ಕಲಬುರಗಿ: ರಾತ್ರಿ ಹೊತ್ತು ಮನೆಗಳಿಗೆ ಕನ್ನ, ಐಷಾರಾಮಿ ಜೀವನ; ಪಾಪ ಪರಿಹಾರಕ್ಕೆ ಸಮಾಜ ಸೇವೆ ಮಾಡುತ್ತಿದ್ದ ಕಳ್ಳನ ಬಂಧನ

ಕಳ್ಳತನದ ಪಾಪ ಪರಿಹಾರಕ್ಕಾಗಿ ದೇವಸ್ಥಾನ, ಜಾತ್ರೆಯಲ್ಲಿ ಅನ್ನ ಸಂತರ್ಪಣೆ, ಬಡ ರೋಗಿಗಳಿಗೆ ಧನಸಹಾಯದಂತಹ ಸಮಾಜ ಸೇವೆಯನ್ನೂ ಮಾಡುತ್ತಿದ್ದ.
Representaional image
ಸಂಗ್ರಹ ಚಿತ್ರ
Updated on

ಕಲಬುರಗಿ: ಕದ್ದ ಹಣವನ್ನು ಜಾತ್ರೆಗಳಲ್ಲಿ ಸಾಮೂಹಿಕ ಭೋಜನಕ್ಕೆ, ಮದ್ಯ ಮತ್ತು ಮನರಂಜನೆಗಾಗಿ ಖರ್ಚು ಮಾಡುತ್ತಿದ್ದ ಕಳ್ಳನನ್ನು ಕಲಬುರಗಿಯ ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿಯ ಭಾಗ್ಯವಂತಿ ನಗರದ ನಿವಾಸಿ ಶಂಕರ್ ಗೌಡ ನೀಡಿದ ದೂರಿನ ಆಧಾರದ ಮೇಲೆ, ಏಪ್ರಿಲ್ 13 ರಂದು ತಮ್ಮ ಕುಟುಂಬದೊಂದಿಗೆ ಹೊರ ಹೋಗಿದ್ದರು. ಆ ವೇಳೆ ಕಳ್ಳರು 343 ಗ್ರಾಂ ಚಿನ್ನಾಭರಣ, 14.5 ಲಕ್ಷ ರೂ. ನಗದು, 10,000 ರೂ. ಮೌಲ್ಯದ 40 ಗ್ರಾಂ ಬೆಳ್ಳಿ ವಸ್ತುಗಳನ್ನು ಕದ್ದಿದ್ದಾರೆ ಎಂದು ಕಲಬುರಗಿ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್‌ಡಿ ತಿಳಿಸಿದ್ದಾರೆ.

ರಾಮ ಮಂದಿರದ ಬಳಿಯಿರುವ ಮಾನ್ಕರ್ ಲೇಔಟ್ ಬಳಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾನೆ ಎಂಬ ಸುಳಿವಿನ ಮೇರೆಗೆ, ಪೊಲೀಸರು ಆರೋಪಿ ಶಿವಪ್ರಸಾದ್ ಅಲಿಯಾಸ್ ಮಂತ್ರಿ ಶಂಕರ್ ಅವರನ್ನು ಬಂಧಿಸಿದ್ದಾರೆ. ತೆಲಂಗಾಣದ ಸಿಕಂದರಾಬಾದ್‌ನ ಮಹಮೂದ್ ಗುಡ ಪ್ರದೇಶದವನು ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಈತ ಈ ಹಿಂದೆ ಭಾಗ್ಯವಂತಿ ನಗರದಲ್ಲಿ ಹಲವು ಮನೆಗಳನ್ನು ದರೋಡೆ ಮಾಡಿದ್ದ.

ಪೊಲೀಸರು 30 ಲಕ್ಷ ರೂ. ಮೌಲ್ಯದ 412 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳತನದ ಪಾಪ ಪರಿಹಾರಕ್ಕಾಗಿ ದೇವಸ್ಥಾನ, ಜಾತ್ರೆಯಲ್ಲಿ ಅನ್ನ ಸಂತರ್ಪಣೆ, ಬಡ ರೋಗಿಗಳಿಗೆ ಧನಸಹಾಯದಂತಹ ಸಮಾಜ ಸೇವೆಯನ್ನೂ ಮಾಡುತ್ತಿದ್ದ. ಆರೋಪಿಯು ಲೂಟಿ ಮಾಡಿದ ಹಣವನ್ನು ಮಹಾರಾಷ್ಟ್ರದ ಲಾತೂರ್ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಮಾರಾಟ ಮಾಡುತ್ತಿದ್ದು, ಅದರಿಂದ ಬಂದ ಹಣವನ್ನು ಸಾಮೂಹಿಕ ಭೋಜನಕ್ಕಾಗಿ ಖರ್ಚು ಮಾಡುತ್ತಿದ್ದ. ಅದರಲ್ಲಿ ಒಂದು ಭಾಗವನ್ನು ದೊಡ್ಡ ಹೋಟೆಲ್‌ಗಳು ಮತ್ತು ಬಾರ್‌ಗಳಲ್ಲಿ ದುಂದು ವೆಚ್ಚ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಒಟ್ಟಾರೆಯಾಗಿ ಒಂಬತ್ತು ಪ್ರಕರಣಗಳನ್ನು ದಾಖಲಿಸಲಾಗಿದೆ.

Representaional image
150 ಪ್ರಕರಣಗಳಲ್ಲಿ ಬೇಕಾಗಿದ್ದ ಅಂತರರಾಜ್ಯ ಕಳ್ಳನ ಬಂಧನ: ಬಾಲಿವುಡ್ ನಟಿಗೆ Costly Gift; ಗೆಳತಿಗೆ 3 ಕೋಟಿ ರು. ಬಂಗಲೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com