150 ಪ್ರಕರಣಗಳಲ್ಲಿ ಬೇಕಾಗಿದ್ದ ಅಂತರರಾಜ್ಯ ಕಳ್ಳನ ಬಂಧನ: ಬಾಲಿವುಡ್ ನಟಿಗೆ Costly Gift; ಗೆಳತಿಗೆ 3 ಕೋಟಿ ರು. ಬಂಗಲೆ!

ರಾಜ್ಯಮಟ್ಟದ ಕಿಕ್ ಬಾಕ್ಸರ್ ಮತ್ತು ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿರುವ ಪಂಚಾಕ್ಷರಿ ಸಂಗಯ್ಯ ಸ್ವಾಮಿ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ 150 ಕ್ಕೂ ಹೆಚ್ಚು ಕಳ್ಳತನ ಮತ್ತು ದರೋಡೆ ಪ್ರಕರಣಗಳ ಇತಿಹಾಸವಿದೆ.
Sangayya Swami
ಬಂಧಿತ ಆರೋಪಿ ಸಂಗಯ್ಯ ಸ್ವಾಮಿ
Updated on

ಬೆಂಗಳೂರು: ಜನವರಿ 9 ರಂದು ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿನಗರದ ಮನೆಯೊಂದರಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು 37 ವರ್ಷದ ಅಂತರರಾಜ್ಯ ಕಳ್ಳನನ್ನು ಬಂಧಿಸಿದ್ದಾರೆ.

ರಾಜ್ಯಮಟ್ಟದ ಕಿಕ್ ಬಾಕ್ಸರ್ ಮತ್ತು ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿರುವ ಪಂಚಾಕ್ಷರಿ ಸಂಗಯ್ಯ ಸ್ವಾಮಿ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ 150 ಕ್ಕೂ ಹೆಚ್ಚು ಕಳ್ಳತನ ಮತ್ತು ದರೋಡೆ ಪ್ರಕರಣಗಳ ಇತಿಹಾಸವನ್ನು ಹೊಂದಿದ್ದಾನೆ.

ಪೊಲೀಸರ ಪ್ರಕಾರ, ಸ್ವಾಮಿ ತನ್ನ ಬಾರ್ ಡ್ಯಾನ್ಸರ್ ಗೆಳತಿಗೆ 3 ಕೋಟಿ ರೂ. ಮೌಲ್ಯದ ಮನೆ ಮತ್ತು ಬಾಲಿವುಡ್ ನಟಿಗೆ 22 ಲಕ್ಷ ರೂ. ಮೌಲ್ಯದ ಅಕ್ವೇರಿಯಂ ಅನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಪುರಾವೆಗಳ ಆಧಾರದ ಮೇಲೆ ಜನವರಿ 20 ರಂದು ಮಡಿವಾಳ ಮಾರುಕಟ್ಟೆ ಪ್ರದೇಶದ ಬಳಿ ಆತನನ್ನು ಬಂಧಿಸಲಾಯಿತು. ಕದ್ದ ಚಿನ್ನದ ಆಭರಣಗಳನ್ನು ಕರಗಿಸಿ ಚಿನ್ನದ ಬಿಸ್ಕತ್ತುಗಳಾಗಿ ಪರಿವರ್ತಿಸಲಾಗಿತ್ತು. ಆತನ ಬಂಧನದ ನಂತರ, ಚಿನ್ನವನ್ನು ಕರಗಿಸಲು ಬಳಸಿದ ಫೈರ್ ಗನ್, 181 ಗ್ರಾಂ ಚಿನ್ನದ ಬಿಸ್ಕತ್ತುಗಳು ಮತ್ತು 333 ಗ್ರಾಂ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಇವೆಲ್ಲವೂ ಸುಮಾರು 12.25 ಲಕ್ಷ ರೂ. ಮೌಲ್ಯದ್ದಾಗಿದೆ.

ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಾತನಾಡಿ, ಸ್ವಾಮಿ ಮಡಿವಾಳದಲ್ಲಿ ಬೀಗ ಹಾಕಿದ ಮನೆಗೆ ನುಗ್ಗಿ 410 ಗ್ರಾಂ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕದ್ದಿದ್ದಾನೆ. "ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ಜೈಲಿನಿಂದ ಬಿಡುಗಡೆಯಾಗಿದ್ದಆತ ಸ್ವಲ್ಪ ಸಮಯದ ನಂತರ ಮಡಿವಾಳದಲ್ಲಿ ಕಳ್ಳತನ ಮಾಡಿದ್ದ ಎಂದು ಅವರು ಹೇಳಿದರು.

Sangayya Swami
ರಾಮನಗರ: ಕಳ್ಳನ ಸಹಚರನೆಂದು ತಪ್ಪಾಗಿ ತಿಳಿದು 'ಸೆಕ್ಯೂರಿಟಿ ಗಾರ್ಡ್' ಕೈ ಕತ್ತರಿಸಿದ ಉದ್ರಿಕ್ತ ಗುಂಪು!

ವಿಚಾರಣೆಯ ಸಮಯದಲ್ಲಿ, ಅಧಿಕಾರಿಗಳು ಅವರ ವ್ಯಾಪಕ ಅಪರಾಧ ಇತಿಹಾಸವನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. 2003 ರಲ್ಲಿ ಆತ ಕೇವಲ 15 ವರ್ಷದವನಾಗಿದ್ದಾಗ ಲ್ಯಾಪ್‌ಟಾಪ್ ಕದಿಯುವ ಮೂಲಕ ಮೊದಲ ಅಪರಾಧ ಆರಂಭಿಸಿದ. 2009 ರ ಹೊತ್ತಿಗೆ, ಆತ ವೃತ್ತಿಪರ ಕಳ್ಳನಾಗಿ ಬದಲಾದನು. 2012 ರಲ್ಲಿ, ಆತನನ್ನು ನವಿ ಮುಂಬೈ ಅಪರಾಧ ವಿಭಾಗ ಬಂಧಿಸಿತು, ಮತ್ತು 2016 ರಲ್ಲಿ, ಗುಜರಾತ್‌ನಲ್ಲಿ ದರೋಡೆ ಪ್ರಕರಣಕ್ಕಾಗಿ ಆತನಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆತ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ. ಗುಜರಾತ್, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಕುಖ್ಯಾತಿಯಿಂದಾಗಿ, ನಂತರ ತನ್ನ ನೆಲೆಯನ್ನು ಬೆಂಗಳೂರಿಗೆ ಬದಲಾಯಿಸಿದ.

ಸ್ವಾಮಿ, 24 ನೇ ವಯಸ್ಸಿನಲ್ಲಿ, ಬಾಲಿವುಡ್ ನಟಿಯ ಸಂಪರ್ಕಕ್ಕೆ ಬಂದು, 7 ಸ್ಟಾರ್ ಹೋಟೆಲ್‌ಗಳಿಗೆ ಕರೆದೊಯ್ಯುತ್ತಿದ್ದ, ಪ್ರತಿ ಭೇಟಿಗೆ ಸುಮಾರು 15 ಲಕ್ಷ ರೂ. ಖರ್ಚು ಮಾಡುತ್ತಿದ್ದ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಆಕೆಯ ಹುಟ್ಟುಹಬ್ಬದಂದು ಅವನು ಅವಳಿಗೆ ದುಬಾರಿ ಅಕ್ವೇರಿಯಂ ಉಡುಗೊರೆಯಾಗಿ ನೀಡಿದ್ದನು. ಸ್ವಾಮಿ ವಿವಾಹಿತನಾಗಿದ್ದ, ಆತನ ದುರಭ್ಯಾಸ ಗಮನಿಸಿದ ಆತನ ಪತ್ನಿ ಅವನನ್ನು ತೊರೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com