ಭಾರತೀಯ ಕುಟುಂಬಗಳು ಬದಲಾಗುತ್ತಿವೆ; ಕಾನೂನು, ಸಮಾಜದ ಮೇಲೆ ಪರಿಣಾಮ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ ನಾಗರತ್ನ

ಶಿಕ್ಷಣ ಮತ್ತು ಉದ್ಯೋಗದಿಂದ ಮಹಿಳೆಯರ ಸಾಮಾಜಿಕ-ಆರ್ಥಿಕ ವಿಮೋಚನೆಯನ್ನು ಸಮಾಜವು ಸಕಾರಾತ್ಮಕವಾಗಿ ನೋಡಬೇಕು ಮತ್ತು ಪ್ರೋತ್ಸಾಹಿಸಬೇಕು ಎಂದು ಅವರು ಸಲಹೆ ನೀಡಿದರು.
SC Judge B V Nagarathna
ಸುಪ್ರೀಂ ನ್ಯಾಯಮೂರ್ತಿ ಬಿ ವಿ ನಾಗರತ್ನ
Updated on

ಬೆಂಗಳೂರು: ಇಂದು ಭಾರತದಲ್ಲಿ ಕುಟುಂಬ ಎಂಬ ಸಂಸ್ಥೆಯು ಕ್ಷಿಪ್ರ ಪರಿವರ್ತನೆಗೆ ಒಳಗಾಗುತ್ತಿದೆ. ಈ ಬದಲಾವಣೆಗಳು ಕುಟುಂಬಗಳ ರಚನೆ ಮತ್ತು ಕಾರ್ಯನಿರ್ವಹಣೆಯ ಮೇಲೆ ಮಾತ್ರವಲ್ಲದೆ ಕಾನೂನು ವ್ಯವಸ್ಥೆಯ ಮೇಲೂ ಗಾಢವಾಗಿ ಪರಿಣಾಮ ಬೀರುತ್ತಿವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ಶನಿವಾರ ಹೇಳಿದ್ದಾರೆ.

ಈ ಪರಿವರ್ತನೆಯು ಸಾಮಾನ್ಯ ಶಿಕ್ಷಣಕ್ಕೆ ಹೆಚ್ಚಿನ ಪ್ರವೇಶ, ಹೆಚ್ಚುತ್ತಿರುವ ನಗರೀಕರಣ, ವೈಯಕ್ತಿಕ ಆಕಾಂಕ್ಷೆಗಳಿಂದ ಉದ್ಯೋಗಿಗಳ ಹೆಚ್ಚಿನ ಚಲನಶೀಲತೆ ಮತ್ತು ಶಿಕ್ಷಣಕ್ಕೆ ತಕ್ಕಂತೆ ಬೆಳೆಯುತ್ತಿರುವ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಸೇರಿದಂತೆ ಹಲವಾರು ಅಂಶಗಳಿಂದ ಮುಂದೆ ಸಾಗಿದೆ. ಈ ಪರಿವರ್ತನೆಗೆ ಕಾನೂನು ಸಹ ಸಹಾಯ ಮಾಡಿದೆ ಎಂದರು.

"ಕುಟುಂಬ: ಭಾರತೀಯ ಸಮಾಜದ ಆಧಾರ" ಕುರಿತು ದಕ್ಷಿಣ ವಲಯದ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿದ ನ್ಯಾಯಮೂರ್ತಿ ನಾಗರತ್ನ ಅವರು, ಪ್ರತಿಯೊಂದು ನಾಗರಿಕತೆಯಲ್ಲಿಯೂ ಸಮಾಜದಲ್ಲಿ ಕುಟುಂಬವು ಮೂಲಭೂತ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಇದು "ನಮ್ಮ ಹಿಂದಿನ ಮತ್ತು ನಮ್ಮ ಭವಿಷ್ಯದ ಸೇತುವೆ ಗೆ ಕೊಂಡಿಯಾಗಿದೆ ಎಂದು ಹೇಳಿದರು.

ಶಿಕ್ಷಣ ಮತ್ತು ಉದ್ಯೋಗದಿಂದ ಮಹಿಳೆಯರ ಸಾಮಾಜಿಕ-ಆರ್ಥಿಕ ವಿಮೋಚನೆಯನ್ನು ಸಮಾಜವು ಸಕಾರಾತ್ಮಕವಾಗಿ ನೋಡಬೇಕು ಮತ್ತು ಪ್ರೋತ್ಸಾಹಿಸಬೇಕು ಎಂದು ಅವರು ಸಲಹೆ ನೀಡಿದರು. ಅಂತಹ ಮಹಿಳೆಯರು, ಕುಟುಂಬದ ಯೋಗಕ್ಷೇಮಕ್ಕೆ ಮಾತ್ರವಲ್ಲದೆ ರಾಷ್ಟ್ರಕ್ಕೂ ಕೊಡುಗೆ ನೀಡುತ್ತಾರೆ. ಎರಡು ಕಡೆಯವರು ಸರಿಯಾದ ಹೆಜ್ಜೆ ಇಟ್ಟರೆ ಪ್ರಸ್ತುತ ಭಾರತದಲ್ಲಿ ನ್ಯಾಯಾಲಯಗಳಲ್ಲಿ ಇರುವ ಕೌಟುಂಬಿಕ ವಿವಾದಗಳಲ್ಲಿ ಹೆಚ್ಚಿನ ಶೇಕಡಾವಾರು ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ.

SC Judge B V Nagarathna
ಶರ್ಟ್ ಗುಂಡಿ ಹಾಕದೆ ನ್ಯಾಯಾಲಯಕ್ಕೆ ಹಾಜರು, ನ್ಯಾಯಾಧೀಶರೊಂದಿಗೆ ಅನುಚಿತ ವರ್ತನೆ; ವಕೀಲನಿಗೆ ಆರು ತಿಂಗಳು ಜೈಲು ಶಿಕ್ಷೆ!

ಮೊದಲನೆಯದು ಇನ್ನೊಬ್ಬರ ಬಗ್ಗೆ ತಿಳುವಳಿಕೆ ಮತ್ತು ಗೌರವವನ್ನು ಹೊಂದಿರುವುದು ಮತ್ತು ಎರಡನೆಯದು ತನ್ನ ಬಗ್ಗೆ ಅರಿವು. ಪತಿ ಮತ್ತು ಹೆಂಡತಿಯ ಸಂದರ್ಭದಲ್ಲಿ ಇನ್ನೊಬ್ಬರ ಗೌರವವನ್ನು ಅರ್ಥಮಾಡಿಕೊಳ್ಳುವ ಮೂಲಕ, ಒಬ್ಬ ಪಾಲುದಾರ ಯಾವಾಗಲೂ ಇತರ ಪಾಲುದಾರನ ಆಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ನ್ನೊಬ್ಬರ ದೃಷ್ಟಿಕೋನ ಮತ್ತು ತಾರ್ಕಿಕತೆಯನ್ನು ಅರ್ಥಮಾಡಿಕೊಳ್ಳಲು ಸಕ್ರಿಯವಾಗಿ ಪ್ರಯತ್ನಿಸಬೇಕು. ಇದು ವಿವಾದಕ್ಕೆ ಕಾರಣವಾಗುವ ಬದಲು ಇಬ್ಬರ ನಡುವೆ ಸೌಹಾರ್ದತೆ ಸೃಷ್ಟಸಲು ನೆರವಾಗುತ್ತದೆ ಎಂದರು.

ಕಳೆದ ಒಂದು ದಶಕದಲ್ಲಿ ಸುಮಾರು ಶೇ. 40 ರಷ್ಟು ವಿವಾಹಗಳು ವಿಚ್ಛೇದನ ಮತ್ತು ಪ್ರತ್ಯೇಕತೆಯಲ್ಲಿ ಕೊನೆಗೊಂಡಿವೆ ಎಂಬ ಮಾಧ್ಯಮ ವರದಿಯನ್ನು ಉಲ್ಲೇಖಿಸಿದ ಅವರು, ಭಾರತದಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಎದುರಿಸಲು ಕೌಟುಂಬಿಕ ನ್ಯಾಯಾಲಯಗಳ ಸಂಖ್ಯೆಯು ಸಾಕಾಗುವುದಿಲ್ಲ. ಪರಿಣಾಮವಾಗಿ, ಕೌಟುಂಬಿಕ ನ್ಯಾಯಾಲಯಗಳ ಅಧ್ಯಕ್ಷರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ ಎಂದು ತಿಳಿಸಿದರು.

SC Judge B V Nagarathna
Rape case: 'ಕೃತ್ಯಕ್ಕೆ ಸಂತ್ರಸ್ಥೆಯೇ ಕಾರಣ.. ನೀನೇ ಅಪಾಯ ಆಹ್ವಾನಿಸಿದ್ದೀಯಾ': ಅತ್ಯಾಚಾರ ಆರೋಪಿಗೆ ಜಾಮೀನು ನೀಡಿದ Allahabad High Court

ವ್ಯಾಜ್ಯ ಪೂರ್ವ ಸಂಧಾನಗಳು ಮತ್ತು ಮಧ್ಯಸ್ಥಿಕೆಗಳ ಅಗತ್ಯವನ್ನು ಒತ್ತಿಹೇಳಿದ ನಾಗರತ್ನ ಅವರು, ಕೌಟುಂಬಿಕ ನ್ಯಾಯಾಲಯಗಳು ವಿವಾದವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಬರುವುದನ್ನು ತಡೆಯಲು ಮಧ್ಯವರ್ತಿಗಳಾಗಿ ತರಬೇತಿ ಪಡೆದ ಮಧ್ಯವರ್ತಿಗಳನ್ನು ಹೊಂದಿರಬೇಕು ಅಥವಾ ನಿವೃತ್ತ ನ್ಯಾಯಾಧೀಶರನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು.

"ಈ ಪ್ರಕರಣಗಳಲ್ಲಿ ಮಕ್ಕಳು ಪ್ರಮುಖವಾಗಿ ಬಳಲುತ್ತಿದ್ದಾರೆ. ಇದು ಕಾರ್ಯವಿಧಾನದ ವಿಳಂಬಗಳಿಗೆ ಕಾರಣವಾಗುತ್ತದೆ ಮತ್ತು ವಿಭಿನ್ನ ನ್ಯಾಯಾಲಯಗಳಿಂದ ವಿರೋಧಾತ್ಮಕ ಆದೇಶಗಳು ಬರಬಹುದು ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com