ಗೋವಾದಲ್ಲಿ ಹೊಸ ವರ್ಷ ಆಚರಣೆ, ಮಗುವಿನ ಮೃತದೇಹ ಜೊತೆ 19 ಗಂಟೆ ಕಳೆದಿದ್ದ ಸಿಇಒ ಸುಚನಾ ಸೇಠ್

ಬೆಂಗಳೂರು ಮೂಲದ ಎಐ ಸ್ಟಾರ್ಟಪ್ ಸಿಇಒ ಸುಚನಾ ಸೇಠ್ ಅವರು ಗೋವಾದಲ್ಲಿ ತನ್ನ 4 ವರ್ಷದ ಮಗ ಚಿನ್ಮಯ್‌ನನ್ನು ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಹತ್ಯೆ ಮಾಡುವ ಮೊದಲು ಹೊಸ ವರ್ಷವನ್ನು ಆಚರಿಸಿದ್ದರು ಎಂದು ತಿಳಿದುಬಂದಿದೆ. ತನ್ನ ಮಗನನ್ನು ಸರಿಯಾಗಿ ಹೇಗೆ ಬೆಳೆಸುವುದು ಎಂದು ತಿಳಿದುಕೊಳ್ಳಲು ಬೆಂಗಳೂರಿನಲ್ಲಿ "ಪೋಷಕರ ಚಿಕಿತ್ಸೆ" ಎಂಬ ಮಾನಸಿಕ ಥೆರಪಿಗೆ ಒಳಪಟ್ಟಿದ್ದರು ಎಂ
ಮಗುವಿನೊಂದಿಗೆ ಸುಚನಾ ಸೇಠ್
ಮಗುವಿನೊಂದಿಗೆ ಸುಚನಾ ಸೇಠ್

ಪಣಜಿ/ಬೆಳಗಾವಿ: ಬೆಂಗಳೂರು ಮೂಲದ ಎಐ ಸ್ಟಾರ್ಟಪ್ ಸಿಇಒ ಸುಚನಾ ಸೇಠ್ ಅವರು ಗೋವಾದಲ್ಲಿ ತನ್ನ 4 ವರ್ಷದ ಮಗ ಚಿನ್ಮಯ್‌ನನ್ನು ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಹತ್ಯೆ ಮಾಡುವ ಮೊದಲು ಹೊಸ ವರ್ಷವನ್ನು ಆಚರಿಸಿದ್ದರು ಎಂದು ತಿಳಿದುಬಂದಿದೆ. ತನ್ನ ಮಗನನ್ನು ಸರಿಯಾಗಿ ಹೇಗೆ ಬೆಳೆಸುವುದು ಎಂದು ತಿಳಿದುಕೊಳ್ಳಲು ಬೆಂಗಳೂರಿನಲ್ಲಿ "ಪೋಷಕರ ಚಿಕಿತ್ಸೆ" ಎಂಬ ಮಾನಸಿಕ ಥೆರಪಿಗೆ ಒಳಪಟ್ಟಿದ್ದರು ಎಂಬುದು ಸಹ ಗೊತ್ತಾಗಿದೆ.

ಡಿಸೆಂಬರ್ 31 ರಿಂದ ಜನವರಿ 4 ರವರೆಗೆ ಸುಚನಾ ಸೇಠ್ ಮಗನೊಂದಿಗೆ ಗೋವಾದಲ್ಲಿದ್ದರು. ನಂತರ ಬೆಂಗಳೂರಿಗೆ ಹಿಂತಿರುಗಿ ಜನವರಿ 6 ರಂದು ಮತ್ತೆ ಗೋವಾಕ್ಕೆ ಹೋದರು. ಗೋವಾದಲ್ಲಿ ಸೋಲ್ ಬನನ್ ಗ್ರಾಂಡೆ ಅಪಾರ್ಟ್ ಮೆಂಟ್ ಗೆ ಹೋದ ಎರಡು ಗಂಟೆ ನಂತರ ಸುಚನಾ ಸೇಠ್ ತನ್ನ ಮಗನನ್ನು ಕೊಂದಿದ್ದಾರೆ ಎಂದು ಗೋವಾ ಪೊಲೀಸರಿಗೆ ಗೊತ್ತಾಗಿದೆ. ಜನವರಿ 7 ರಂದು ಮಧ್ಯರಾತ್ರಿ ಚೆಕ್ ಔಟ್ ಮಾಡುವ ಮೊದಲು ಶವವನ್ನು 19 ಗಂಟೆಗಳ ಕಾಲ ಕೋಣೆಯಲ್ಲಿ ಇರಿಸಿದ್ದರು. 

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಚಿನ್ಮಯ್ 36 ಗಂಟೆಗಳ ಹಿಂದೆ ಮೃತಪಟ್ಟಿರಬಹುದು ಎಂದು ತಿಳಿದುಬಂದಿದೆ. ಅಂದರೆ ಜನವರಿ 6ರಂದು ಸರ್ವಿಸ್ ಅಪಾರ್ಟ್‌ಮೆಂಟ್‌ಗೆ ಚೆಕ್ ಇನ್ ಆದ ಕೇವಲ ಎರಡು ಗಂಟೆಗಳ ನಂತರ ಸುಚನಾ ಮಗುವನ್ನು ಕೊಂದಿದ್ದಾರೆ. ಜನವರಿ 8 ರಂದು ಚಿತ್ರದುರ್ಗದಲ್ಲಿ ಮಧ್ಯಾಹ್ನಕ್ಕೆ ಮೊದಲು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಸುಚನಾ ಸೇಠ್ ತನ್ನ ಮಗನನ್ನು ಕೊಂದ ನಂತರ ಆಕೆಯ ಸೆಲ್‌ಫೋನ್‌ನಿಂದ ಯಾವುದೇ ಕರೆ ಮಾಡಿಲ್ಲ ಮತ್ತು ಸಂದೇಶಗಳನ್ನು ಕಳುಹಿಸಿಲ್ಲ. ಜನವರಿ 7 ರಂದು ರಾತ್ರಿ 11.45 ಕ್ಕೆ ರಿಸೆಪ್ಷನ್ ಗೆ ಕರೆ ಮಾಡಿ ಅಲ್ಲಿನ ಸಿಬ್ಬಂದಿಗೆ ಬೆಂಗಳೂರಿಗೆ ಕ್ಯಾಬ್ ಬುಕ್ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಮಗನ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಗೋವಾದಿಂದ ಬೆಂಗಳೂರಿಗೆ ಸೇಠ್ ತೆರಳಿದ್ದರು. 

ಸೇಠ್ ಪಡೆದುಕೊಂಡ "ಪೋಷಕರ ಚಿಕಿತ್ಸೆ" ಬಗ್ಗೆ ಗೋವಾ ಪೊಲೀಸರು ಬೆಂಗಳೂರಿನ ಮಾನಸಿಕ ತಜ್ಞರೊಂದಿಗೆ ಮಾತನಾಡುವ ನಿರೀಕ್ಷೆಯಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಸುಚನಾರನ್ನು ಶೀಘ್ರದಲ್ಲೇ ಗೋವಾದ ಇನ್‌ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ ಮತ್ತು ಹ್ಯೂಮನ್ ಬಿಹೇವಿಯರ್‌ನಲ್ಲಿ ಮನೋವೈದ್ಯಕೀಯ ಮೌಲ್ಯಮಾಪನಕ್ಕೆ ಒಳಗಾಗಬಹುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com