
ಬೆಂಗಳೂರು: ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಯತ್ನ ನಡೆಸುತ್ತಿದ್ದು, ಈ ನಡುವಲ್ಲೇ ರಾಜ್ಯ ವಕ್ಫ್ ಮಂಡಳಿಯು ಆಸ್ತಿ ಸಮೀಕ್ಷೆ ಕಾರ್ಯವನ್ನು ಆರಂಭಿಸಿದೆ.
ಮಂಡಳಿಯ ಅಂಕಿಅಂಶಗಳ ಪ್ರಕಾರ, ತನ್ನ ಸ್ವಾಧೀನದಲ್ಲಿ 1,07,651 ಎಕರೆ ಭೂಮಿ ಇದ್ದು, ಈ ಪೈಕಿ 90,000 ಎಕರೆ ವಿವಿಧ ನ್ಯಾಯಾಲಯಗಳಲ್ಲಿ ವ್ಯಾಜ್ಯದಲ್ಲಿದೆ ಎಂದು ತಿಳಿದುಬಂದಿದೆ.
ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ ಅನ್ವರ್ ಬಾಷಾ ಅವರು ಮಾತನಾಡಿ, ಜನರು 1828 ರಿಂದಲೂ ವಕ್ಫ್ ಮಂಡಳಿಗೆ ಭೂಮಿಯನ್ನು ದಾನ ಮಾಡಲು ಪ್ರಾರಂಭಿಸಿದ್ದರು. ಈ ಹಿಂದೆ ಮಂಡಳಿ ಬಳಿ 1.10 ಲಕ್ಷ ಎಕರೆಗೂ ಹೆಚ್ಚು ಭೂಮಿ ಇತ್ತು, ಆದರೆ, ಇನಾಮ್ ನಿರ್ಮೂಲನೆ ಕಾಯ್ದೆ, ಭೂಸುಧಾರಣಾ ಕಾಯ್ದೆ ಸೇರಿದಂತೆ ವಿವಿಧ ಭೂಸುಧಾರಣೆಗಳಿಂದಾಗಿ ಹಲವು ಎಕರೆ ಭೂಮಿಯನ್ನು ಕಳೆದುಕೊಂಡಿದ್ದೇವೆಂದು ಹೇಳಿದ್ದಾರೆ.
ಆಲಮಟ್ಟಿ ಜಲಾ ಮತ್ತು ಇತರ ವಿವಿಧ ಯೋಜನೆಗಳಿಂದಾಗಿ 75,000 ಎಕರೆ ಭೂಮಿಯನ್ನು ಕಳೆದುಕೊಂಡಿದ್ದೇವೆ. ನಮಗೆ ಸೂಕ್ತ ಪರಿಹಾರ ನೀಡಲಾಗಿದೆ. ಈಗ ವ್ಯಾಜ್ಯದಲ್ಲಿರುವ 90,000 ಎಕರೆ ಭೂಮಿಗೆ ಬದಲಾಗಿ ಪರಿಹಾರ ಅಥವಾ ಭೂಮಿಯನ್ನು ಕೇಳುತ್ತಿದ್ದೇವೆಂದು ಎಂದು ಹೆಸರು ಹೇಳಲು ಇಚ್ಛಿಸದ ಪಾಲಿಕೆಯ ಮತ್ತೊಬ್ಬ ಸದಸ್ಯರು ತಿಳಿಸಿದ್ದಾರೆ.
ನಮಗೆ ನೀಡಲಾಗಿರುವ ಭೂಮಿಯನ್ನು ದರ್ಗಾ, ಮಸೀದಿ, ಸ್ಮಶಾನ ಮತ್ತು ಇತರ ಸೌಲಭ್ಯಗಳ ಸ್ಥಾಪನೆಗೆ ಬಳಸಲಾಗಿದೆ ಎಂದು ಹೇಳಿದ್ದಾರೆ.
ಎಲ್ಲಾ ವಕ್ಫ್ ಆಸ್ತಿಗಳ ಮೊದಲ ಸಮೀಕ್ಷೆಯನ್ನು 1972-73 ರಲ್ಲಿ ನಡೆಸಲಾಗಿತ್ತು. ಎರಡನೇ ಸಮೀಕ್ಷೆ 2020 ರಲ್ಲಿ ನಡೆದಿತ್ತು. ವಕ್ಫ್ ಹೊಂದಿರುವ ಯಾವುದೇ ಭೂಮಿಯನ್ನು ಸರ್ಕಾರ ನೀಡಿದ್ದಲ್ಲ. ಈ ಎಲ್ಲಾ ಭೂಮಿಯನ್ನು ಜನರು ವಿವಿಧ ಉದ್ದೇಶಗಳಿಗಾಗಿ ದಾನ ಮಾಡಿದ್ದಾರೆ. ಇದೀಗ ಈ ಆಸ್ತಿಗಳ ಮರು ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಅಲ್ಪಸಂಖ್ಯಾತರ ನಿರ್ದೇಶನಾಲಯ ಮತ್ತು ಮಂಡಳಿಯ ಸಿಇಒ ಜಿಲಾನಿ ಮೊಕಾಶಿ ಅವರು ಹೇಳಿದ್ದಾರೆ.
ಆದರೆ, ಮಂಡಳಿ ಪಟ್ಟಿ ಮಾಡಿರುವ ಭೂಮಿಯ ವಿವರಗಳು ಕಂದಾಯ ಇಲಾಖೆಗಿಂತ ಭಿನ್ನವಾಗಿವೆ ಎಂದು ಹೇಳಲಾಗುತ್ತಿದೆ.
ಕಂದಾಯ ಇಲಾಖೆಯ ಆ್ಯಪ್‌ನ ಮಾಹಿತಿಯಂತೆ ರಾಜ್ಯದಲ್ಲಿ 3,454.6 ಎಕರೆ ಭೂಮಿಯನ್ನು ವಕ್ಫ್ ಭೂಮಿ ಎಂದು ಗುರುತಿಸಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಲು ಸಮೀಕ್ಷೆ ನಡೆಸಲಾಗುತ್ತಿದ್ದು, ಜಿಯೋ ಟ್ಯಾಗ್ ಮಾಡಾಲಾಗುತ್ತಿದೆ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ವಕ್ಫ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು, ವಕ್ಫ್ ಆಸ್ತಿ ಸಾರ್ವಜನಿಕರು ಮುಸ್ಲಿಂ ಸಮಾಜಕ್ಕೆ ನೀಡಿದ ದೇಣಿಗೆ ಆಸ್ತಿಯಾಗಿದ್ದು, ಈ ಆಸ್ತಿ ಸಂರಕ್ಷಿಸುವುದು ಪುಣ್ಯದ ಕೆಲಸವಾಗಿದೆ. ಈ ಕುರಿತು ಸಮನ್ವಯತೆ ಸಾಧಿಸಬೇಕು, ಅನೇಕ ದಾನಿಗಳು ಕಾಲೇಜುಗಳು ಮತ್ತು ಆಸ್ಪತ್ರೆಗಳ ನಿರ್ಮಾಣಕ್ಕಾಗಿ ಭೂಮಿಯನ್ನು ದಾನ ಮಾಡಲು ಸಿದ್ಧರಿದ್ದಾರೆಂದು ಹೇಳಿದ್ದರು.
Advertisement