ವಾಹನಗಳ ಮೇಲೆ ಸ್ಟಿಕ್ಕರ್, ಪ್ರಚೋದನಕಾರಿ ಬರಹ ಹಾಕಿದ್ರೇ ಹುಷಾರ್: RTO ಎಚ್ಚರಿಕೆ

ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ನಮಗೆ ನಿರ್ದೇಶನ ನೀಡಿದ್ದು, ಅದರ ಅನ್ವಯ ನಾವು‌ ಪ್ರಕರಣಗಳನ್ನು ದಾಖಲು ಮಾಡುತ್ತಾ ಬಂದಿದ್ದೇವೆ. ಮನೆ ಹೆಸರು, ಮನೆತನದ‌ ಹೆಸರು, ಇಷ್ಟ ದೇವರ ಹೆಸರು ಎಲ್ಲವೂ ಕಾನೂನು ಬಾಹಿರವಾಗುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದು, ಅಭಿಮಾನಿಗಳು ಮಾತ್ರ ನಟನ ಬಗ್ಗೆ ಹುಚ್ಚು ಅಭಿಮಾನ ಮೆರೆಯುತ್ತಿದ್ದಾರೆ. ಸಾಕಷ್ಟು ಮಂದಿ ತಮ್ಮ ತಮ್ಮ ವಾಹನಗಳ ಮೇಲೆ ದರ್ಶನ್ ಕೈದಿ ನಂಬರ್ ಸೇರಿದಂತೆ ತರಹೇವಾರಿ ಸ್ಟಿಕ್ಕರ್‌ಗಳನ್ನು ಅಂಟಿಸಿ, ಸಂದೇಶಗಳನ್ನು ಬರೆದು ಅಭಿಮಾನ ಮೆರೆಯುತ್ತಿದ್ದಾರೆ. ಅಂತಹ ಅಭಿಮಾನಿಗಳಿಗೆ ಆರ್‌ಟಿಓ ಎಚ್ಚರಿಕೆ ಕೊಟ್ಟಿದೆ.

ಹೆಚ್ಚುವರಿ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ್ ಅವರು ಆದೇಶ ಹೊರಡಿಸಿದ್ದು, ಇತ್ತೀಚಿನ ದಿನಗಳಲ್ಲಿ ವಾಹನಗಳ ಮೇಲೆ ಬೇರೆ ಬೇರೆ ರೀತಿಯ ಬರಹಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿಂದೆ ಈ ಮಟ್ಟಿಗೆ ಬರಹಗಳನ್ನ ವಾಹನಗಳ ಮೇಲೆ ಹಾಕಿರಲಿಲ್ಲ. ಈ ಬಗ್ಗೆ ಆರ್‌ಟಿಒ ಇಲಾಖೆ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದ್ದು, ಅನವಶ್ಯಕ ಬರಹಗಳು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳೂತ್ತೇವೆಂದು ಹೇಳಿದ್ದಾರೆ.

ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ನಮಗೆ ನಿರ್ದೇಶನ ನೀಡಿದ್ದು, ಅದರ ಅನ್ವಯ ನಾವು‌ ಪ್ರಕರಣಗಳನ್ನು ದಾಖಲು ಮಾಡುತ್ತಾ ಬಂದಿದ್ದೇವೆ. ಮನೆ ಹೆಸರು, ಮನೆತನದ‌ ಹೆಸರು, ಇಷ್ಟ ದೇವರ ಹೆಸರು ಎಲ್ಲವೂ ಕಾನೂನು ಬಾಹಿರವಾಗುತ್ತೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್'ಟಿಓ ಇಲಾಖೆ ಮಾಡಿದೆ. ಜೊತೆಗೆ 3 ವರ್ಷದಲ್ಲಿ ಹಲವು ಪ್ರಕರಣ ದಾಖಲು ಮಾಡಿದ್ದೇವೆ. ವಾಹನಗಳ ಮೇಲೆ ಬೇರೆ ಬೇರೆ ಬರಹಗಳನ್ನ ಬರೆಯುತ್ತಿದ್ದಾರೆ. ಯಾರೂ ಸಹ ಅನವಶ್ಯಕ ಬರಹಗಳನ್ನ ವಾಹನಗಳ‌ ಮೇಲೆ ಹಾಕಬಾರದು.

ಸಂಗ್ರಹ ಚಿತ್ರ
ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಅ್ಯಂಡ್ ಗ್ಯಾಂಗ್ ವಿರುದ್ಧ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಬರಹಗಳು ಹೆಚ್ಚಾಗಿದೆ. ಈ ಹಿಂದೆ ಈ‌ಮ ಟ್ಟಿಗೆ ಬರಹಗಳನ್ನ ವಾಹನಗಳ ಮೇಲೆ ಹಾಕಿರಲಿಲ್ಲೃ. ಈ‌ಬಗ್ಗೆ RTO ಇಲಾಖೆ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದೆ. ಅನವಶ್ಯಕ ಬರಹಗಳಿದ್ದರೆ ಕ್ರಮ ತೆಗೆದುಕೊಳ್ಳೂತ್ತೇವೆ. ನೆಚ್ಚಿನ ನಟರ ಪೋಟೋಗಳನ್ನ ವಾಹನಗಳ ಮೇಲೆ ಹಾಕೋದು ಕಾನೂನು‌ ಬಾಹಿರ. ವಾಹನಗಳ ಮೇಲೆ ಪ್ರಚೋದನಕಾರಿ ಬರಹ‌ ಮಾತ್ರವಲ್ಲ ಯಾವುದೇ ಸ್ಟಿಕ್ಕರ್ ಗಳಿಗೂ ಅವಕಾಶವಿಲ್ಲ. ಇಲ್ಲಿವರೆಗೆ ನಂಬರ್ ಪ್ಲೇಟ್ ಮೇಲೆ ಗಮನಹರಿಸುತ್ತಿದ್ದೆವು. ಇನ್ನು ಮುಂದೆ ಅನಧಿಕೃತ ಬರಹ ಮೇಲೂ ಗಮನ ಹರಿಸಿ, ಕಠಿಣ ಕ್ರಮ ಕೈಗೊಳ್ಳಳಾಗುತ್ತದೆ.

ಮೊದಲ ಹಾಗೂ ಎರಡನೇ ಬಾರಿ ನಿಯಮ ಉಲ್ಲಂಘಿಸುವವರುಗೆ ಎಚ್ಚರಿಕೆ ನೀಡುತ್ತೇವೆ. ಮೂರನೇ ಬಾರಿ ಅದೇ ತಪ್ಪು ಮಾಡಿದರೆ, ಪರವಾನಗಿ ರದ್ದು ಮಾಡುತ್ತೇವೆಂದು ಮಲ್ಲಿಕಾರ್ಜುನ್ ಅವರು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com