BMRCL: ಉದ್ದೇಶಿತ ಪಾರ್ಕಿಂಗ್ ನೀತಿಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಉಂಟಾಗುವ ಕಿರಿಕಿರಿ ತಪ್ಪಿಸುವ ಸಲುವಾಗಿ ಬಿಎಂಆರ್‌ಸಿಎಲ್ ರೂಪಿಸಿದ್ದ ನೂತನ ಪಾರ್ಕಿಂಗ್ ನೀತಿಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
Representative image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಉಂಟಾಗುವ ಕಿರಿಕಿರಿ ತಪ್ಪಿಸುವ ಸಲುವಾಗಿ ಬಿಎಂಆರ್‌ಸಿಎಲ್ ರೂಪಿಸಿದ್ದ ನೂತನ ಪಾರ್ಕಿಂಗ್ ನೀತಿಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ಜೊತೆಗೆ ಪಾರ್ಕಿಂಗ್ ಸಮಸ್ಯೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಮಸ್ಯೆ ಬಗೆಹರಿಸಲು ಬಿಎಂಆರ್‌ಸಿಎಲ್ ಹೊಸ ಪಾರ್ಕಿಂಗ್ ನೀತಿ ಜಾರಿಗೆ ತರಲು ಮುಂದಾಗಿದ್ದು, ಇದಕ್ಕಾಗಿ ಜನರಿಂಗ ಆಕ್ಷೇಪಣೆಗೆ ಆಹ್ವಾನಿಸಿತ್ತು.

ಅಕ್ಟೋಬರ್ 18ರವರೆಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಜನರಿಗೆ ಅವಕಾಶ ನೀಡಿತ್ತು. ಆದರೆ, ಈವರೆಗೂ ಕೇವಲ 15 ಮಂದಿ ಮಾತ್ರ ಪ್ರತಿಕ್ರಿಯೆ ನೀಡಿದ್ದಾರೆಂದು ತಿಳಿದುಬಂದಿದೆ.

ಬಿಎಂಆರ್‌ಸಿಎಲ್ ಬೆಂಗಳೂರು ನಗರದಲ್ಲಿ ಹಲವು ನಮ್ಮ ಮೆಟ್ರೋ ನಿಲ್ದಾಣದ ಸುತ್ತಲೂ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ಇದರ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡಿದೆ. ಆದರೆ ನಮ್ಮ ಮೆಟ್ರೋ ಪ್ರಯಾಣಿಕರಲ್ಲದವರು ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ಮೆಟ್ರೋದಲ್ಲಿ ಸಂಚಾರ ನಡೆಸುವ ಜನರಿಗೆ ಪಾರ್ಕಿಂಗ್ ಸೌಲಭ್ಯಗಳು ಸಿಗದಂತೆ ಆಗುತ್ತಿದೆ. ಈ ಕುರಿತು ಹಲವು ದೂರುಗಳು ಸಹ ಸಲ್ಲಿಕೆಯಾಗುತ್ತಿದ್ದು, ಹೀಗಾಗಿ ಬಿಎಂಆರ್‌ಸಿಎಲ್ ಹೊಸ ಪಾರ್ಕಿಂಗ್ ನೀತಿ ರೂಪಿಸಿದೆ.

ನೂತನ ಪಾರ್ಕಿಂಗ್ ನೀತಿಯಲ್ಲಿ ಬಿಎಂಆರ್‌ಸಿಎಲ್‌ ನಮ್ಮ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಲಾಟ್‌ನಲ್ಲಿ ಮೆಟ್ರೋ ಪ್ರಯಾಣಿಕರು ಮಾತ್ರ ವಾಹನ ನಿಲ್ಲಿಸುವಂತೆ ನಿಯಮವನ್ನು ಪರಿಚಯಿಸಲು ಮುಂದಾಗಿದೆ.

ಹೊಸ ಪಾರ್ಕಿಂಗ್ ನೀತಿಯನ್ನು ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆ ಇರಿಸಲಾಗುವುದು, ಜೊತೆಗೆ ಮುಖ್ಯಮಂತ್ರಿಗಳ ಒಪ್ಪಿಗೆಯೂ ಬೇಕಾಗಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿ ಮುನಿವೀರ ಗೌಡ ಅವರು ಹೇಳಿದ್ದಾರೆ.

Representative image
ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್, ವಾಣಿಜ್ಯ ಸಂಕೀರ್ಣ ನಿರ್ಮಾಣ?

ಸೈಕ್ಲಿಂಗ್ ಬಳಕೆಯನ್ನು ಉತ್ತೇಜಿಸಲು ಸೈಕಲ್‌ಗಳಿಗೆ ಶೂನ್ಯ ಪಾರ್ಕಿಂಗ್ ಶುಲ್ಕವನ್ನು ಹೊಸ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಸ್ತುತ, ಬಿಎಂಆರ್‌ಸಿಎಲ್ ಒಂದು ಗಂಟೆಗೆ ಸೈಕ್ಲಿಂಗ್ ಶುಲ್ಕವಾಗಿ ರೂ 1 ಮತ್ತು ಪೂರ್ಣ ದಿನಕ್ಕೆ ರೂ 10 ವಿಧಿಸುತ್ತಿದೆ. ಬಿಎಂಆರ್‌ಸಿಎಲ್‌ ಒದಗಿಸಿದ ಪಾರ್ಕಿಂಗ್‌ ಸ್ಥಳವನ್ನು ಮೆಟ್ರೋ ಬಳಕೆದಾರರು ಮಾತ್ರ ಬಳಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳುವುದು.

ಪಾರ್ಕಿಂಗ್‌ ಸ್ಥಳಗಳಲ್ಲಿ ಪ್ರಯಾಣಿಕರ ಮತ್ತು ಅವರ ವಾಹನಗಳ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳುವುದು. ನಿರ್ದಿಷ್ಟ ಬಳಕೆದಾರ ಗುಂಪುಗಳಿಗೆ ಪಾರ್ಕಿಂಗ್‌ ಕಾಯ್ದಿರಿಸುವುದು. ಪಾರ್ಕಿಂಗ್‌ ಶುಲ್ಕ ಜಾರಿ ಮತ್ತು ಮೇಲ್ವಿಚಾರಣೆ, ಸ್ಮಾರ್ಟ್‌ ತಂತ್ರಜ್ಞಾನದ ಬಳಕೆಯ ಮೂಲಕ ಪಾರ್ಕಿಂಗ್‌ ಜಾಗದ ಪರಿಣಾಮಕಾರಿ ನಿರ್ವಹಣೆ ಮಾಡುವುದು, ದರದ ಚಾರ್ಟ್‌ ಅನ್ನು ಪಾರ್ಕಿಂಗ್‌ ಲಾಟ್‌ನ ಪ್ರವೇಶದಲ್ಲಿ ಪ್ರದರ್ಶಿಸುವುದು, ಗುತ್ತಿಗೆದಾರರು ಪಾರ್ಕಿಂಗ್‌ಗೆ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ.

ಕಾರ್ಯಾಚರಣೆಯ ಸಮಯ ಮೀರಿ ವಾಹನಗಳನ್ನು ನಿಲ್ಲಿಸಿದರೆ ಮೇಲ್ವಿಚಾರಣೆ ಮಾಡಬೇಕು. ವಾಹನ 3 ದಿನಗಳಿಗಿಂತ ಹೆಚ್ಚು ಕಾಲ ನಿಲ್ಲಿಸಿದರೆ, ಪಾರ್ಕಿಂಗ್‌ ಪರವಾನಗಿದಾರರು ಸೂಕ್ತ ಕ್ರಮ ಕೈಗೊಳ್ಳಬೇಕು. ವಾಹನ ಮಾಲೀಕರಿಗೆ ನೋಟಿಸ್‌ ನೀಡುವ ಮೂಲಕ ಅದನ್ನು ಪಾರ್ಕಿಂಗ್‌ ಸ್ಥಳದಿಂದ ತೆಗೆಸಬೇಕೆಂಬುದು, ಯಾವುದೇ ಮೆಟ್ರೋ ನಿಲ್ದಾಣದ 150 ಮೀಟರ್‌ಗಳ ವ್ಯಾಪ್ತಿಯಲ್ಲಿ ರಸ್ತೆ ಸಾರ್ವಜನಿಕ ಪಾರ್ಕಿಂಗ್ ಅನ್ನು ನಿಷೇಧಿಸುವ ನೀತಿಯನ್ನು ಬಿಎಂಆರ್‌ಸಿಎಲ್ ರೂಪಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com