ಬಳ್ಳಾರಿ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

ಸಂತ್ರಸ್ತರನ್ನು ರಾಜೇಶ್ (11) ಮತ್ತು ಶಿವಶಂಕರ್ (12) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಕ್ರಿಕೆಟ್ ಆಡಿದ ನಂತರ ಮಕ್ಕಳು ಈಜಲು ಹೋಗಿದ್ದಾಗ ದುರ್ಘಟನೆ ಸಂಭವಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬಳ್ಳಾರಿ: ಜಿಲ್ಲೆಯ ಶಿಡಿಗಿನಮೊಳ ಗ್ರಾಮದಲ್ಲಿ ಹೊಲದಲ್ಲಿದ್ದ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವಿಗೀಡಾಗಿರುವ ಘಟನೆ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತರನ್ನು ರಾಜೇಶ್ (11) ಮತ್ತು ಶಿವಶಂಕರ್ (12) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಕ್ರಿಕೆಟ್ ಆಡಿದ ನಂತರ ಮಕ್ಕಳು ಈಜಲು ಹೋಗಿದ್ದಾಗ ದುರ್ಘಟನೆ ಸಂಭವಿಸಿದೆ.

'ನಾಲ್ವರು ಬಾಲಕರು ಈಜಲೆಂದು ಕೃಷಿ ಹೊಂಡಕ್ಕೆ ತೆರಳಿದ್ದಾರೆ. ಈ ವೇಳೆ ಒಬ್ಬ ನೀರಿಗಿಳಿದ ಕೂಡಲೇ ಮುಳುಗಿದರೆ, ಆತನ ರಕ್ಷಣೆಗೆಂದು ನೀರಿಗಿಳಿದ ಮತ್ತೊಬ್ಬ ಬಾಲಕ ಕೂಡ ಮುಳುಗಿದ್ದಾನೆ' ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪರಮದೇವನಹಳ್ಳಿ (ಪಿಡಿ ಗ್ರಾಮ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ರಾಜೇಶ್ ಮತ್ತು ಶಿವಶಂಕರ್ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಪ್ರಾತಿನಿಧಿಕ ಚಿತ್ರ
ಬೆಳಗಾವಿ: ಮೀನು ಹಿಡಿಯುತ್ತಿದ್ದ ವೇಳೆ ತಂದೆ, 2 ಮಕ್ಕಳು ನೀರಿನಲ್ಲಿ ಮುಳುಗಿ ಸಾವು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com