನೈಸ್ ರಸ್ತೆಯನ್ನು ಮೈಸೂರಿನವರೆಗೆ ವಿಸ್ತರಿಸುವ ಪರವಾಗಿದ್ದೇನೆ. ಈ ರಸ್ತೆಯಲ್ಲಿ ಪಟ್ಟಣಗಳು ​​ರಚನೆಯಾಗಬೇಕಿದ್ದು, ಇದರಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com