
ಬೆಂಗಳೂರು: ಸಹಪಾಠಿಯಿಂದ ಕಿರುಕುಳಕ್ಕೊಳಗಾಗಿ ವಿಷ ಸೇವಿಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಜುಲೈ 31 ರಂದು ಆಕೆಯನ್ನು ಅಪಹರಿಸಲಾಗಿತ್ತು ಎಂದು ವರದಿಯಾಗಿದೆ. ಐಶ್ವರ್ಯ ಮತ್ತು ಸಾಮ್ರಾಟ್ ನಗರದ ಹೊರವಲಯದಲ್ಲಿರುವ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಐಶ್ವರ್ಯ ಮಂಡ್ಯದ ಎನ್ಇಎಸ್ ಬಡವಾಣೆ ನಿವಾಸಿಯಾಗಿದ್ದರೆ, ಸಾಮ್ರಾಟ್ ಸಾತನೂರಿನ ನಿವಾಸಿ. ತನ್ನೊಂದಿಗೆ ಸಂಬಂಧ ಬೆಳೆಸುವಂತೆ ಐಶ್ವರ್ಯಳನ್ನು ಪೀಡಿಸುತ್ತಿದ್ದ. ಆಕೆಯನ್ನು ಬಲವಂತವಾಗಿ ಸಾತನೂರಿನಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಕರೆದೊಯ್ದಿದ್ದಾನೆ ಮತ್ತು ಆಕೆ ನಿರಾಕರಿಸಿದಾಗ, ಆಕೆಗೆ ವಿಷ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಆತನ ಕಿರುಕುಳ ಸಹಿಸಲಾಗದೆ, ಐಶ್ವರ್ಯಾ ವಿಷ ಕುಡಿದು, ನಂತರ ತನ್ನ ಪೋಷಕರಿಗೆ ಕರೆ ಮಾಡಿ ಸಾಮ್ರಾಟ್ ತನ್ನನ್ನು ಸಾತನೂರಿಗೆ ಕರೆತಂದಿದ್ದಾನೆ ಎಂದು ತಿಳಿಸಿದ್ದಾಳೆ. ಜುಲೈ 30 ರಂದು ಐಶ್ವರ್ಯ ಮನೆಯಿಂದ ಹೊರಬಂದಾಗ, ಸಾಮ್ರಾಟ್ ಅವಳನ್ನು ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದ, ನಂತರ ಅವಳನ್ನು ತನ್ನ ಚಿಕ್ಕಮ್ಮನ ಮನೆಯಲ್ಲಿ ಇರಿಸಿದ್ದನು ಎಂದು ಹೇಳಲಾಗುತ್ತದೆ.
ಐಶ್ವರ್ಯಾಳ ತಾಯಿ ಮತ್ತು ಸಹೋದರ ಸಾತನೂರಿನ ಬಸ್ ನಿಲ್ದಾಣದ ಬಳಿ ಆಕೆಯನ್ನು ಕಂಡು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ಕರೆದೊಯ್ದರು. ಪೊಲೀಸರು ಆಕೆಯೊಂದಿಗೆ ಮಾತನಾಡುತ್ತಿದ್ದಾಗ ಆಕೆ ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದಳು. ನಂತರವೇ ಆಕೆ ವಿಷ ಸೇವಿಸಿರುವುದು ಅವರಿಗೆ ತಿಳಿದುಬಂದಿತು ಎಂದು ಅಧಿಕಾರಿ ಹೇಳಿದರು. ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ.
Advertisement