ಕಿರುಕುಳ‌ ಕೊಡುವುದಕ್ಕೂ ಒಂದು ಮಿತಿಯಿರಬೇಕು: ED ದಾಳಿ ವಿರುದ್ಧ ವಿನಯ್​ ಕುಲಕರ್ಣಿ ಕಿಡಿ

ಜಾರಿ ನಿರ್ದೇಶಾನಾಲಯದ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಇಡಿ ದಾಳಿಯ ಹಿಂದೆ ಕಾಣದ ಕೈಗಳಿದ್ದು, ನನ್ನ ಮೇಲೆ ಯಾವೆಲ್ಲಾ ಪ್ರಕರಣ ದಾಖಲಿಸಬಹುದೋ ಎಲ್ಲವನ್ನೂ ದಾಖಲಿಸಿದ್ದಾರೆ.
ವಿನಯ್ ಕುಲಕರ್ಣಿ
ವಿನಯ್ ಕುಲಕರ್ಣಿ
Updated on: 

ಬೆಂಗಳೂರು: ಪಕ್ಷ ಯಾವುದೇ ಇರಲಿ ಓರ್ವ ಮನುಷ್ಯನಿಗೆ ಕಿರುಕುಳ‌ ಕೊಡುವುದಕ್ಕೂ ಒಂದು ಮಿತಿಯಿರಬೇಕು. ಅಧಿಕಾರವಿದೆ ಎಂದು ಈ ರೀತಿ ಬಳಸಿಕೊಳ್ಳುತ್ತಿರುವುದು ನಿಜವಾಗಿಯೂ ನೋವಿನ ಸಂಗತಿ ಎಂದು ಕಾಂಗ್ರೆಸ್​​ ಶಾಸಕ ವಿನಯ್​ ಕುಲಕರ್ಣಿ ಅವರು ಕಿಡಿಕಾರಿದ್ದಾರೆ.

ಜಾರಿ ನಿರ್ದೇಶಾನಾಲಯದ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಇಡಿ ದಾಳಿಯ ಹಿಂದೆ ಕಾಣದ ಕೈಗಳಿದ್ದು, ನನ್ನ ಮೇಲೆ ಯಾವೆಲ್ಲಾ ಪ್ರಕರಣ ದಾಖಲಿಸಬಹುದೋ ಎಲ್ಲವನ್ನೂ ದಾಖಲಿಸಿದ್ದಾರೆ. ಇದೀಗ ನಡೆದಿರುವ ದಾಳಿ ಕೂಡ ರಾಜಕೀಯ ಷಡ್ಯಂತ್ರ ಎಂದು ಹೇಳಿದ್ದಾರೆ.

ಪರಿಶೀಲನೆ ನಡೆಸಲು ಹಾಗೂ ಷಡ್ಯಂತ್ರ ನಡೆಸಲು ಇಡಿ ಅಧಿಕಾರಿಗಳು ಬರುತ್ತಾರೆ. ಇದು ಇಂದು, ನಿನ್ನೆಯದ್ದಲ್ಲ. ಶಾಸಕನಾಗಿ ನನ್ನ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಜನರನ್ನು ಭೇಟಿಯಾಗಲು ಆಗುತ್ತಿಲ್ಲ. ನನಗೆ ಕಿರುಕುಳ ನೀಡುವುದು ಮಾತ್ರ ನಿಂತಿಲ್ಲ. ಪಕ್ಷ ಯಾವುದೇ ಇರಲಿ ಓರ್ವ ಮನುಷ್ಯನಿಗೆ ಕಿರುಕುಳ‌ ಕೊಡುವುದಕ್ಕೂ ಒಂದು ಮಿತಿಯಿರಬೇಕು. ಅಧಿಕಾರವಿದೆ ಎಂದು ಈ ರೀತಿ ಬಳಸಿಕೊಳ್ಳುತ್ತಿರುವುದು ನಿಜವಾಗಿಯೂ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಐಶ್ವರ್ಯಾ ಗೌಡ ಜೊತೆ ಯಾವ ವ್ಯವಹಾರವನ್ನು ಹೊಂದಿಲ್ಲ, ಹಣದ ವರ್ಗಾವಣೆಯೂ ಆಗಿಲ್ಲ. ಮಂಜುಳಾ ಪಾಟೀಲ್​ ಮತ್ತು ಐಶ್ವರ್ಯಾ ಗೌಡ ನಡುವೆ ನಾನು‌ ರಾಜಿ ಸಂಧಾನ ಮಾಡಿಸಿಲ್ಲ. ಈಗ ಕೆಲ ತಿಂಗಳ ಹಿಂದೆ ಪ್ರಕರಣ ದಾಖಲಾದ ನಂತರ ಪರಿಚಯವಷ್ಟೆ. ಪ್ರಕರಣ ಮುಂದುವರೆಸುವುದು ಬೇಡ, ನನ್ನ ಹಣ ಕೊಡಿಸಿ ಎಂದು ಬಂದಾಗ ಕರೆದು ವಿಚಾರಿಸಿದ್ದೆ. ಅವರವರ ನಡುವೆ ಮಾತುಕತೆ ಸರಿ‌ ಹೋಗಲಿಲ್ಲವಂತೆ. ಜನರಿಗೆ ಯಾರೇ ಮೋಸ ಮಾಡಿದರೂ ತಪ್ಪೇ ಎಂದು ತಿಳಿಸಿದರು.

ವಿನಯ್ ಕುಲಕರ್ಣಿ
ಚಿನ್ನ ವಂಚನೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ನಿವಾಸದಲ್ಲಿ ರಾತ್ರಿಯಿಡೀ ED ತಲಾಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com