Namma Metro: ಒಂದೇ ದಿನ 9 ಲಕ್ಷ ಪ್ರಯಾಣಿಕರು ಸಂಚಾರ

ಬೆಲೆ ಏರಿಕೆ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿತ್ತು. ಇದೀಗ ಬೆಲೆ ಏರಿಕೆಯ ನಡುವೆಯೂ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.
BMRCL
ನಮ್ಮ ಮೆಟ್ರೋPTI
Updated on

ಬೆಂಗಳೂರು: ಪ್ರಯಾಣ ದರ ಏರಿಕೆಯಾದರೂ ದೈನಂದಿನ ಸಾರಿಗೆ ವ್ಯವಸ್ಥೆಯಾಗಿರುವ ನಮ್ಮ ಮೆಟ್ರೋಗೆ ಪ್ರಯಾಣಿಕರ ಸಂಖ್ಯೆಯಲ್ಲಿ ಪ್ರತಿಬಾರಿ ದಾಖಲೆ ಬರೆಯುತ್ತಲೇ ಇರುತ್ತದೆ.

ಇತ್ತೀಚೆಗಷ್ಟೇ ಬೆಲೆ ಏರಿಕೆಯಿಂದಾಗಿ ನಮ್ಮ ಮೆಟ್ರೋ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆ ಹಲವರು ಮೆಟ್ರೋದಲ್ಲಿ ಪ್ರಯಾಣಿಸೋದನ್ನೇ ನಿಲ್ಲಿಸಿದ್ದರು. ಬೆಲೆ ಏರಿಕೆ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿತ್ತು. ಇದೀಗ ಬೆಲೆ ಏರಿಕೆಯ ನಡುವೆಯೇ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಏಪ್ರಿಲ್ 17, 2025 ರಂದು ದಾಖಲೆಯ 9,08,153 ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ ಎಂದು ಘೋಷಿಸಿದೆ.

2024ರ ಡಿಸೆಂಬರ್‌ 7ರಂದು 9.20 ಲಕ್ಷ ಪ್ರಯಾಣಿಕರು ಸಂಚರಿಸಿರುವುದು ಸಾರ್ವಕಾಲಿಕ ದಾಖಲೆಯಾಗಿದೆ. ಅದಕ್ಕಿಂತ ಹಿಂದೆ ಆಗಸ್ಟ್‌ 14ರಂದು 9.17 ಲಕ್ಷ ಜನರು ಪ್ರಯಾಣಿಸುವ ಮೂಲಕ ಮೊದಲ ಬಾರಿಗೆ 9 ಲಕ್ಷ ದಾಟಿರುವುದು ದಾಖಲೆಯಾಗಿತ್ತು.

ಏಪ್ರಿಲ್‌ 17ರಂದು ಸಿಇಟಿ ಪರೀಕ್ಷೆ, ಮರುದಿನ ‘ಗುಡ್‌ಫ್ರೈಡೆ’ ರಜೆ ಇದ್ದಿದ್ದರಿಂದ ಊರಿಗೆ ಹೊರಡುವವರು ಹೆಚ್ಚು ಮಂದಿ ಬಸ್‌ ಮತ್ತು ರೈಲು ನಿಲ್ದಾಣಗಳಿಗೆ ತಲುಪಲು ಮೆಟ್ರೊ ರೈಲನ್ನು ಬಳಸಿದ್ದಾರೆ. ಈ ಕಾರಣದಿಂದ ಮೆಟ್ರೊ ನಿಲ್ದಾಣಗಳಲ್ಲೂ ಅಂದು ಭಾರಿ ಜನದಟ್ಟಣೆ ಉಂಟಾಗಿತ್ತು. ‘ನಮ್ಮ ಮೆಟ್ರೊ’ ಇತಿಹಾಸದಲ್ಲಿ ಪ್ರಯಾಣಿಕರ ಸಂಖ್ಯೆ ಮೂರನೇ ಬಾರಿಗೆ 9 ಲಕ್ಷ ದಾಟಿದೆ.

ಅಂದು ನೇರಳೆ ಮಾರ್ಗದಲ್ಲಿ 4.35 ಲಕ್ಷ, ಹಸಿರು ಮಾರ್ಗದಲ್ಲಿ 2.85 ಲಕ್ಷ, ಮೆಜೆಸ್ಟಿಕ್‌ನಲ್ಲಿ ಮಾರ್ಗ ಬದಲಾಯಿಸಿ (ಇಂಟರ್‌ಚೇಂಜ್‌) 1.87 ಲಕ್ಷ ಜನರು ನಮ್ಮ ಮೆಟ್ರೊದಲ್ಲಿ ಪ್ರಯಾಣಿಸಿದ್ದಾರೆ.

BMRCL
ನಮ್ಮ ಮೆಟ್ರೋ ದುರಂತ: ವಯಾಡೆಕ್ಟ್ ಉರುಳಿ ಬಿದ್ದು ಆಟೋ ಅಪ್ಪಚ್ಚಿ, ಚಾಲಕ ಸಾವು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com