ರಾಜ್ಯದ ಶೇ 54ರಷ್ಟು ಕುಟುಂಬಗಳಲ್ಲಿ ಕನಿಷ್ಠ ಒಬ್ಬರಲ್ಲಿ ಕೋವಿಡ್ ಸೋಂಕು ಇದೆ!
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದ ಶೇ 54ರಷ್ಟು ಕುಟುಂಬಗಳ ಕನಿಷ್ಠ ಒಬ್ಬರು ಕೋವಿಡ್ನಿಂದ ಬಳಲುತ್ತಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.
ರಾಜ್ಯದ ಹೆಚ್ಚಿನ ಕುಟುಂಬಗಳಲ್ಲಿ ಒಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಕೋವಿಡ್ ಅಥವಾ ಇತರ ವೈರಲ್, ಜ್ವರದಂತಹ ರೋಗಲಕ್ಷಣ ಹೊಂದಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ಸಮೀಕ್ಷೆ ತಿಳಿಸಿದೆ.
ಕೋವಿಡ್/ ಫ್ಲೂ /ವೈರಲ್ ಜ್ವರದ ಲಕ್ಷಣಗಳಾದ ಮೂಗು ಸ್ರವಿಸುವಿಕೆ, ಗಂಟಲು ನೋವು, ಕೆಮ್ಮು, ತಲೆನೋವು, ಕೀಲು ನೋವು, ದೇಹ ನೋವು, ಉಸಿರಾಟದ ಸಮಸ್ಯೆಗಳನ್ನು ಕುಟುಂಬದ ಸದಸ್ಯರು ಹೊಂದಿರುವುದಾಗಿ ಎಂದು ವರದಿಯಲ್ಲಿ ಹೇಳಿದೆ.
ಸಮೀಕ್ಷೆಯಲ್ಲಿ ಒಟ್ಟು 3,000 ಮಂದಿ ಭಾಗವಹಿಸಿದ್ದು, ಈ ಪೈಕಿ ಶೇ.62 ಪುರುಷರು ಮತ್ತು ಶೇ.38 ರಷ್ಟು ಮಂದಿ ಮಹಿಳೆಯರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಶೇ 23 ರಷ್ಟು ಜನರು ತಮ್ಮ ಮನೆಯಲ್ಲಿ ಮನೆಯಲ್ಲಿ ‘ನಾಲ್ಕು ಮಂದಿ ಅಥವಾ ಅದಕ್ಕಿಂತಲೂ ಹೆಚ್ಚಿನ ಜನರಲ್ಲಿ ಕೋವಿಡ್ / ವೈರಲ್ ಜ್ವರ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆಂದು ವರದಿಯಲ್ಲಿ ತಿಳಿಸಿದೆ.
ಕೊರೊನಾ ವೈರಸ್ನ ಒಮಿಕ್ರಾನ್ ರೂಪಾಂತರ ಜೆಎನ್.1 ಹರಡುವಿಕೆ ತೀವ್ರಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ