ಬೆಂಗಳೂರು-ಕಣ್ಣೂರು ಮಧ್ಯೆ ವಿಶೇಷ ಎಕ್ಸ್​ಪ್ರೆಸ್ ರೈಲು; ಯಾವಾಗ, ಎಷ್ಟು ಹೊತ್ತಿಗೆ ಇಲ್ಲಿದೆ ವಿವರ...

ರೈಲು ಸಂಖ್ಯೆ 06573 SMVT ಬೆಂಗಳೂರು-ಕಣ್ಣೂರು ವಿಶೇಷ ಎಕ್ಸ್‌ಪ್ರೆಸ್ ಇಂದು ರಾತ್ರಿ 11:55 ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ನಾಳೆ ಮಧ್ಯಾಹ್ನ 1:30 ಕ್ಕೆ ಕಣ್ಣೂರು ತಲುಪಲಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೇಸಿಗೆ ರಜೆ ಮಕ್ಕಳಿಗೆ ಶುರುವಾಗಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸುವುದಕ್ಕೆ ನೈಋತ್ಯ ರೈಲ್ವೆ ಈಗಾಗಲೇ ಕೆಲವು ವಿಶೇಷ ರೈಲುಗಳನ್ನು ಘೋಷಣೆ ಮಾಡಿದ್ದು, ಬೆಂಗಳೂರು ಮತ್ತು ಕೇರಳದ ಕಣ್ಣೂರು ನಡುವೆ ವಿಶೇಷ ಎಕ್ಸ್​​ಪ್ರೆಸ್ ರೈಲನ್ನು ಘೋಷಣೆ ಮಾಡಿದೆ.

ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಪೂರೈಸಲು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (SMVT ಬೆಂಗಳೂರು) – ಕಣ್ಣೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ಓಡಾಟ ನಡೆಸಲಿದೆ.

ಬೆಂಗಳೂರು – ಕಣ್ಣೂರು ವಿಶೇಷ ಎಕ್ಸ್​ಪ್ರೆಸ್ ರೈಲು ವೇಳಾಪಟ್ಟಿ

ರೈಲು ಸಂಖ್ಯೆ 06573 SMVT ಬೆಂಗಳೂರು-ಕಣ್ಣೂರು ವಿಶೇಷ ಎಕ್ಸ್‌ಪ್ರೆಸ್ ಇಂದು ರಾತ್ರಿ 11:55 ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ನಾಳೆ ಮಧ್ಯಾಹ್ನ 1:30 ಕ್ಕೆ ಕಣ್ಣೂರು ತಲುಪಲಿದೆ. ರೈಲು ಸಂಖ್ಯೆ 06574 ಕಣ್ಣೂರು-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ಏಪ್ರಿಲ್ 14 ಸೋಮವಾರ ಸಂಜೆ 6.25 ಕ್ಕೆ ಕಣ್ಣೂರಿನಿಂದ ಹೊರಟು ಮಂಗಳವಾರ ಬೆಳಗ್ಗೆ 8.00 ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

Representational image
ಸಾಲು ಸಾಲು ಹಬ್ಬ: ರಾಜ್ಯದ ವಿವಿಧ ಭಾಗಗಳಿಗೆ ನೈರುತ್ಯ ರೈಲ್ವೆ ವಿಶೇಷ ರೈಲುಗಳ ವ್ಯವಸ್ಥೆ

ಬೆಂಗಳೂರು – ಕಣ್ಣೂರು ವಿಶೇಷ ರೈಲಿಗೆ ಎಲ್ಲೆಲ್ಲಿ ನಿಲುಗಡೆ?

ಬೆಂಗಳೂರು – ಕಣ್ಣೂರು ವಿಶೇಷ ರೈಲಿಗೆ ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ಶೋರ್ನೂರ್, ತಿರೂರ್, ಕೋಝಿಕ್ಕೋಡ್, ವಡಕ್ಕರ, ತಲಶ್ಶೇರಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com