
ಬೆಂಗಳೂರು: ಕಳೆದ ರಾತ್ರಿಯ ಮೇಘಸ್ಫೋಟವು ಉತ್ತರ ಬೆಂಗಳೂರನ್ನು ವಿಶೇಷವಾಗಿ ಯಲಹಂಕ ವಲಯ ಮತ್ತು ಇತರ ಪ್ರಮುಖ ನಗರ ಪ್ರದೇಶಗಳನ್ನು ಅಕ್ಷರಶಃ ನಲುಗಿಸಿದೆ. ಐಟಿ ಸಿಟಿಯ ದುರ್ಬಲ ಮೂಲಸೌಕರ್ಯ ಮತ್ತು ಭಾರೀ ಮಳೆಯನ್ನು ತಡೆದುಕೊಳ್ಳುವಲ್ಲಿ ನಗರದ ಅಸಮರ್ಪಕತೆಯನ್ನು ತೋರಿಸಿದೆ.
ಸೋಮವಾರ ಮಧ್ಯರಾತ್ರಿಯಿಂದ ನಿನ್ನೆ ಮಂಗಳವಾರ ಬೆಳಗಿನ ಜಾವದವರೆಗೆ ಯಲಹಂಕ ವಲಯವೊಂದರಲ್ಲೇ ಆರು ಗಂಟೆಗಳಲ್ಲಿ 157ಮಿ.ಮೀ ಮಳೆ ತಂದ ಮೇಘಸ್ಫೋಟದಿಂದಾಗಿ ಕನಿಷ್ಠ 10 ವಸತಿ ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಸಾವಿರಾರು ನಿವಾಸಿಗಳು ಬೆಳ್ಳಂಬೆಳಗ್ಗೆಯೇ ಪರದಾಡುವಂತಾಯಿತು.
ಪ್ರವಾಹದಲ್ಲಿ ಸಿಲುಕಿದ ಜನರನ್ನು ಸ್ಥಳಾಂತರಿಸಲು ದೋಣಿಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ತಂದವು. ಯಲಹಂಕ ಅಲ್ಲದೆ, ಮಹದೇವಪುರ ಮತ್ತು ದಾಸರಹಳ್ಳಿ ವಲಯಗಳ ಐಟಿ ಮತ್ತು ಕೈಗಾರಿಕಾ ಕಾರಿಡಾರ್‌ಗಳು - ಸರ್ಜಾಪುರ, ಮಾರತ್ತಹಳ್ಳಿ, ವೈಟ್‌ಫೀಲ್ಡ್, ಬೆಳ್ಳಂದೂರು ಮತ್ತು ಪೀಣ್ಯ ಕೈಗಾರಿಕಾ ಪ್ರದೇಶವನ್ನು ಒಳಗೊಂಡಿರುವ ಉತ್ಪಾದನಾ ಕೇಂದ್ರಗಳಿಗೂ ನಿನ್ನೆಯ ಮಳೆ ಹೊಡೆತ ತಂದಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಮತ್ತು ಭಾರತೀಯ ಹವಾಮಾನ ಇಲಾಖೆ (IMD) ಹಂಚಿಕೊಂಡ ಮಾಹಿತಿಯ ಪ್ರಕಾರ, ಅಕ್ಟೋಬರ್ 1 ರಿಂದ 22 ರವರೆಗೆ, ನಗರದಲ್ಲಿ 241 ಮಿಮೀ ಮಳೆ ದಾಖಲಾಗಿದೆ, ಇದು ಕಳೆದ 19 ವರ್ಷಗಳಲ್ಲಿ ಅತ್ಯಧಿಕವಾಗಿದೆ. 2005 ರಲ್ಲಿ, ಅದೇ ಅವಧಿಯಲ್ಲಿ, ನಗರವು 291 ಮಿಮೀ ಮಳೆಯನ್ನು ಪಡೆದಿತ್ತು. 2024 ರಲ್ಲಿ, ನಗರವು 118 ಮಿಮೀ ಸಾಮಾನ್ಯಕ್ಕಿಂತ ನಾಲ್ಕನೇ ಅತಿ ಹೆಚ್ಚು ಮಳೆಯನ್ನು ದಾಖಲಿಸಿದೆ.
ಐಎಂಡಿ ನಿರ್ದೇಶಕ (ಬೆಂಗಳೂರು) ಪುವಿಯರಸನ್ ಅವರು ಬೆಳಗ್ಗೆ 8.30 ರವರೆಗೆ ನಗರದಲ್ಲಿ 264.5 ಮಿಮೀ ಮಳೆಯಾಗಿದೆ. ಅಕ್ಟೋಬರ್ 22 ರ ರಾತ್ರಿ 8.30 ರವರೆಗೆ ನಗರದಲ್ಲಿ 23.6 ಮಿಮೀ ಮಳೆಯಾಗಿದೆ. ಮುಂದಿನ 48 ಗಂಟೆಗಳ ಕಾಲ (ಗುರುವಾರ ಸಂಜೆಯವರೆಗೆ) ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.
ರಸ್ತೆಗಳಲ್ಲಿ ಅವ್ಯವಸ್ಥೆ
ನಿನ್ನೆ ಪೂರ್ತಿ ತುಂತುರು ಮಳೆ ಅಥವಾ ಸಾಧಾರಣವಾಗಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದ್ದರಿಂದ ಜಲಾವೃತವಾದ ರಸ್ತೆಗಳು, ಅಸ್ತವ್ಯಸ್ತವಾಗಿರುವ ಸಂಚಾರ, ಬೇರುಸಹಿತ ಮರಗಳು ಮತ್ತು ಕೊಂಬೆಗಳು ಸಾಮಾನ್ಯ ದೃಶ್ಯವಾಗಿತ್ತು. ನಗರದಾದ್ಯಂತ ಆಟೋಗಳು ಮತ್ತು ಕ್ಯಾಬ್‌ಗಳು ಲಭ್ಯವಿಲ್ಲದ ಕಾರಣ ಅನೇಕರು ಸಿಲುಕಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿತ್ತು. ಸತತ ಮಳೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಕಚೇರಿಗೆ ತೆರಳುವವರು ತೀವ್ರ ತೊಂದರೆ ಅನುಭವಿಸಿದರು.
ವಿಮಾನ ನಿಲ್ದಾಣ ರಸ್ತೆ, ನೆಲಮಂಗಲ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿದೆ. ಹೆಬ್ಬಾಳ-ನಾಗವಾರ ಕಣಿವೆಯಲ್ಲಿ ಸುರಿದ ಭಾರೀ ಮಳೆಗೆ ಹೊರಮಾವು ಕೂಡ ಜಲಾವೃತಗೊಂಡಿದೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ, ವಿಜಯಪುರ ಲೇಔಟ್‌ನಲ್ಲಿ ಮಧ್ಯಾಹ್ನ 2ರಿಂದ 3ರವರೆಗೆ ಕೇವಲ ಒಂದು ಗಂಟೆಯಲ್ಲಿ ಜಲಾವೃತವಾಗಿದೆ.
ವಿಜಯನಗರ, ಮಾಗಡಿ ರಸ್ತೆ, ರಾಜಾಜಿನಗರ, ಮಂಜುನಾಥ್‌ನಗರ, ರಾಜಭವನ, ಹೆಬ್ಬಾಳ, ಮೆಹಕ್ರಿ ವೃತ್ತ ಮುಂತಾದ ಪ್ರದೇಶಗಳು ಜಲಾವೃತವಾಗಿದ್ದವು. ಮಾರತ್ತಹಳ್ಳಿ ಸಮೀಪದ ಸರ್ಜಾಪುರ, ಬೆಳ್ಳಂದೂರು, ದೇವರಬೀಸನಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಕಾರ್ತಿಕ್‌ನಗರ, ಮಹದೇವಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಂಗಳೂರಿನ ಹೆಣ್ಣೂರಿನಲ್ಲಿ ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಪೊಲೀಸರು, ಅಗ್ನಿಶಾಮಕ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
20 ವಿಮಾನಗಳು ವಿಳಂಬವಾಗಿದ್ದು, ಐದು ವಿಮಾನಗಳನ್ನು ಕೆಂಪೇಗೌಡ ವಿಮಾನ ನಿಲ್ದಾಣದ ಕಡೆಗೆ ತಿರುಗಿಸಲಾಗಿದೆ. ಮಲ್ಲೇಶ್ವರಂನ ಹಳ್ಳಿಮನೆ ಬಳಿ ಬೃಹತ್ ಮರವೊಂದು ಉರುಳಿಬಿದ್ದು, ಆಟೋರಿಕ್ಷಾಕ್ಕೆ ಹಾನಿಯಾಗಿದ್ದು, ಹೋಟೆಲ್ ಉದ್ಯೋಗಿ ಗಾಯಗೊಂಡಿದ್ದಾರೆ.
ಇಬ್ಲೂರು ಮತ್ತು ಮಾರತಹಳ್ಳಿ ನಡುವಿನ ಹೊರವರ್ತುಲ ರಸ್ತೆ ಸಂಪೂರ್ಣ ಸಂಚಾರ ದಟ್ಟಣೆಯಿಂದ ಕೂಡಿದ್ದು, ಸರ್ವೀಸ್ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಸಂಚಾರ ಪೊಲೀಸರು ಪ್ರಯಾಣಿಕರಿಗೆ ರಸ್ತೆ ಸಂಚಾರ ತಪ್ಪಿಸುವಂತೆ ಸೂಚನೆ ನೀಡಿದರು. ತೀವ್ರ ಮಳೆಯಿಂದಾಗಿ ಕನಿಷ್ಠ 20 ವಿಮಾನಗಳು ವಿಳಂಬವಾಗಿದ್ದು, ಐದು ವಿಮಾನಗಳನ್ನು ಇತರ ಸ್ಥಳಗಳಿಗೆ ತಿರುಗಿಸಲಾಗಿದೆ.
ಮಹದೇವಪುರ ವಲಯದ ಕೆಆರ್ ಪುರಂನ ಸಾಯಿಬಾಬಾ ಲೇಔಟ್ ನಿವಾಸಿ ನೀಲುಫುರ್ ಅಹಮದ್ ಅವರು ನೀರಿನ ಸಂಪ್ ಸ್ವಚ್ಛಗೊಳಿಸಲು ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳಿಗೆ ಪದೇ ಪದೇ ಹಣ ಖರ್ಚು ಮಾಡುತ್ತಿದ್ದರು ಎಂದು ಹೇಳಿದರು. “ನಾನು ಅದನ್ನು ಕೇವಲ ಒಂದು ವಾರದಲ್ಲಿ ಮೂರು ಬಾರಿ ಸರಿಪಡಿಸಿದೆ. ಆದರೆ, ನಮ್ಮ ಶಾಸಕ ಬೈರತಿ ಬಸವರಾಜ್ ಅವರು ಈ ಸೀಸನ್‌ನಲ್ಲಿ ‘ಹೊಂದಾಣಿಕೆ’ ಮಾಡಿಕೊಳ್ಳಿ, ಬೇಸಿಗೆಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ನಾನು ನಿರಾಶೆಗೊಂಡಿದ್ದೇನೆ, ”ಎಂದು ಅವರು ಹೇಳಿದರು.
Advertisement