Hampi ಸ್ಮಾರಕದ ಬಳಿ ಕಸ ಸುಡುತ್ತಿದ್ದ ASI ಸಿಬ್ಬಂದಿ, ಪ್ರಕರಣ ದಾಖಲು!

UNESCO ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯಲ್ಲಿರುವ ASI ರಕ್ಷಿತ ಸ್ಮಾರಕವಾದ ಗೆಜ್ಜಲ್ ಮಂಟಪದ ಬಳಿ ಕಸವನ್ನು ಸುಡುವ ಮೂಲಕ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ಸಿಬ್ಬಂದಿ ತಮ್ಮದೇ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾರೆ.
ASI staff caught burning garbage near Hampi monument
ಹಂಪಿ (ಸಂಗ್ರಹ ಚಿತ್ರ)
Updated on

ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಕಸ ಸುಡುತ್ತಿದ್ದ ಪುರಾತತ್ವ ಇಲಾಖೆ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಹೌದು.. UNESCO ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯಲ್ಲಿರುವ ASI ರಕ್ಷಿತ ಸ್ಮಾರಕವಾದ ಗೆಜ್ಜಲ್ ಮಂಟಪದ ಬಳಿ ಕಸವನ್ನು ಸುಡುವ ಮೂಲಕ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ಸಿಬ್ಬಂದಿ ತಮ್ಮದೇ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾರೆ.

ನಿಯಮಗಳ ಪ್ರಕಾರ, ಸಂರಕ್ಷಿತ ಸ್ಮಾರಕಗಳ ಬಳಿ ಬೆಂಕಿ ಹಚ್ಚುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಅವರ ವಿರುದ್ಧ ಇದೀಗ ಇಲಾಖೆ ಪ್ರಕರಣ ದಾಖಲಿಸಿದೆ.

ASI staff caught burning garbage near Hampi monument
ಹಂಪಿ ಪಾರಂಪರಿಕ ಸ್ಮಾರಕದಲ್ಲಿ ಫೋಟೋಗ್ರಫಿಗೆ ನಿಷೇಧ: ಪ್ರವಾಸಿಗರಿಂದ ಆಕ್ರೋಶ

ಇನ್ನು ಇದು ಎರಡು ದಿನಗಳ ಹಿಂದೆ ಘಟನೆ ಎಂದು ತಿಳಿದುಬಂದಿದ್ದು, ಸಿಬ್ಬಂದಿ ಬೆಂಕಿ ಹಚ್ಚುತ್ತಿರುವುದನ್ನು ನೋಡಿದ ಸ್ಥಳೀಯ ನಿವಾಸಿಯೊಬ್ಬರು, "ಇದು ಆಘಾತಕಾರಿಯಾಗಿದೆ. ಎಎಸ್ಐ ನಿಯಮಗಳ ಪ್ರಕಾರ ಸಂರಕ್ಷಿತ ಪ್ರದೇಶಗಳಲ್ಲಿ ಬೆಂಕಿ ಹಚ್ಚುವಂತಿಲ್ಲ. ಎರಡು ದಿನಗಳ ಹಿಂದೆ ವಿಜಯ್ ವಿಟ್ಲ ದೇವಸ್ಥಾನಕ್ಕೆ ಹೋಗುವಾಗ ನಾನು ಇದನ್ನು ನೋಡಿದೆ. ಕೆಲವು ಎಎಸ್‌ಐ ಸಿಬ್ಬಂದಿ ಗೆಜ್ಜಲ್ ಮಂಟಪದ ಬಳಿ ಬೆಂಕಿ ಹಚ್ಚಿದ್ದರು ಎಂದು ಹೇಳಿದರು.

"ಬೆಂಕಿ ಮತ್ತು ಅದರ ಜ್ವಾಲೆಯು ಸ್ಮಾರಕದ ಸೌಂದರ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಸ್ಮಾರಕದ ಬಳಿ ಕಸವನ್ನು ಸುಡುವ ಅವಶ್ಯಕತೆ ಏನೆಂದು ತಿಳಿದಿಲ್ಲ, ಇದು ಮೊದಲ ಬಾರಿ ಅಲ್ಲ ಎಂದು ಅನೇಕ ಸ್ಥಳೀಯರು ಹೇಳಿದ್ದಾರೆ. ಆದರೆ ಪದೇ ಪದೇ ಇಂತಹ ಘಟನೆಗಳು ಮರುಕಳುಸುತ್ತಲೇ ಇದೆ.

ASI staff caught burning garbage near Hampi monument
Hot air balloon ರೈಡ್ ಮೂಲಕ ಹಂಪಿ ವೀಕ್ಷಣೆಗೆ ಅವಕಾಶ!

ಹೀಗಾಗಿ ಹಂಪಿಯಲ್ಲಿ ಪ್ರತಿನಿತ್ಯ ತಪಾಸಣೆ ನಡೆಸುವಂತೆ ನಾನು ಅಧಿಕಾರಿಗಳಲ್ಲಿ ವಿನಂತಿಸುತ್ತೇನೆ. ಮುಂದಿನ ಪೀಳಿಗೆಗಾಗಿ ನಾವು ಈ ಸ್ಮಾರಕಗಳಿಗೆ ರಕ್ಷಣೆ ನೀಡಬೇಕು. ನಿಯಮಗಳನ್ನು ಉಲ್ಲಂಘಿಸಿ ಬೆಂಕಿ ಹಚ್ಚಿದ ಸಿಬ್ಬಂದಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಅಂದಹಾಗೆ ಗೆಜ್ಜಲ್ ಮಂಟಪವು ಐತಿಹಾಸಿಕ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿದೆ. ಹಂಪಿಯ ಸ್ಮಾರಕಗಳಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com