ಗಾರ್ಡನ್ ಸಿಟಿ ಟ್ಯಾಗ್ ಮರು ಸ್ಥಾಪಿಸಲು ಪಾಲಿಕೆ ಸಜ್ಜು: ಬೆಂಗಳೂರಿನಾದ್ಯಂತ 80,000 ಸಸಿ ನೆಟ್ಟ ಬಿಬಿಎಂಪಿ!

ಬೆಂಗಳೂರಿಗೆ ಇರುವ ಗಾರ್ಡನ್ ಸಿಟಿ ಟ್ಯಾಗ್ ಮರುಪಡೆಯಲು ಮತ್ತು ಪ್ರಕೃತಿಯ ಬಗ್ಗೆ ಜವಾಬ್ದಾರಿಯನ್ನು ಮೈಗೂಡಿಸಿಕೊಳ್ಳುವಂತೆ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗವು 2024-2025 ಕ್ಕೆ 89,500 ಸಸಿಗಳನ್ನು ನೆಡುವ ಗುರಿ ಹೊಂದಿದ್ದು, ಸೆಪ್ಟೆಂಬರ್ 15 ರವರೆಗೆ ನಗರದಾದ್ಯಂತ ಸುಮಾರು 80,000 ಸಸಿಗಳನ್ನು ನೆಟ್ಟಿದೆ.

ಬೆಂಗಳೂರಿಗೆ ಇರುವ ಗಾರ್ಡನ್ ಸಿಟಿ ಟ್ಯಾಗ್ ಮರುಪಡೆಯಲು ಮತ್ತು ಪ್ರಕೃತಿಯ ಬಗ್ಗೆ ಜವಾಬ್ದಾರಿಯನ್ನು ಮೈಗೂಡಿಸಿಕೊಳ್ಳುವಂತೆ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಸಸಿ ನೆಡುವ ಅಭಿಯಾನ ಆರಂಭಿಸಿದೆ. ಹಸಿರೀಕರಣಕ್ಕಾಗಿ ಹೆಚ್ಚಿನ ಸಸಿಗಳನ್ನು ನೆಡುವಂತೆ ಬಿಬಿಎಂಪಿ ಉನ್ನತ ಅಧಿಕಾರಿಗಳಿಗೆ ಡಿಸಿಎಂ ಸೂಚಿಸಿದ್ದಾರೆ. “ನಾವು ಇದುವರೆಗೆ ಎಂಟು ವಲಯಗಳನ್ನು ಒಳಗೊಂಡಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿ 77,790 ಸಸಿಗಳನ್ನು ನೆಟ್ಟಿದ್ದೇವೆ. ಹೊರವಲಯದ ಯಲಹಂಕ, ಬೊಮ್ಮನಹಳ್ಳಿ, ದಾಸರಹಳ್ಳಿಯಲ್ಲಿ ಅತಿ ಹೆಚ್ಚು ಸಸಿ ನೆಡಲಾಗಿದೆ. ಮುಂದಿನ ದಿನಗಳಲ್ಲಿ, ಉಳಿದ ಪ್ರದೇಶಗಳಲ್ಲಿ ಈ ಸಸಿ ನಡುವ ಅಭಿಯಾನ ಮುಂದುವರಿಸಲಾಗುವುದು. ಗುತ್ತಿಗೆದಾರರು ಕೆರೆ ಬಫರ್ ವಲಯಗಳು, ಉದ್ಯಾನವನಗಳು ಮತ್ತು ಇತರ ಪ್ರದೇಶಗಳಲ್ಲಿ ಹೊಂಡಗಳನ್ನು ಅಗೆಯಲು ಪ್ರಾರಂಭಿಸಿದ್ದಾರೆ ಎಂದು ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿಎಲ್‌ಜಿ ಸ್ವಾಮಿ ಹೇಳಿದರು.

ಕಾಮಗಾರಿ ಪಡೆದ ಏಜೆನ್ಸಿ ಅಥವಾ ಗುತ್ತಿಗೆದಾರರು 2027ರ ವರೆಗೆ ಇವುಗಳ ನಿರ್ವಹಣೆಯ ಹೊಣೆ ಹೊರಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೂಕ್ತ ಭೂಮಿ ಹುಡುಕುವುದೇ ದೊಡ್ಡ ಸವಾಲಾಗಿದೆ ಎಂದು ಬಿಬಿಎಂಪಿ ಗುತ್ತಿಗೆದಾರ ಕೆಂಪಯ್ಯ ಚನ್ನಪ್ಪ ತಿಳಿಸಿದ್ದಾರೆ. ಈಗ ಪ್ರಕ್ರಿಯೆ ಮುಗಿದಿದ್ದು, ಬೇಸಿಗೆಯಲ್ಲಿ ಸಸಿಗಳಿಗೆ ನೀರುಣಿಸುವುದು ಮತ್ತು ಸಸಿಗಳು ಬೆಳೆಯುವವರೆಗೆ ಕನಿಷ್ಠ 3-5 ವರ್ಷಗಳವರೆಗೆ ಅಳವಡಿಸಲಾದ ಟ್ರೀ ಗಾರ್ಡ್‌ಗಳು ಹಾಗೇ ಇರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಬೇಸಿಗೆಯಲ್ಲಿ ನಾವು ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಬೇಕು, ವಿಶೇಷವಾಗಿ ಮಾರ್ಚ್‌ನಿಂದ ಮೇ ನಡುವೆ ದಿನಕ್ಕೆ ಒಮ್ಮೆಯಾದರೂ ಸಸಿಗಳಿಗೆ ನೀರುಣಿಸಬೇಕು. ಪೂರ್ವ ವಲಯದ 4,000 ಸಸಿಗಳಲ್ಲಿ, ನಾವು ಈಗಾಗಲೇ 3,000 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದೇನೆ ಮತ್ತು ಉಳಿದವುಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುತ್ತೇನೆ. ನವೆಂಬರ್‌ನಲ್ಲಿ ಮುಂಗಾರು ದುರ್ಬಲಗೊಳ್ಳುವುದರಿಂದ ಸಸಿ ನೆಡುವ ಕಾರ್ಯದಲ್ಲಿ ತೊಡಗಿರುವ ಬಹುತೇಕ ಗುತ್ತಿಗೆದಾರರು ತಮ್ಮ ಟಾರ್ಗೆಟ್ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಚನ್ನಪ್ಪ ಹೇಳಿದರು.

ಸಾಂದರ್ಭಿಕ ಚಿತ್ರ
ಅನಧಿಕೃತ ಕಟ್ಟಡದ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಎಂಜಿನಿಯರ್‌ಗಳಿಂದ ಉದ್ದೇಶಪೂರ್ವಕ ವಿಳಂಬ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com