ಪರಪ್ಪನ ಅಗ್ರಹಾರದ ಮೇಲೆ CCB ದಾಳಿ: ವಿಲ್ಸನ್ ಗಾರ್ಡನ್ ನಾಗ ಮೊಬೈಲ್ ವಶಕ್ಕೆ!

ಸಿಸಿಬಿ ಅಧಿಕಾರಿಗಳು ಶನಿವಾರ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ಮಾಡಿದ್ದು, ತಪಾಸಣೆ ವೇಳೆ ವಿಲ್ಸನ್‌ ಗಾರ್ಡನ್‌ ನಾಗ ಮತ್ತು ಆತನ ಸಹಚರರ ಸುಮಾರು 18 ಮೊಬೈಲ್‌ಫೋನ್‌ ಗಳನ್ನು ವಶಕ್ಕೆ ಪಡೆದಿದ್ದಾರೆ.
CCB raid on Bengaluru Central Jail
ಪರಪ್ಪನ ಅಗ್ರಹಾರ
Updated on

ಬೆಂಗಳೂರು: ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮತ್ತೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ವಿಲ್ಸನ್ ಗಾರ್ಡನ್ ನಾಗ ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಸಿಸಿಬಿ ಅಧಿಕಾರಿಗಳು ಶನಿವಾರ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ಮಾಡಿದ್ದು, ತಪಾಸಣೆ ವೇಳೆ ವಿಲ್ಸನ್‌ ಗಾರ್ಡನ್‌ ನಾಗ ಮತ್ತು ಆತನ ಸಹಚರರ ಸುಮಾರು 18 ಮೊಬೈಲ್‌ಫೋನ್‌ ಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಅಧಿಕಾರಿಗಳು ಮೊಬೈಲ್ ಜೊತೆಗೆ ಡ್ರಗ್ಸ್ ಹಾಗೂ ಹಣವನ್ನೂ ಸೀಜ್​ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿಯ ಮಾಹಿತಿ ಸೋರಿಕೆಯಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಂತರಿಕ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಸೂಚನೆ ನೀಡಿದ್ದರು. ತನಿಖೆ ನಡೆಸಿ ವರದಿ ನೀಡಲು ಸಿಸಿಬಿ ಹೆಚ್ಚುವರಿ ಆಯುಕ್ತ ಡಾ.ಚಂದ್ರಗುಪ್ತಗೆ ಸೂಚಿಸಿದ್ದರು.

CCB raid on Bengaluru Central Jail
ಜೈಲಿನಲ್ಲಿನ ದರ್ಶನ್ ಫೋಟೋ ವೈರಲ್: ರೌಡಿ ವೇಲುಗೆ ಹಿಗ್ಗಾಮುಗ್ಗ ಥಳಿಸಿದ ವಿಲ್ಸನ್ ಗಾರ್ಡನ್ ನಾಗ?

ಕಳೆದ ತಿಂಗಳೂ ಸಿಸಿಬಿ ದಾಳಿ ಮಾಡಿತ್ತು

ಆಗಸ್ಟ್​​​ 24 ರಂದು ಸಿಸಿಬಿ ಅಧಿಕಾರಿಗಳು ಬೆಂಗಳೂರು ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಏನು ಸಿಗದೆ ಖಾಲಿ ಕೈಯಲ್ಲಿ ಅಧಿಕಾರಿಗಳು ಬರೀಗೈಯಲ್ಲಿ ಮರಳಿದ್ದರು. ದಾಳಿ ಮಾಡಿದ ಮರು ದಿನವೇ (ಆ.25) ರಂದು ಕೊಲೆ ಆರೋಪಿ ದರ್ಶನ್​ ಜೈಲಿನಲ್ಲಿ ಬಲಗೈಯಲ್ಲಿ ಚಹಾ ಮಗ್​ ಮತ್ತು ಎಡಗೈನಲ್ಲಿ ಸಿಗರೇಟ್​ ಹಿಡಿದಿರುವ ಫೋಟೋ ವೈರಲ್​ ಆಗಿತ್ತು.

ಇದು ಹಲವು ಅನುಮಾನಕ್ಕೆ ಕಾರಣವಾಗಿತ್ತು. ​ರಾಜಾತಿಥ್ಯ ನೀಡಿರುವ ಫೋಟೋ ವೈರಲ್​ ಆದ ನಂತರ ಜೈಲು ಅಧಿಕಾರಿಗಳು ಆರೋಪಿ ದರ್ಶನ್​ನನ್ನು ಬಳ್ಳಾರಿ ಜೈಲಿಗೆ ಶೀಫ್ಟ್​ ಮಾಡಿದ್ದಾರೆ.

CCB raid on Bengaluru Central Jail
ರೇಣುಕಾಸ್ವಾಮಿ ಹತ್ಯೆ ಪ್ರಕರಣ: ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ದರ್ಶನ್; ಚಾರ್ಜ್'ಶೀಟ್ ನಲ್ಲಿ ಸ್ಫೋಟಕ ಅಂಶಗಳು ಬಹಿರಂಗ..!

ಇನ್ನು, ದರ್ಶನ್​ ಸಹಚರರನ್ನು ಕಲಬುರಗಿ, ವಿಜಯಪುರ ಸೇರಿದಂತೆ ವಿವಿಧ ಕೇಂದ್ರ ಕಾರಾಗೃಹಗಳಿಗೆ ಶಿಫ್ಟ್​​ ಮಾಡಲಾಗಿದೆ. ಸದ್ಯ ದರ್ಶನ್​ ಬಳ್ಳಾರಿ ಜೈಲಿನಲ್ಲಿದ್ದು, ಜಾಮೀನು ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ (Bengaluru Central Jail) ಆರೋಪಿ ದರ್ಶನ್​ಗೆ ರಾಜಾತಿಥ್ಯ ನೀಡಿದ್ದ ಫೋಟೋ ವೈರಲ್​​ ಆಗಿತ್ತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಫೋಟೋದಲ್ಲಿ ಆರೋಪಿ ದರ್ಶನ್​ (Darshan) ಜೊತೆ ರೌಡಿಶೀಟರ್​​ ವಿಲ್ಸನ್​​ ಗಾರ್ಡನ್​ ನಾಗ ಕೂಡ ಇದ್ದನು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com