GST ಸಂಗ್ರಹ ಸುಗಮಗೊಳಿಸಲು ಸರ್ಕಾರ ಕ್ರಮ: ಹೊಸ ವ್ಯವಸ್ಥೆ ಜಾರಿಗೆ

ಜಿಎಸ್‌ಟಿ ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ ದೃಢೀಕರಣ ಮತ್ತು ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಇದರಿಂದ ಅಮಾಯಕ ವ್ಯಕ್ತಿಗಳ ದಾಖಲೆಗಳನ್ನು ಬಳಸಿಕೊಂಡು ನಕಲಿ ಜಿಎಸ್'ಟಿ ತಡೆಯಲು ಸಾಧ್ಯವಾಗುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ, ನಕಲಿ ಜಿಎಸ್‌ಟಿ ನೋಂದಣಿ ತಡೆಯಲು ಹಾಗೂ ಜಿಎಸ್‌ಟಿ ಸಂಗ್ರಹವನ್ನು ಸುಗಮಗೊಳಿಸಲು ಹೊಸ ವ್ಯವಸ್ಥೆಯೊಂದನ್ನು ಮಂಗಳವಾರ ಆರಂಭಿಸಿದೆ.

ಜಿಎಸ್‌ಟಿ ಸೇವಾ ಕೇಂದ್ರಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ತೆರಿಗೆ ಸಂಗ್ರಹ ಸುಲಭಗೊಳಿಸಲು ಈ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ನಗರದ ಗಾಂಧಿನಗರದಲ್ಲಿರುವ ಕೇಂದ್ರ ಕಚೇರಿ ಸೇರಿ ರಾಜ್ಯದ 120 ಕಡೆ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಅರ್ಜಿದಾರರು ಮುಂಗಡವಾಗಿ ಸಮಯ ನಿಗದಿಪಡಿಸಿಕೊಂಡು ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ.

ಜಿಎಸ್‌ಟಿ ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ ದೃಢೀಕರಣ ಮತ್ತು ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಇದರಿಂದ ಅಮಾಯಕ ವ್ಯಕ್ತಿಗಳ ದಾಖಲೆಗಳನ್ನು ಬಳಸಿಕೊಂಡು ನಕಲಿ ಜಿಎಸ್'ಟಿ ತಡೆಯಲು ಸಾಧ್ಯವಾಗುತ್ತದೆ. ಜೊತೆಗೆ ರಾಜ್ಯದಲ್ಲಿ ಉತ್ತಮ ವ್ಯವಹಾರ ವಾತಾವರಣಕ್ಕೂ ಉತ್ತೇಜನ ಸಿಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಕಲಿ ಜಿಎಸ್‌ಟಿ ನೋಂದಣಿ ತಡೆಗಟ್ಟಲು ರಾಜ್ಯದ ವಿವಿಧೆಡೆ ಆಧಾರ್ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡುವ 120 ಜಿಎಸ್‌ಟಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಹೊಸ ವ್ಯವಸ್ಥೆಯು ನಕಲಿ ತೆರಿಗೆದಾರರನ್ನು ತೊಡೆದುಹಾಕಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಶಿಖಾ ಅವರು ಹೇಳಿದ್ದಾರೆ.

ಸಂಗ್ರಹ ಚಿತ್ರ
ಕ್ಯಾನ್ಸರ್ ಔಷಧಿಗಳ ಮೇಲಿನ ತೆರಿಗೆ ಶೇ.5ಕ್ಕೆ ಇಳಿಕೆ: ಆರೋಗ್ಯ ಮತ್ತು ಜೀವ ವಿಮಾ ಕಂತುಗಳ ಕಡಿತಕ್ಕೆ GST Council ಸಭೆಯಲ್ಲಿ ನಿರ್ಧಾರ

ಹಳೆ ವ್ಯವಸ್ಥೆಯಲ್ಲಿ ನಕಲಿ ತೆರಿಗೆದಾರರು ಪತ್ತೆಯಾದ ಬಳಿಕ ಸಿಸ್ಟಮ್ ನಿಂದ ಅವರ ವಿವರಗಳನ್ನು ತೆಗೆದುಹಾಕುತ್ತಿತ್ತು. ಬಳಿಕ ಮತ್ತೊಮ್ಮೆ ನೋಂದಾಯಿಸಿಕೊಳ್ಳುವ ಅವಕಾಶ ಸಿಗುತ್ತಿತ್ತು. ಆದರೆ, ಹೊಸ ವ್ಯವಸ್ಥೆಯಲ್ಲಿ ಹಾಗಿಲ್ಲ. ಬಯೋಮೆಟ್ರಿಕ್ ಹಿನ್ನೆಲೆಯಲ್ಲಿ ಹೊಸದಾಗಿ ನೋಂದಾಯಿಸುವವರು ಆಧಾರ್ ದೃಢೀಕರಣವನ್ನು ಒದಗಿಸಬೇಕಾಗುತ್ತದೆ. ಪ್ರಸ್ತುತದ ಹೊಸ ವ್ಯವಸ್ಥೆಯಲ್ಲಿ ಮೂರು ದಿನಗಳಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಆದಾಗ್ಯೂ, ಜಿಎಸ್‌ಟಿ ಸೇವಾ ಕೇಂದ್ರವು ಬಯೋಮೆಟ್ರಿಕ್ಸ್‌ಗೆ ಅವಕಾಶ ನೀಡುತ್ತದೆ. ಹೊಸ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಂಡವರು ಅಗತ್ಯ ದಾಖಲೆ ಹಾಗೂ ಪ್ರಕ್ರಿಯೆ ಅನುಸರಿಸಬೇಕಾಗಿರುವುದರಿಂದ ಇಲ್ಲಿ ನೋಂದಾಯಿಸಿದವರನ್ನು ಪ್ರಾಮಾಣಿಕ ತೆರಿಗೆದಾರರು ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.

ಈಗಾಗಲೇ 10.40 ಲಕ್ಷ ಮಂದಿ ಹಳೇ ವ್ಯವಸ್ಥೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದು, ಹೊಸ ವ್ಯವಸ್ಥೆಯಿಂದ ಎಲ್ಲ ಹೊಸ ನೋಂದಣಿದಾರರಿಗೆ ಅನುಕೂಲವಾಗಲಿದೆ. ಹೊಸ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಂಡವರಿಗೆ ಕೆಲ ಪ್ರಯೋಜನಗಳೂ ಕೂಡ ಸಿಗಲಿದ್ದು, ಇವರ ವಿರುದ್ಧದ ವಿಚಾರಣೆಗಳು ಕೂಡ ಕಡಿಮೆ ಇರುತ್ತದೆ ಎಂದು ಎಫ್‌ಕೆಸಿಸಿಐನ ಜಿಎಸ್‌ಟಿ ವಿಭಾಗದ ಅಧಿಕಾರಿ ಬಿಟಿ ಮನೋಹರ್ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com