ಫಿನ್ ಟೆಕ್ ವಲಯದ ಉತ್ತೇಜನಕ್ಕೆ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ; ರಾಜ್ಯ ಸರ್ಕಾರದ ಘೋಷಣೆ

ಐದು ವರ್ಷಗಳ ಅವಧಿಯಲ್ಲಿ ಈ ಕೇಂದ್ರದ ಕಾರ್ಯಾಚರಣೆಗಳಿಗಾಗಿ ಅಂದಾಜು ಒಟ್ಟು 13. 24 ಕೋಟಿ ರೂ. ಮೀಸಲು ಇಡಲಾಗಿದೆ. ಇನ್ ಕ್ಯೂಬೇಷನ್ ಮತ್ತು ವೇಗವರ್ಧಕ ಕಾರ್ಯಕ್ರಮದ ವೆಚ್ಚವನ್ನು ರೂ. 8. 19 ಕೋಟಿ ಎಂದು ಅಂದಾಜಿಸಲಾಗಿದೆ
Priyank kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಫಿನ್‌ಟೆಕ್‌ ವಲಯದ ಉತ್ತೇಜನಕ್ಕಾಗಿ ನಗರದ IIMನಲ್ಲಿ NSRCEL ಸಹಭಾಗಿತ್ವದಲ್ಲಿ ಮೊದಲ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಸ್ಥಾಪಿಸುವುದಾಗಿ ರಾಜ್ಯ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ- ತಂತ್ರಜ್ಞಾನ ಇಲಾಖೆಯು ಘೋಷಿಸಿದೆ.

ಕರ್ನಾಟಕದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಫಿನ್ ಟೆಕ್ ಉದ್ಯಮಶೀಲ ಪರಿಸರ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ನಾವೀನ್ಯತೆಗಳನ್ನು ಸುಗಮಗೊಳಿಸುವ ಮತ್ತು ಹಣಕಾಸು ತಂತ್ರಜ್ಞಾನ ವಲಯದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ವ್ಯಾಪಕ ಬೆಂಬಲ ನೀಡುವುದರೊಂದಿಗೆ ಫಿನ್‌ಟೆಕ್‌ ವಲಯದ ಬೆಳವಣಿಗೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಇಲಾಖೆ ಸೋಮವಾರ ಹೊರಡಿಸಿರುವ ವಿಡಿಯೋ ಆದೇಶದಲ್ಲಿ ತಿಳಿಸಿದೆ.

ಐದು ವರ್ಷಗಳ ಅವಧಿಯಲ್ಲಿ ಈ ಕೇಂದ್ರದ ಕಾರ್ಯಾಚರಣೆಗಳಿಗಾಗಿ ಅಂದಾಜು ಒಟ್ಟು 13. 24 ಕೋಟಿ ರೂ. ಮೀಸಲಿಡಲಾಗಿದೆ. ಇನ್ ಕ್ಯೂಬೇಷನ್ ಮತ್ತು ವೇಗವರ್ಧಕ ಕಾರ್ಯಕ್ರಮದ ವೆಚ್ಚ ರೂ. 8.19 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಕೌಶಲ್ಯ ಮತ್ತು ತರಬೇತಿ ಕಾರ್ಯಕ್ರಮಗಳಿಗೆ 5. 04 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದೆ.

ಐಐಎಂನ NSRCEL (ನಡತೂರ್ ಎಸ್ ರಾಘವನ್ ಸೆಂಟರ್ ಫಾರ್ ಎಂಟರ್‌ಪ್ರೆನ್ಯೂರಿಯಲ್ ಲರ್ನಿಂಗ್ ಸಂಸ್ಥೆ ಸೆಂಟರ್ ಆಫ್ ಎಕ್ಸಲೆನ್ಸ್ ಮುನ್ನಡೆಸಲಿದೆ ಎಂದು ಇಲಾಖೆ ಹೇಳಿದೆ. ಈ ಸೆಂಟರ್ ಆಫ್ ಎಕ್ಸಲೆನ್ಸ್ ಕರ್ನಾಟಕವನ್ನು ಭಾರತದ ಫಿನ್‌ಟೆಕ್ ರಾಜಧಾನಿಯಾಗಿ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Priyank kharge
ಕರ್ನಾಟಕ ಸಮಗ್ರ ರಾಜ್ಯ ಬಾಹ್ಯಾಕಾಶ ನೀತಿಯನ್ನು ಪರಿಚಯಿಸಲಿದೆ: ಸಚಿವ ಪ್ರಿಯಾಂಕ್ ಖರ್ಗೆ

ಸ್ಟಾರ್ಟ್‌ಅಪ್‌ಗಳಿಗೆ ಸಮಗ್ರ ಬೆಂಬಲದೊಂದಿಗೆ ಐಐಎಂ ಬೆಂಗಳೂರಿನ ಪರಿಣತಿಯನ್ನು ಬಳಸಿಕೊಳ್ಳುವ ಮೂಲಕ ಫಿನ್‌ಟೆಕ್ ಉದ್ಯಮಗಳ ಬೆಳವಣಿಗೆಯನ್ನು ವೇಗಗೊಳಿಸುವುದು, ಡಿಜಿಟಲ್ ಆರ್ಥಿಕತೆಯ ಬೇಡಿಕೆಗಳನ್ನು ಪೂರೈಸಲು ಸಜ್ಜಾದ ನುರಿತ ಉದ್ಯೋಗಿಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ. ಭವಿಷ್ಯದಲ್ಲಿ ಹಣಕಾಸಿನಲ್ಲಿ ಹೂಡಿಕೆ ಮಾಡುತ್ತೇವೆ. ಈ ಪಾಲುದಾರಿಕೆಯು ನಮ್ಮ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಹೊಸ ಪರಿಹಾರ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com