ತುಂಬಿ ತುಳುಕುತ್ತಿದ್ದ ಮೆಟ್ರೋ ರೈಲಿನಲ್ಲಿ ತಲೆ ತಿರುಗಿ ಬಿದ್ದ ಯುವತಿ: ಸಹ ಪ್ರಯಾಣಿಕರಿಂದ ರಕ್ಷಣೆ

ಪ್ರತೀ ಬೋಗಿಯಲ್ಲಿಯೂ ಎಮರ್ಜೆನ್ಸಿ ಬಟನ್ ಇರುತ್ತದೆ. ಯಾವುದೇ ಸಮಸ್ಯೆಯಾದರೂ ಜನರು ಆ ಬಟನ್ ಒತ್ತಿದರೆ, ಅದು ಲೋಕೋ ಪೈಲಟ್'ಗೆ ಸಂದೇಶ ನೀಡುತ್ತದೆ.
Namma Metro
ನಮ್ಮ ಮೆಟ್ರೋ online desk
Updated on

ಬೆಂಗಳೂರು: ಜನರಿಂದ ತುಂಬಿ ತುಳುಕುತ್ತಿದ್ದ ನಮ್ಮ ಮೆಟ್ರೋ ರೈಲಿನಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿ ಯುವತಿಯೊಬ್ಬಳು ತಲೆತಿರುಗಿ ಬಿದ್ದಿರುವ ಘಟನೆಯೊಂದು ಬುಧವಾರ ವರದಿಯಾಗಿದೆ.

ನೇರಳೆ ಮಾರ್ಗದಲ್ಲಿ ವೈಟ್‌ಫೀಲ್ಡ್‌-ಕೆಂಪೇಗೌಡ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತಿದ್ದ ಮೆಟ್ರೋ ರೈಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸಿದ್ದು, ಈ ವೇಳೆ ಮಹಿಳೆ ತಲೆ ತಿರುಗಿ ಬಿದ್ದಿದ್ದಾರೆ. ಕೂಡಲೇ ಸಹ ಪ್ರಯಾಣಿಕರು ಅವರನ್ನು ರಕ್ಷಣೆ ಮಾಡಿ, ನೀರು ಕೊಟ್ಟಿದ್ದಾರೆ.

ಸಂಜೆ 6 ಗಂಟೆ ಸುಮಾರಿಗೆ ಕೆಆರ್ ಪುರ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ್ದೆ. ಈ ವೇಳೆ ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ನಿಂತಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಬೀಳುತ್ತಿದ್ದರು. ಬಳಿಕ ಸ್ಥಳದಲ್ಲಿದ್ದವರು ಅವರಿಗೆ ಆಸನವನ್ನು ಬಿಟ್ಟುಕೊಟ್ಟು, ನೀರು ಕೊಟ್ಟರು. ಅಷ್ಟರಲ್ಲಿ ರೈಲು ಸ್ವಾಮಿ ವಿವೇಕಾನಂದ ರಸ್ತೆಯ ಮೆಟ್ರೋ ನಿಲ್ದಾಣ ತಲುಪಿತು. ನಿಲ್ದಾಣದಲ್ಲಿದ್ದ ಸಿಬ್ಬಂದಿಗೆ ಸಹಾಯಕ್ಕಾಗಿ ಕೂಗಲಾಯಿತು. ಆದರೆ, ಆ ವ್ಯಕ್ತಿ ಪ್ರತಿಕ್ರಿಯಿಸಲಿಲ್ಲ.

Namma Metro
Namma Metro: ನಮ್ಮ ಮೆಟ್ರೋ ಮಹಿಳಾ ಸಿಬ್ಬಂದಿ ಸಮಯಪ್ರಜ್ಞೆಯಿಂದ ಉಳಿಯಿತು ಯುವಕನ ಜೀವ; Video!

ಬಳಿಕ ಮೆಟ್ರೋ ಬಾಗಿಲು ಮುಚ್ಚಿತು. ಮತ್ತೆ ರೈಲು ಸಂಚರಿಸಲು ಆರಂಭಿಸಿತು. ಬಳಿಕ ತನ್ನ ಜೊತೆಗೆ ಬಂದಿದ್ದ ವ್ಯಕ್ತಿಯೊಂದಿಗೆ ಯುವತಿ ಹಲಸೂರು ಮೆಟ್ರೋ ನಿಲ್ದಾಣದಲ್ಲಿ ಇಳಿದು ಹೋದರು. ರೈಲಿನೊಳಗೆ ಯಾವ ರೀತಿ ಸಹಾಯ ಪಡೆಯಬೇಕೆಂಬುದು ಯಾರಿಗೂ ತಿಳಿದಿರಲಿಲ್ಲ ಎಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಹಾಗೂ MNCಯ ಸಿಸ್ಟಂ ವಿಶ್ಲೇಷಕ ಸುನಿಲ್ ಶರ್ಮಾ ಅವರು ಹೇಳಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಎಂಆರ್'ಸಿಎಲ್, ಪ್ರತೀ ಬೋಗಿಯಲ್ಲಿಯೂ ಎಮರ್ಜೆನ್ಸಿ ಬಟನ್ ಇರುತ್ತದೆ. ಯಾವುದೇ ಸಮಸ್ಯೆಯಾದರೂ ಜನರು ಆ ಬಟನ್ ಒತ್ತಿದರೆ, ಅದು ಲೋಕೋ ಪೈಲಟ್'ಗೆ ಸಂದೇಶ ನೀಡುತ್ತದೆ. ಸಿಸಿಟಿವಿ ಮೂಲಕ ಪರಿಸ್ಥಿತಿಯನ್ನು ಅರಿತು, ನೆರವಿಗೆ ಧಾವಿಸಲಾಗುತ್ತದೆ. ಲೋಕೋ ಪೈಲಟ್ ಪರಿಸ್ಥಿತಿ ಅವಲೋಕಿಸಿ ತುರ್ತು ಪರಿಸ್ಥಿತಿ ನಿಜವಾಗಿದ್ದರೆ ಕೂಡಲೇ ರೈಲು ನಿಲ್ಲಿಸಿ ಪರಿಹಾರ ಕ್ರಮ ಕೈಗೊಳ್ಳುತ್ತಾರೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com