
ಬೆಂಗಳೂರು: ನಕಲಿ ಕಾನೂನು ನೆರವು ಸೇವೆಯನ್ನು ಸೃಷ್ಟಿಸಿ ಸೈಬರ್ ಅಪರಾಧ ಸಂತ್ರಸ್ತರಿಗೆ ವಂಚಿಸಿದ್ದಕ್ಕಾಗಿ 37 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಸಿಸಿಬಿ ಬಂಧಿಸಿದೆ. ತುಫೈಲ್ ಅಹ್ಮದ್ ಬಂಘಿತ ಆರೋಪಿ, ಕೊತ್ತನೂರು ನಿವಾಸಿಯಾದ ಈತ ತಮಿಳುನಾಡಿನ ಕಡಲೂರು ಮೂಲದವನು.
ರಾಮಮೂರ್ತಿ ನಗರದ ಸಂತ್ರಸ್ತೆಯೊಬ್ಬರು ಫೆಬ್ರವರಿಯಲ್ಲಿ ನಡೆದ ಸೈಬರ್ ವಂಚನೆಯಲ್ಲಿ 1.5 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದರು. ಕಾನೂನು ನೆರವು ಸೇವೆಗಳಿಗಾಗಿ ಆನ್‌ಲೈನ್‌ನಲ್ಲಿ ಹುಡುಕುತ್ತಿದ್ದಾಗ, 'ಕ್ವಿಕ್‌ಮೋಟೋ ಲೀಗಲ್ ಸರ್ವಿಸ್' ಪ್ರತಿನಿಧಿಯಾಗಿ ನಟಿಸಿ ಅಹ್ಮದ್ ಎಂಬಾತ ಸಂತ್ರಸ್ತೆಯನ್ನು ಸಂಪರ್ಕಿಸಿದ್ದ, ಕಳೆದುಹೋದ ಹಣವನ್ನು ಕಾನೂನು ಮಾರ್ಗಗಳ ಮೂಲಕ ವಸೂಲಿ ಮಾಡುವುದಾಗಿ ಭರವಸೆ ನೀಡಿ ಸಂತ್ರಸ್ತೆಯಿಂದ 12.5 ಲಕ್ಷ ರೂ.ಗಳನ್ನು ಸಂಗ್ರಹಿಸಿ ಆಕೆಯನ್ನು ವಂಚಿಸಿದ್ದ.
ಕಂಪನಿಗೆ ಭೌತಿಕ ಕಚೇರಿ ಇಲ್ಲ ಎಂದು ಪೊಲೀಸರು ತಿಳಿದುಕೊಂಡಿದ್ದಾರೆ. ಆದಾಗ್ಯೂ, 'ಇಂಡಿಯಾ ಲೀಗಲ್ ಸರ್ವಿಸ್' ಹೆಸರಿನಲ್ಲಿ ಆರೋಪಿಗಳು ನಡೆಸುತ್ತಿದ್ದ ಮತ್ತೊಂದು ನಕಲಿ ಸಂಸ್ಥೆಯನ್ನು ಕಸ್ತೂರಿ ನಗರದಲ್ಲಿ ಪತ್ತೆಹಚ್ಚಲಾಯಿತು ಅಹ್ಮದ್‌ನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕಸ್ತೂರಿ ನಗರದಲ್ಲಿ ಕಾಲ್ ಸೆಂಟರ್ ಸ್ಥಾಪಿಸಿದ್ದರು, ಕಾನೂನು ಸಹಾಯವನ್ನು ಬಯಸುವ ಸೈಬರ್ ಅಪರಾಧ ಸಂತ್ರಸ್ತರನ್ನು ಟಾರ್ಗೆಟ್ ಮಾಡಲು 12 ಜನರನ್ನು ಟೆಲಿ-ಕಾಲರ್‌ಗಳಾಗಿ ನೇಮಿಸಿಕೊಂಡಿದ್ದರು.
ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಅವರು ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ ಮೂಲಕ ಸಂತ್ರಸ್ತರನ್ನು ಸಂಪರ್ಕಿಸಿದರು. ದುಬೈನಲ್ಲಿ ಕೆಲಸ ಮಾಡುತ್ತಿರುವ ಅಹ್ಮದ್ ಅವರ ಸಹೋದರ ನಕಲಿ ಕಂಪನಿಗಳನ್ನು ಸ್ಥಾಪಿಸಲು ಆತನಿಗೆ ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಸ್ಥೆಯು ಕೋಟ್ಯಂತರ ರೂಪಾಯಿಗಳ ಅಕ್ರಮ ವಹಿವಾಟಿನಲ್ಲಿ ಭಾಗಿಯಾಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇಲ್ಲಿಯವರೆಗೆ, ದೇಶಾದ್ಯಂತ ಆರೋಪಿಗಳ ವಿರುದ್ಧ 29 ಪ್ರಕರಣಗಳು ದಾಖಲಾಗಿವೆ.
Advertisement