ಬಹುಕೋಟಿ ಹಗರಣ: ಇಡಿಯಿಂದ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕನ ಬಂಧನ

ಪ್ರಕರಣದ ವಿವಿಧ ಆರೋಪಿಗಳ ವಿರುದ್ಧ ಇಡಿ ಏಪ್ರಿಲ್ 4 ರಂದು ಮತ್ತು ಬೆಂಗಳೂರಿನ ವಿವಿ ಟವರ್‌ನಲ್ಲಿರುವ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.
K'taka Bhovi Development Corp
ಭೋವಿ ಅಭಿವೃದ್ಧಿ ನಿಗಮ
Updated on

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಭಾನುವಾರ ತಿಳಿಸಿದೆ. ಏಪ್ರಿಲ್ 5ರಂದು ನಾಗರಾಜಪ್ಪ ಅವರನ್ನು ಬಂಧಿಸಲಾಗಿದ್ದು, ಪಿಎಂಎಲ್ ವಿಶೇಷ ನ್ಯಾಯಾಲಯ 14 ದಿನಗಳ ಕಾಲ ಕಸ್ಟಡಿಗೆ ನೀಡಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಭೋವಿ ಸಮುದಾಯದ ಕಲ್ಯಾಣಕ್ಕಾಗಿ KBDCಯಿಂದ 97 ಕೋಟಿ ರೂಪಾಯಿ ದುರುಪಯೋಗ ಮತ್ತು ವರ್ಗಾವಣೆ ಆರೋಪದ ಮೇಲೆ ಪೊಲೀಸರು ಅನೇಕ ಎಫ್ ಐಆರ್ ದಾಖಲಿಸಿದ್ದರು.

ಪ್ರಕರಣದ ವಿವಿಧ ಆರೋಪಿಗಳ ವಿರುದ್ಧ ಇಡಿ ಏಪ್ರಿಲ್ 4 ರಂದು ಮತ್ತು ಬೆಂಗಳೂರಿನ ವಿವಿ ಟವರ್‌ನಲ್ಲಿರುವ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.

K'taka Bhovi Development Corp
ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮ ಅವ್ಯವಹಾರ; CID ವಿಚಾರಣೆಗೊಳಪಟ್ಟಿದ್ದ ಮಹಿಳೆ ಆತ್ಮಹತ್ಯೆ

ಭೋವಿ ಸಮುದಾಯದ ಏಜೆಂಟರು ಒದಗಿಸಿದ ‘ನಕಲಿ’ ಫಲಾನುಭವಿಗಳ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಕೆಬಿಡಿಸಿಯಿಂದ ಹಣವನ್ನು ಬೇರೆಡೆಗೆ ವರ್ಗಾಯಿಸುವಲ್ಲಿ ನಾಗರಾಜಪ್ಪ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇತರ ಶಂಕಿತ, ಆರೋಪಿಗಳೊಂದಿಗೆ ಶಾಮೀಲಾಗಿ ಅವರ ಸಹಚರರ ಹೆಸರಿನಲ್ಲಿ ಸಂಸ್ಥೆ ಮೂಲಕ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಇಡಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com