ಟೊಮೆಟೊ ದರ ದಿಢೀರ್‌ ಕುಸಿತ: ಕೆಜಿಗೆ 30 ರೂ ಇದ್ದ ಬೆಲೆ 2 ರೂಪಾಯಿಗೆ ಇಳಿಕೆ; ರೈತರು ಕಂಗಾಲು

ಕೆಜಿಗೆ 30 ರೂ.ಗೆ ಮಾರಾಟವಾಗುತ್ತಿದ್ದ ಟೊಮೆಟೊ ಈಗ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಜಿಗೆ 2 ರೂ.ಗೆ ಮಾರಾಟವಾಗುತ್ತಿದೆ.
ಟೊಮೆಟೊ (ಸಾಂದರ್ಭಿಕ ಚಿತ್ರ)
ಟೊಮೆಟೊ (ಸಾಂದರ್ಭಿಕ ಚಿತ್ರ)
Updated on

ಗದಗ: ಟೊಮ್ಯಾಟೊ ಬೆಲೆ ದಿಢೀರ್ ಕುಸಿತ ಕಂಡಿದ್ದು, ಈ ಬೆಳವಣಿಗೆ ಗದಗ ಜಿಲ್ಲೆಯ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಕೆಜಿಗೆ 30 ರೂ.ಗೆ ಮಾರಾಟವಾಗುತ್ತಿದ್ದ ಟೊಮೆಟೊ ಈಗ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಜಿಗೆ 2 ರೂ.ಗೆ ಮಾರಾಟವಾಗುತ್ತಿದೆ.

ಪೂರ್ವ ಮುಂಗಾರು ಮಳೆಯ ಪರಿಣಾಮ ಕಳೆದ ವಾರದಿಂದ ಬೆಲೆಗಳು ಕುಸಿಯಲು ಪ್ರಾರಂಭಿಸಿದೆ. ಈ ಬಾರಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹೆಚ್ಚು ರೈತರು ಟೊಮೆಟೊ ಬೆಳೆದಿದ್ದಾರೆ. ಜತೆಗೆ, ಬಿಸಿಲ ವಾತಾವರಣದಿಂದಾಗಿ ಕಾಯಿಗಳು ಬೇಗ ಹಣ್ಣಾಗುತ್ತವೆ. ಅಲ್ಲದೆ, ಹೊರರಾಜ್ಯಗಳಲ್ಲೂ ಟೊಮೆಟೊ ಹೆಚ್ಚಾಗಿ ಬೆಳೆದಿರುವುದರಿಂದ ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ಹಣ್ಣು ರವಾನೆಯಾಗುತ್ತಿಲ್ಲ. ಹೀಗಾಗಿ, ಮಾರುಕಟ್ಟೆಗೆ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ಬೇಡಿಕೆಯಿಲ್ಲದೆ ಬೆಲೆಗಳು ಕುಸಿದಿವೆ ಎಂದು ತಿಳಿದುಬಂದಿದೆ.

ಬೆಲೆ ಕುಸಿತ ಹಿನ್ನೆಲೆಯಲ್ಲಿ ಗದಗದ ಹಲವಾರು ರೈತರು ಎಪಿಎಂಸಿ ಅಂಗಡಿ ಮಾಲೀಕರ ವಿರುದ್ಧ ಪ್ರತಿಭಟನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳು ಟೊಮೆಟೊಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ನಡುವೆ ಹಳ್ಳಿಗಳಲ್ಲಿ ಸ್ಥಳೀಯ ಅಂಗಡಿಗಳಲ್ಲಿ ಟೊಮೆಟೋ ಬಲೆ ಕೆಜಿಗೆ ಇನ್ನೂ 20 ರೂ.ಗಳ ಆಸುಪಾಸಿನಲ್ಲಿ ಇರುವುದರಿಂದ ಕೆಲ ರೈತರು ತಮ್ಮ ಬೆಳೆಗಳನ್ನು ತೆಗೆದುಕೊಂಡು ಹೋಗಿ, ಸ್ವತಃ ಮಾರಾಟ ಮಾಡಲು ನಿರ್ಧರಿಸಿದ್ದಾರೆ.

ಟೊಮೆಟೊ (ಸಾಂದರ್ಭಿಕ ಚಿತ್ರ)
ಎಲ್ಲಾ ಬೆಲೆ ಏರಿಕೆಗಳ ನಡುವೆ ಇದೊಂದೇ ನೋಡಿ ಬೆಲೆ ಇಳಿದಿರುವ ವಸ್ತು!

ಸಗಟು ವ್ಯಾಪಾರಿಗಳು ಟೊಮೆಟೊದ ಗುಣಮಟ್ಟ ಮತ್ತು ಗಾತ್ರಕ್ಕೆ ಅನುಗುಣವಾಗಿ ಬೆಲೆಯನ್ನು ನಿರ್ಧರಿಸುತ್ತಿದ್ದಾರೆ. ನಮ್ಮ ಬೆಳೆಗಳನ್ನೇ ಚಿಲ್ಲರೆ ವ್ಯಾಪಾರಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಬೆಲೆ ಕುಸಿತವು ನಮ್ಮ ಮೇಲಷ್ಟೇ ಪರಿಣಾಮ ಬೀರಿದೆ. ಎಪಿಎಂಸಿ ಅಧಿಕಾರಿಗಳು ಈ ವಿಷಯದ ಬಗ್ಗೆ ಮೌನ ತಾಳಿರುವುದರಿಂದ ಪ್ರತಿಭಟನೆ ನಡೆಸಲಾಗಿದೆ ಎಂದು ರೈತರು ಹೇಳಿದ್ದಾರೆ.

ಗದಗದ ರೈತ ಪ್ರಕಾಶ್ ಬೀರನೂರ್ ಎಂಬವವರು ಮಾತನಾಡಿ, ನಾವು 300 ಟ್ರೇ ಟೊಮೆಟೊ ತಂದಿದ್ದೇವೆ ಆದರೆ ಕೇವಲ 1,500 ರೂ. ಮಾತ್ರ ಸಿಕ್ಕಿದೆ. ಅಂದರೆ ಪ್ರತಿ ಟ್ರೇಗೆ 50 ರೂ. ಸಿಕ್ಕಿದಯಷ್ಟೇ. ಪ್ರತಿ ಟ್ರೇನಲ್ಲಿ 25 ಕೆಜಿ ಟೊಮೆಟೊ ಇದೆ, ಅಂದರೆ ನಮಗೆ ಕೆಜಿಗೆ ಕೇವಲ 2 ರೂ. ಮಾತ್ರ ಸಿಕ್ಕಿದೆ. ಅಕಾಲಿಕ ಮಳೆ ಮತ್ತು ಟೊಮೆಟೊ ಅತಿಯಾದ ಸಂಗ್ರಹ ಇದಕ್ಕೆ ಮುಖ್ಯ ಕಾರಣ ಎಂಬುದು ನಮಗೆ ತಿಳಿದಿದೆ. ಆದರೆ, ಅಧಿಕಾರಿಗಳು ಕನಿಷ್ಠ ಬೆಂಬಲ ಬೆಲೆಯನ್ನಾದರೂ ಘೋಷಿಸಬಹುದಿತ್ತು. ನಮ್ಮಿಂದ ರೂ,2ಗೆ ಟೊಮೆಟೋ ಖರೀದಿರಿ ಮಾರುಕಟ್ಟೆಗಳಲ್ಲಿ ಕೆಜಿಗೆ 10 ರಿಂದ 20 ರೂ. ವಿಧಿಸುತ್ತಿದ್ದಾರೆ. ಸಸಿ ನೆಟ್ಟ, ಗೊಬ್ಬರ ಸಿಂಪಡಿಸಿದ, ದಿನಗೂಲಿ ಕಾರ್ಮಿಕರಿಗೆ 300 ರೂ. ನೀಡಿದ ಮತ್ತು ವರ್ಗಾವಣೆ ಶುಲ್ಕ ಪಾವತಿಸಿದ ರೈತರು ತೀರಾ ಕಡಿಮೆ ಬೆಲೆಯನ್ನು ಪಡೆಯುತ್ತಿದ್ದಾರೆ, ಆದರೆ, ಮಾರಾಟಗಾರರು ಐದು ಪಟ್ಟು ಹೆಚ್ಚು ಪಡೆಯುತ್ತಿದ್ದಾರೆ. ಇದು ರೈತರಿಗಾಗುತ್ತಿರುವ ಅನ್ಯಾಯವಾಗಿದೆ ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com