ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಜರಾಜೇಶ್ವರಿ ನಗರ ವಲಯದ ಮಲ್ಲತ್ತಹಳ್ಳಿ ಪ್ರದೇಶದಲ್ಲಿ ಪಾಲಿಕೆ ನೀಡಿದ ಪ್ರಮಾಣಪತ್ರಕ್ಕೆ ವ್ಯತಿರಿಕ್ತವಾಗಿ ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ರಾಜರಾಜೇಶ್ವರಿ ನಗರ ವಲಯ ಆಯುಕ್ತ ಬಿ.ಸಿ.ಸತೀಶ್ ತಿಳಿಸಿದ್ದಾರೆ. ಕಳೆದ ವಾರ ಮಹದೇವಪುರ ವಲಯದ ಬಾಬುಸಾಬ್ ಪಾಳ್ಯ ಕಟ್ಟಡ ಕುಸಿದು 9 ಮಂದಿ ಕಟ್ಟಡ ಕಾರ್ಮಿಕರು ಅಕ್ರಮ ಕಟ್ಟಡ ಕುಸಿದು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅಧಿಕಾರಿಗಳ ಪ್ರಕಾರ, ರಾಜರಾಜೇಶ್ವರಿನಗರ ಮಲ್ಲತ್ತಹಳ್ಳಿ ಗ್ರಾಮ ನಂ.6 ಮತ್ತು 7ರಲ್ಲಿರುವ ಕಟ್ಟಡದ ಮಾಲೀಕರಾದ ಜಿ.ಲಕ್ಷ್ಮಿ ಪ್ರಸಾದ್ ಮತ್ತು GPA ಹೋಲ್ಡರ್ (ಜನರಲ್ ಪವರ್ ಆಫ್ ಅಟಾರ್ನಿ), M D. ಹರ್ದೀಪ್ ಮತ್ತು ವಿಜಯಕುಮಾರ್, ಪಾಲುದಾರರಾದ ಲಕ್ವಿನ್ ಡೆವಲಪರ್ಸ್ ವಿರುದ್ಧ ಎಫ್ಐ ಆರ್ ದಾಖಲಿಸಲಾಗಿದೆ.1388.69 ಚದರ ಮೀಟರ್ ಅಡಿಯಲ್ಲಿ ಪಾರ್ಕಿಂಗ್ ಪ್ರದೇಶ, ನೆಲಮಹಡಿ, 1 ಫ್ಲೋರ್, 2ನೇ ಮಹಡಿ ಮೂರನ್ ಮಹಡಿ ಹಾಗೂ ಟೆರೆಸ್ ಪ್ಲೋರ್ ಗೆ ನಿಯಾಮಾವಳಿಗಳ ಪ್ರಕಾರ ಅನುಮತಿ ನಕ್ಷೆ ನೀಡಲಾಗಿತ್ತು.
ಆದರೆ, ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಯೋಜನೆಯಲ್ಲಿ ಮಾಲೀಕರು ಮತ್ತು ಪಾಲುದಾರರು ನಕಲಿ ನಕ್ಷೆ ನೀಡಿ ಕಟ್ಟಡ ನಿರ್ಮಿಸುತ್ತಿರುವುದು ಕಂಡುಬಂದಿದೆ. ಜತೆಗೆ 20 ಅಕ್ರಮ ವಸತಿ ಘಟಕಗಳನ್ನು ಸೇರಿಸಿದ್ದಾರೆ. ನಕಲಿ ಪ್ಲಾನ್ ನೀಡಿ 6 ಮಹಡಿ ನಿರ್ಮಿಸಿರುವುದು ಪತ್ತೆಯಾಗಿದೆ. ಮಾಲೀಕರು 20 ವಸತಿ ಗೃಹಗಳನ್ನು ನಿರ್ಮಿಸಿದ್ದಾರ. ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವುದು ಪಾಲಿಕೆ ನಿಯಮಾವಳಿಗೆ ವಿರುದ್ಧವಾಗಿದೆ. ನಕಲಿ ನಕ್ಷೆ ತಯಾರಿಸಿ ಪಾಲಿಕೆಗೆ ವಂಚನೆ ಮಾಡಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಕ್ರಮಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿದೆ. ಆದ್ದರಿಂದ ಕಟ್ಟಡ ಮಾಲೀಕ ಜಿ.ಲಕ್ಷ್ಮೀ ಪ್ರಸಾದ್, ಜಿಪಿಎ ಹೋಲ್ಡರ್ ಲಕ್ವಿನ್ ಡೆವಲಪರ್ಸ್ ಪಾಲುದಾರರಾದ ಡಿ.ಹರ್ದೀಪ್ ಮತ್ತು ಎ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನಧಿಕೃತ ಮಹಡಿ ನಿರ್ಮಾಣಕ್ಕಾಗಿ, ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 248(1), 248(2) ಮತ್ತು 248 (3) ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಯೋಜನೆ ಹುಸಿಯಾಗಿದ್ದು, ಬಿಬಿಎಂಪಿಗೆ ವಂಚಿಸುವ ಉದ್ದೇಶ ಹೊಂದಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಭೂ ಮಾಲೀಕರು, ಡೆವಲಪರ್ ಮತ್ತು ವಾಸ್ತುಶಿಲ್ಪಿಯನ್ನು ಬಂಧಿಸಬಹುದು ಎಂದು ನಗರ ಯೋಜನಾ ಸಹಾಯಕ ನಿರ್ದೇಶಕ ಟಿ ಹನುಮಂತರಾಯ ಹೇಳಿದರು.
Advertisement