ಇದು ಬಿರು ಬೇಸಿಗೆಯ ಟ್ರೈಲರ್: ಫೆಬ್ರವರಿ ಆರಂಭದಲ್ಲೇ ಬೆಂಗಳೂರಿನಲ್ಲಿ ತಾಪಮಾನ 32 ಡಿಗ್ರಿ!

ಮುಂಬರುವ ಬಿರು ಬೇಸಿಗೆಯ ಪರಿಚಯ ಫೆಬ್ರವರಿಯಲ್ಲೇ ಆಗುತ್ತಿದ್ದು, ರಾಜಧಾನಿ ಉದ್ಯಾನನಗರಿ ಬೆಂಗಳೂರಿನಲ್ಲಿ ತಾಪಮಾನ ಮಂಗಳವಾರ 32 ಡಿಗ್ರಿಗೆ ಏರಿಕೆಯಾಗಿದೆ.
ಬೇಸಿಗೆ ಕರ್ನಾಟಕ
ಬೇಸಿಗೆ ಕರ್ನಾಟಕ
Updated on

ಬೆಂಗಳೂರು: ಮುಂಬರುವ ಬಿರು ಬೇಸಿಗೆಯ ಪರಿಚಯ ಫೆಬ್ರವರಿಯಲ್ಲೇ ಆಗುತ್ತಿದ್ದು, ರಾಜಧಾನಿ ಉದ್ಯಾನನಗರಿ ಬೆಂಗಳೂರಿನಲ್ಲಿ ತಾಪಮಾನ ಮಂಗಳವಾರ 32 ಡಿಗ್ರಿಗೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಬಿಸಿಗೆ ಆರಂಭಕ್ಕೆ ದಿನಗಣನೆ ಶುರುವಾಗಿರುವಂತೆಯೇ ಇತ್ತ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಲೇ ತಾಪಮಾನ ಬೇಸಿಗೆಯ ಪರಿಚಯ ನೀಡುತ್ತಿವೆ. ರಾಜಧಾನಿ ಬೆಂಗಳೂರಿನಲ್ಲಿ ತಾಪಮಾಣ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ತಾಪಮಾನ 32 ಡಿಗ್ರಿಗೆ ಏರಿಕೆಯಾಗಿದೆ. ಗಾಳಿ ವೇಗ ಪ್ರತೀ ಗಂಟೆಗೆ 22 ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ವಾಯು ಗುಣಮಟ್ಟ ಕೂಡ ಕಳಪೆ ಮಟ್ಟದಲ್ಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಅ್ಯಕ್ಯುವೆದರ್ ವರದಿ ಮಾಡಿದೆ.

ಉದ್ಯಾನನಗರಿ ಬೆಂಗಳೂರಿನಲ್ಲಿ ಫೆಬ್ರವರಿಯಲ್ಲೇ ತಾಪಮಾನ ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿರುವಂತೆ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಜನರನ್ನು ಹೈರಾಣಾಗಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಸಿ ವಾತಾವರಣ ಮುಂದುವರೆದಿದ್ದು, ಹಾಲಿ ಪರಿಸ್ಥಿತಿಗೆ ಎಲ್ ನಿನೊ ಕಾರಣ ಎಂದು ಹೇಳಲಾಗಿದೆ. ಎಲ್ ನಿನೋ ಪರಿಣಾಮದಿಂದಾಗಿ ರಾಜ್ಯದ ಮಳೆ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಅಲ್ಲದೆ ಇದೇ ಎಲ್ ನಿನೋ ಪರಿಣಾಣ ಇದೀಗ ರಾಜ್ಯದಲ್ಲಿ ಅವಧಿಗೂ ಮುನ್ನವೇ ಬೇಸಿಗೆ ಕಾಲಿಡುವಂತೆ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೇಸಿಗೆ ವಿಸ್ತರಣೆ
ಫೆಬ್ರವರಿ ಆರಂಭದಿಂದಲೇ ನಗರದಲ್ಲಿ ಸರಾಸರಿ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು, ವಿಶೇಷವಾಗಿ ಮಧ್ಯಾಹ್ನದ ಸಮಯದಲ್ಲಿ ಸೆಖೆಯ ಹೆಚ್ಚಳ ಉಂಟಾಗುತ್ತಿದೆ. ಪೂರ್ವ ಪೆಸಿಫಿಕ್ ಸಾಗರದಲ್ಲಿ ಮೇಲ್ಮೈ ನೀರಿನ ತಾಪಮಾನ ಏರಿಕೆಗೆ ಕಾರಣವಾಗುವ ಹವಾಮಾನ ಪರಿಸ್ಥಿತಿಯಾದ ಎಲ್ನಿನೋ ಪರಿಣಾಮವು ಪ್ರಬಲವಾಗಿದೆ. ಪ್ರತಿ ವರ್ಷ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸೆಖೆ ಹೆಚ್ಚಾಗುತ್ತಿದೆ ಎಂದು ಬೆಂಗಳೂರಿನ ಹವಾಮಾನ ಇಲಾಖೆ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ತಾಂತ್ರಿಕವಾಗಿ ಫೆಬ್ರವರಿ ಚಳಿಗಾಲದ ತಿಂಗಳಾಗಿದ್ದರೂ, ಎಲ್ ನಿನೋ ಪರಿಣಾಮವು ತಾಪಮಾನವನ್ನು ಹೆಚ್ಚಿಸುತ್ತಿದೆ. ಮಾರ್ಚ್ ನಂತರ ಬಿಸಿಲು ಕಡಿಮೆಯಾಗಬಹುದು. ಆದರೆ ಪ್ರಸ್ತುತ ಪರಿಸ್ಥಿತಿಗಳು ಬೇಸಿಗೆಯ ವಿಸ್ತರಣೆಯನ್ನು ಸೂಚಿಸುತ್ತಿದ್ದು, ಬೇಸಿಗೆಯು ಕಳೆದ ವರ್ಷಕ್ಕಿಂತ ಕಠಿಣವಾಗಿರಬಹುದು. ಮಾರ್ಚ್ ಆರಂಭದಲ್ಲಿ ಕರಾವಳಿ ಕರ್ನಾಟಕದಲ್ಲಿ ಬಿಸಿಗಾಳಿ ಉಂಟಾಗಬಹುದು. ಆದರೆ ಮುಂದಿನ ಏಳು ದಿನಗಳ ಮುನ್ಸೂಚನೆಯಲ್ಲಿ ಬಿಸಿಗಾಳಿ ಕಾಣಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com