
ಬೆಂಗಳೂರು: ಸಂಚಾರ ಮಾರ್ಗದುದ್ದಕ್ಕೂ ಡಬಲ್ ಡೆಕ್ಕರ್ ಫ್ಲೈಓವರ್‌ಗಳನ್ನು ಅಳವಡಿಸಬೇಕಾದ ಹಿನ್ನೆಲೆಯಲ್ಲಿ ಮೆಟ್ರೋ 3ನೇ ಹಂತದ 44.65 ಕಿಮೀ ಮಾರ್ಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯು ಈ ತಿಂಗಳ ಆರಂಭದಲ್ಲಿ ಹಠಾತ್ ಸ್ಥಗಿತಗೊಂಡಿತ್ತು. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮರುಪ್ರಾರಂಭಿಸಿದೆ.
ಹೊರ ವರ್ತುಲ ರಸ್ತೆ ಮಾರ್ಗದಲ್ಲಿ 299 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸಲ್ಲಿಸಲಾಗಿದೆ. 15,611 ಕೋಟಿ ರು. ಯೋಜನೆಯು ಎರಡು ಎಲಿವೇಟೆಡ್ ಕಾರಿಡಾರ್‌ಗಳನ್ನು ಒಳಗೊಂಡಿದೆ , ಜೆಪಿ ನಗರ IV ಹಂತದಿಂದ ಕೆಂಪಾಪುರವರೆಗೆ 32.15-ಕಿಮೀ ORR ಲೈನ್, ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗಿನ 12.5-ಕಿಮೀ ಮಾಗಡಿ ರಸ್ತೆ ಕಾರಿಡಾರ್ ಗೆದ್ರ ಸಚಿವ ಸಂಪುಟ ಆಗಸ್ಟ್ 17ರಂದು ಹಸಿರು ನಿಶಾನೆ ತೋರಿತ್ತು.
ನಾವು ಮೊದಲು ನಮ್ಮ ನೆಟ್‌ವರ್ಕ್‌ಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದ್ದೇವೆ. ಡಬಲ್ ಡೆಕ್ಕರ್ ಫ್ಲೈಓವರ್‌ಗಳನ್ನು ಸ್ಥಾಪಿಸಲು ಅಗತ್ಯವಿರುವ ಹೆಚ್ಚುವರಿ ಭೂಮಿಯನ್ನು ನಾವು ನಂತರ ಸ್ವಾಧೀನಪಡಿಸಿಕೊಳ್ಳುತ್ತೇವೆ. ಒಆರ್‌ಆರ್ ಕಾರಿಡಾರ್‌ನ ಮೊದಲ ಪ್ಯಾಕೇಜ್‌ಗೆ ಸ್ವಾಧೀನಪಡಿಸಿಕೊಳ್ಳಲು ಪಟ್ಟಿಯನ್ನು ಬಿಎಂಆರ್‌ಸಿಎಲ್ ಕೆಐಎಡಿಬಿಗೆ ಸಲ್ಲಿಸಿದೆ, ಇದು ಸ್ವಾಧೀನಪಡಿಸಿಕೊಂಡ ಆಸ್ತಿಗೆ ಪರಿಹಾರವನ್ನು ಪಾವತಿಸುವ ಜವಾಬ್ದಾರಿಯನ್ನು ಹೊಂದಿದೆ ಎಂದು ಬಿಎಂಆರ್‌ಸಿಎಲ್‌ನ ಭೂ ಸ್ವಾಧೀನ ಕೋಶದ ಜನರಲ್ ಮ್ಯಾನೇಜರ್ ಚನ್ನಪ್ಪ ಗೌಡರ್ ತಿಳಿಸಿದ್ದಾರೆ.
ORR ಕಾರಿಡಾರ್‌ಗೆ ಒಟ್ಟು 857 ಆಸ್ತಿಗಳ ಅಗತ್ಯವಿದೆ, ಇದಕ್ಕಾಗಿ ನಮಗೆ 1,36,415.93 ಚದರ ಮೀಟರ್‌ನ ಒಟ್ಟು ಭೂಮಿ ಅಗತ್ಯವಿದೆ. ಪ್ಯಾಕೇಜ್-1 ಜೆಪಿ ನಗರ IV ಹಂತದಿಂದ ಮೈಸೂರು ರಸ್ತೆಯವರೆಗೆ ವಿಸ್ತರಿಸುತ್ತದೆ. "ನಮಗೆ ಒಟ್ಟು 43,372.5 ಚದರ ಮೀಟರ್ ಭೂಮಿ ಅಗತ್ಯವಿದ್ದು 27 ಆಸ್ತಿಗಳನ್ನು ಒಳಗೊಂಡಿದೆ. ಅದಕ್ಕಾಗಿ ಸದ್ಯಕ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು.
ಪ್ಯಾಕೇಜ್-2 ಮೈಸೂರು ರಸ್ತೆಯಿಂದ ಕಂಠೀರವ ಸ್ಟುಡಿಯೊ ವರೆಗೆ ರುತ್ತದೆ, ಇದಕ್ಕಾಗಿ 42,065.54 ಚದರ ಮೀಟರ್ ಭೂಮಿಯನ್ನು ಒಳಗೊಂಡಿರುವ 254 ಆಸ್ತಿಯ ಅಗತ್ಯವಿದೆ ಮತ್ತು ಪ್ಯಾಕೇಜ್-3 ರ ಕಂಠೀರವ ಸ್ಟುಡಿಯೊದಿಂದ ಕೆಂಪಾಪುರದವರೆಗೆ 50,977.86 ಚದರ ಮೀಟರ್ ವ್ಯಾಪ್ತಿಯ 224 ಆಸ್ತಿಗಳ ಅಗತ್ಯವಿದೆ.
ಪ್ಯಾಕೇಜ್-2 ಗಾಗಿ, ನಾವು ಸ್ವಾಧೀನಪಡಿಸಿಕೊಳ್ಳಬೇಕಾದ ಭೂಮಿಯ ಜಂಟಿ ಸಮೀಕ್ಷೆಯನ್ನು ಪ್ರಾರಂಭಿಸಿದ್ದೇವೆ. ಪ್ಯಾಕೇಜ್-3 ರ ಸಂದರ್ಭದಲ್ಲಿ, ಭೂಸ್ವಾಧೀನ ಕಾಯ್ದೆಯ 28(1) ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆಯನ್ನು ಮುಂದಿನ ವಾರ ಹೊರಡಿಸಲು ನಾವು ಯೋಜಿಸಿದ್ದೇವೆ. ಮಾಗಡಿ ರಸ್ತೆ ಕಾರಿಡಾರ್‌ಗೆ ಇನ್ನೂ ಭೂಸ್ವಾಧೀನ ಕಾರ್ಯ ಆರಂಭವಾಗಿಲ್ಲ. ಈ ಮಾರ್ಗವು 2028 ರ ಗಡುವನ್ನು ಹೊಂದಿದೆ ಮತ್ತು 2051 ರ ವೇಳೆಗೆ 9.12 ಲಕ್ಷ ಪ್ರಯಾಣಿಕರನ್ನು ಸಾಗಿಸುವ ನಿರೀಕ್ಷೆಯಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.
Advertisement