ಬೆಸ್ಕಾಂನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ: ನಾಲ್ವರ ವಿರುದ್ಧ ದೂರು ದಾಖಲು

ಲಿಖಿತ್ ಅವರು 2021 ರಲ್ಲಿ ಹೆಗ್ಡೆ ಅವರೊಂದಿಗೆ ಸ್ನೇಹ ಬೆಳೆಸಿದರು, ಅವರು ಬೆಸ್ಕಾಂ, ಕೆಪಿಟಿಸಿಎಲ್ ಮತ್ತು ಇತರ ವಿವಿಧ ಸರ್ಕಾರಿ ವಲಯಗಳಲ್ಲಿ ಕೆಲಸ ಮಾಡಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 28 ವರ್ಷದ ಯುವಕನಿಗೆ ಬೆಸ್ಕಾಂನಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದು ನಕಲಿ ನೇಮಕಾತಿ ಆದೇಶ ನೀಡಿದ್ದ ಆರು ಮಂದಿ ವಿರುದ್ಧ ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಿಖಿತ್ ಗೌಡ ಎಂಬುವರು ಪ್ರವೀಣ್ (30), ವಿಘ್ನೇಶ್ ಹೆಗ್ಡೆ (44), ವೆಂಕಟೇಶ್ (44), ಶಿವಾನಂದ್ (63), ಶ್ರೀನಿವಾಸ್ (29), ಮತ್ತು ರಾಜಾ (42) ವಿರುದ್ಧ ದೂರು ದಾಖಲಿಸಿದ್ದಾರೆ. ಲಿಖಿತ್ ಅವರು 2021 ರಲ್ಲಿ ಹೆಗ್ಡೆ ಅವರೊಂದಿಗೆ ಸ್ನೇಹ ಬೆಳೆಸಿದರು, ಅವರು ಬೆಸ್ಕಾಂ, ಕೆಪಿಟಿಸಿಎಲ್ ಮತ್ತು ಇತರ ವಿವಿಧ ಸರ್ಕಾರಿ ವಲಯಗಳಲ್ಲಿ ಕೆಲಸ ಮಾಡಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು, ತಮಗೆ ಉನ್ನತ ಮಟ್ಟದ ಸಂಪರ್ಕ ಹೊಂದಿರುವುದಾಗಿ ಹೇಳಿಕೊಂಡಿದ್ದರು. ತನ್ನ ಸ್ನೇಹಿತರು ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೊಂಡ ವಿಘ್ನೇಶ್ ಹೆಗ್ಡೆ ತನ್ನ ಸ್ನೇಹಿತರನ್ನು ಭೇಟಿ ಮಾಡಿ ಅವರಿಗೆ 23 ಲಕ್ಷ ಹಣ ನೀಡುವಂತೆ ಲಿಖಿತ್ ಗೆ ತಿಳಿಸಿದ್ದಾನೆ.

2023 ರಲ್ಲಿ, ಆರೋಪಿಯು ತನಗೆ ನಕಲಿ ಉದ್ಯೋಗ ಪತ್ರವನ್ನು ನೀಡಿದ್ದನು.ಹಣವನ್ನು ಹಿಂದಿರುಗಿಸುವಂತೆ ಕೇಳಿದ ನಂತರ ಆರೋಪಿಗಳು ಬೆದರಿಕೆ ಹಾಕಿದ್ದರು. ನಂತರ ಲಿಖಿತ್ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಲು ಹೋದಾಗ ಆತನನ್ನು ಬೆದರಿಸಿ ದೂರು ನೀಡದಂತೆ ತಡೆದಿದ್ದರು.ಇತ್ತೀಚೆಗೆ ಹಣ ಕೇಳಿದಾಗ ಮತ್ತೆ ಬೆದರಿಕೆ ಹಾಕಿದ್ದರಿಂದ ಅವರು ಮತ್ತೊಂದು ದೂರು ದಾಖಲಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಮಹಿಳೆ ಮೇಲೆ ಅತ್ಯಾಚಾರ ಆರೋಪ: BJP ಶಾಸಕ ಮುನಿರತ್ನ ಮತ್ತೆ ಬಂಧನ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com