BMTC ಬಸ್ ಚಾಲನೆ ವೇಳೆ ಚಾಲಕನಿಗೆ ಎದೆನೋವು: ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು 45 ಮಂದಿ ಪ್ರಯಾಣಿಕರ ಜೀವ..!

ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ, ನನ್ನ ಸ್ಥಳದಲ್ಲಿ ಯಾರೇ ಇದ್ದರೂ ಅವರೂ ಅದೇ ರೀತಿ ಮಾಡುತ್ತಿದ್ದರು, ನಾನು ಬಸ್ ನಿಧಾನವಾಗುವುದನ್ನು ಗಮನಿಸಿ ತಕ್ಷಣ ನಿಲ್ಲಿಸಿದ್ದೆ.
BMTC ಬಸ್ ಚಾಲನೆ ವೇಳೆ ಚಾಲಕನಿಗೆ ಎದೆನೋವು: ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು 45 ಮಂದಿ ಪ್ರಯಾಣಿಕರ ಜೀವ..!
Updated on

ಬೆಂಗಳೂರು: ಬಸ್‌‍ ಚಾಲನೆ ಮಾಡುತ್ತಿದ್ದಾಗಲೇ ಬಿಎಂಟಿಸಿ ಚಾಲಕನಿಗೆ ದಾರಿ ಮಧ್ಯೆಯೇ ಎದೆನೋವು ಕಾಣಿಸಿಕೊಂಡಿದ್ದು, ಆದರೆ, ಪೊಲೀಸರ ಸಮಯಪ್ರಜ್ಞೆಯಿಂದಾಗಿ ಸಂಭವಿಸಬೇಕಿದ್ದ ದುರಂತವೊಂದು ತಪ್ಪಿದೆ.

ಗುರುವಾರ ಮಧ್ಯಾಹ್ನ 3.45ರ ವೇಳೆಗೆ ಹಲಸೂರು ಗೇಟ್‌ ಸಂಚಾರ ಠಾಣೆಯ ಎಎಸ್‌‍ಐ ರಘುಕುಮಾರ್‌ ಅವರು ಶಾಂತಿನಗರ ಜಂಕ್ಷನ್‌ನಲ್ಲಿ ಕರ್ತವ್ಯದಲ್ಲಿದ್ದರು. ಆ ಸಂದರ್ಭದಲ್ಲಿ ಶಾಂತಿನಗರ ಡಿಪೋ ಕಡೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್‌‍ ಏಕಾಏಕಿ ನಿಧಾನವಾಗಿದ್ದನ್ನು ಗಮನಿಸಿದ್ದಾರೆ. ಬಳಿಕ ಚಾಲಕನನ್ನು ನೋಡಿದಾಗ ಆತ ಎದೆ ಹಿಡಿದುಕೊಂಡು ನರಳಾಡುತ್ತಿರುವುದು ಕಂಡುಬಂದಿದೆ.

ಕೂಡಲೇ ಬಸ್‌‍ ಬಳಿ ಹೋಗಿ ಬಸ್‌‍ ಬಾಗಿಲು ತೆಗೆಸಿದ್ದಾರೆ. ಬಳಿಕ ಹ್ಯಾಂಡ್ ಬ್ರೇಕ್ ಹಾಕಿ ನಿರ್ವಾಹಕನ ಸಹಾಯದಿಂದ ಚಾಲಕ ವೀರೇಶ್‌ನನ್ನು ಕೆಳಗಿಳಿಸಿದ್ದಾರೆ. ನಂತರ ಮತ್ತೊಂದು ಸಿಗ್ನಲ್‌ ಬಳಿ ಕರ್ತವ್ಯದಲ್ಲಿದ್ದ ಅಶೋಕನಗರ ಸಂಚಾರಿ ಠಾಣೆ ಸಿಬ್ಬಂದಿ ಪ್ರಸನ್ನಕುಮಾರ್‌ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಬಸ್‌‍ ಚಾಲಕ ವೀರೇಶ್‌ ಅವರನ್ನು ಆಟೋದಲ್ಲಿ ಕೂರಿಸಿ ವೈದೇಹಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

BMTC ಬಸ್ ಚಾಲನೆ ವೇಳೆ ಚಾಲಕನಿಗೆ ಎದೆನೋವು: ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು 45 ಮಂದಿ ಪ್ರಯಾಣಿಕರ ಜೀವ..!
ಬೆಂಗಳೂರು: ಬಿಎಂಟಿಸಿ ಬಸ್ ಗೆ ದ್ವಿಚಕ್ರ ವಾಹನ ಡಿಕ್ಕಿ; ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

ಇದರೊಂದಿಗೆ ಬಸ್ ನಲ್ಲಿದ್ದ 45 ಮಂದಿ ಪ್ರಯಾಣಿಕರ ಪ್ರಾಣ ಕಾಪಾಡುವುದರ ಜೊತೆಗೆ ಚಾಲಕನ ಪ್ರಾಣವನ್ನು ಉಳಿಸಿದ್ದಾರೆ. ಘಟನೆ ಬಳಿಕ ಎಎಸ್‌‍ಐ ರಘುಕುಮಾರ್‌ ಅವರಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿವೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎಎಸ್‌ಐ ರಘುಕುಮಾರ್ ಅವರು, ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ, ನನ್ನ ಸ್ಥಳದಲ್ಲಿ ಯಾರೇ ಇದ್ದರೂ ಅವರೂ ಅದೇ ರೀತಿ ಮಾಡುತ್ತಿದ್ದರು, ನಾನು ಬಸ್ ನಿಧಾನವಾಗುವುದನ್ನು ಗಮನಿಸಿ ತಕ್ಷಣ ನಿಲ್ಲಿಸಿದ್ದೆ. ಬಸ್ ನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದು ನನಗೆ ಸಂತೋಷ ತಂದಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com