ಹನಿಟ್ರ್ಯಾಪ್ ಮಾಡಿ SDPI ಮುಖಂಡನಿಗೆ ಬ್ಲ್ಯಾಕ್'ಮೇಲ್: ಮಹಿಳೆ ವಿರುದ್ಧ ದೂರು ದಾಖಲು

ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾಳೆಂದು ನೆಲಮಂಗಲದ ಲೋಹಿತ್ ನಗರದ ನಿವಾಸಿ ಬಿಆರ್ ಭಾಸ್ಕರ್ ಪ್ರಸಾದ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಮಹಿಳೆಯೊಬ್ಬರು ಹನಿ ಟ್ರ್ಯಾಪ್ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿ ಎಸ್‌ಡಿಪಿಐ ಮುಖಂಡರೊಬ್ಬರು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹನಿಟ್ರ್ಯಾಪ್ ಮೂಲಕ ಮಹಿಳೆ 10 ಲಕ್ಷ ರೂ ನೀಡುವಂತೆ ಬೆದರಿಕೆ ಹಾಕುತ್ತಿದ್ದು, ಹಣ ನೀಡದಿದ್ದರೆ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾಳೆಂದು ನೆಲಮಂಗಲದ ಲೋಹಿತ್ ನಗರದ ನಿವಾಸಿ ಬಿಆರ್ ಭಾಸ್ಕರ್ ಪ್ರಸಾದ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.

2 ವರ್ಷಗಳ ಹಿಂದೆ ಹೋರಾಟ, ಪ್ರತಿಭಟನೆಗಳಲ್ಲಿ ಮಹಿಳೆ ಪರಿಚಯವಾಗಿದ್ದರು. ಆಗಸ್ಟ್ 28 ರಂದು ವಾಟ್ಸಾಪ್ ಮೂಲಕ ಸಂದೇಶ ರವಾನಿಸಿದ ಮಹಿಳೆ, ಲೈಂಗಿಕ ಸಂಪರ್ಕಕ್ಕೆ ಆಹ್ವಾನಿಸಿದ್ದಳು. ನಂತರ ಸಂದೇಶ ಹಾಗೂ ವಿಡಿಯೋ ಇಟ್ಟುಕೊಂಡು ಮಾನಹರಣ ಮಾಡುವುದಾಗಿ ಬೆದರಿಕೆ ಹಾಕಿದಳು.

ಸಂಗ್ರಹ ಚಿತ್ರ
ಕಲಬುರಗಿ ಹನಿಟ್ರ್ಯಾಪ್ ಪ್ರಕರಣ: ದಲಿತ ಸೇನೆ ಅಧ್ಯಕ್ಷ ಸೇರಿ 8 ಮಂದಿ ವಿರುದ್ಧ FIR

ಭಾನುವಾರ ಶಿವಾಜಿನಗರದ ಚಿನ್ನಸ್ವಾಮಿ ಮುದಲಿಯಾರ್ ರಸ್ತೆಯಲ್ಲಿರುವ ಸುದ್ದಿ ವಾಹಿನಿಯೊಂದರ ಬಳಿ ನಿಂತಿದ್ದಾಗ ಅಪಪ್ರಚಾರ ಮಾಡಿ, ಅವಾಚ್ಯವಾಗಿ ನಿಂದಿಸಿದಳು ಎಂದು ಭಾಸ್ಕರ್ ಪ್ರಸಾದ್ ಅವರು ಆರೋಪ ಮಾಡಿದ್ದಾರೆ.

ಸುಲಿಗೆ, ಕ್ರಿಮಿನಲ್ ಬೆದರಿಕೆ ಮತ್ತು ಇತರ ಆರೋಪ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಮಹಿಳೆ ವಿರುದ್ಧ ಐಟಿ ಕಾಯ್ದೆ ಮತ್ತು ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com