ಮೂರು ವರ್ಷಗಳಿಂದ ಕೆಲಸ ಸಿಗ್ತಿಲ್ಲ: ತನಗೆ ತಾನೇ ಶ್ರದ್ಧಾಂಜಲಿ ಫೋಸ್ಟ್ ಹಾಕಿಕೊಂಡ ಯುವಕ!

ಹೌದು. ಪ್ರಶಾಂತ್ ಹರಿದಾಸ್ ಎಂಬ ಯುವಕ ತನ್ನದೇ ಶ್ರದ್ಧಾಂಜಲಿ ಫೋಸ್ಟ್ ಹಾಕಿಕೊಂಡು ಕೆಲಸಕ್ಕಾಗಿ ಹುಡುಕಾಟದ ವೇಳೆ ತಾನು ಪಟ್ಟ ಕಷ್ಟ, ಮಾನಸಿಕ ಯಾತನೆಗಳನ್ನು ಹೇಳಿಕೊಂಡಿದ್ದಾರೆ.
RIP Post
ಶ್ರದ್ಧಾಂಜಲಿ ಫೋಸ್ಟ್
Updated on

ಬೆಂಗಳೂರು: ಮೂರು ವರ್ಷಗಳಿಂದ ಕೆಲಸ ಸಿಗದೆ ಹತಾಶೆಗೊಂಡ ಬೆಂಗಳೂರಿನ ಯುವಕನೋರ್ವ ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್ ನಲ್ಲಿ ಮಾಡಿರುವ ವಿಚಿತ್ರ ಫೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಹೌದು. ಪ್ರಶಾಂತ್ ಹರಿದಾಸ್ ಎಂಬ ಯುವಕ ತನ್ನದೇ ಶ್ರದ್ಧಾಂಜಲಿ ಫೋಸ್ಟ್ ಹಾಕಿಕೊಂಡು ಕೆಲಸಕ್ಕಾಗಿ ಹುಡುಕಾಟದ ವೇಳೆ ತಾನು ಪಟ್ಟ ಕಷ್ಟ, ಮಾನಸಿಕ ಯಾತನೆಗಳನ್ನು ಹೇಳಿಕೊಂಡಿದ್ದಾರೆ.

ಧನ್ಯವಾದಗಳು ಲಿಂಕ್ಡ್ ಇನ್, ಉದ್ಯೋಗದಾತರಿಗೆ ಧನ್ಯವಾದಗಳು. ನನ್ನ ಅರ್ಜಿಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ಉದ್ಯೋಗ ಹುಡುಕಲು ಪ್ರಯತ್ನಿಸುತ್ತಾ ನನ್ನ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿದ್ದಕ್ಕಾಗಿ ಧನ್ಯವಾದಗಳು. ಈ ಫೋಸ್ಟ್ ನಂತರ ಯಾರೂ ನನನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂದು ನನಗೆ ಚೆನ್ನಾಗಿಯೇ ತಿಳಿದಿದೆ. RIP ಎಂದು ಬರೆದುಕೊಂಡಿದ್ದಾನೆ.

RIP Post
ಕೆಲಸ ಸಿಗದೆ ತವರಿಗೆ ಮರಳಿದ್ದ ವ್ಯಕ್ತಿಗೆ ಬಂಪರ್: ಪತ್ನಿಯಿಂದ ಸಾಲ ಪಡೆದು ಲಾಟರಿ ಖರೀದಿಸಿದ್ದವನಿಗೆ 28 ಕೋಟಿ ರೂ.!

ಆದಾಗ್ಯೂ, ಕೆಲಸ ಸಿಗುವುದರಲ್ಲಿ ಮಾತ್ರ ಸತ್ತಿದ್ದೇನೆ. ಆದರೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹೋಗಲ್ಲ. ಜೀವನವನ್ನು ನಾನು ಇಷ್ಟಪಡುತ್ತೇನೆ ಎಂದು ಯುವಕ ಸ್ಪಷ್ಟಪಡಿಸಿದ್ದಾನೆ. ಈ ಫೋಸ್ಟ್ ಗೆ ಬಳಕೆದಾರರು ನಾನಾ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com