ಅತಿವೃಷ್ಟಿಯಿಂದಾಗಿ ಅಪಾರ ಹಾನಿ; ಪರಿಹಾರ ಒತ್ತಾಯಿಸಲು ದೆಹಲಿಗೆ ರಾಜ್ಯ ನಿಯೋಗ ಕಳುಹಿಸಿ: ಸರ್ಕಾರಕ್ಕೆ ಬಿ.ಆರ್ ಪಾಟೀಲ್ ಆಗ್ರಹ

ಅದರಂತೆ ಕಲಬುರಗಿಯಲ್ಲಿ 62 ಮಿಮಿ ನಷ್ಟು ಆಗಬೇಕಾಗಿದ್ದ ಮಳೆ 108 ಮಿಮಿನಷ್ಟು ಹೆಚ್ಚಾಗಿ ಹಳ್ಳ, ಕೊಳ್ಳ, ನದಿಗಳು ತುಂಬಿ ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ.
BR patil
ಬಿ.ಆರ್.ಪಾಟೀಲ್.
Updated on

ಕಲಬುರಗಿ: ರಾಜ್ಯದ ವಿವಿಧ ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಪಾರ ಹಾನಿ ಎದುರಾಗಿದ್ದು, ಪರಿಹಾರಕ್ಕಾಗಿ ಒತ್ತಾಯಿಸಲು ಸಚಿವರ ನಿಯೋಗವನ್ನು ದೆಹಲಿಗೆ ಕಳುಹಿಸಿ ಎಂದು ಆಳಂದ ಶಾಸಕರೂ ಆಗಿರುವ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮಳೆ ನೀರು ಹೊಲಗಳಿಗೆ ನುಗ್ಗಿದ ನಂತರ ಅನೇಕ ಪ್ರದೇಶಗಳಲ್ಲಿ ಹೆಸರುಕಾಳು ಮತ್ತು ಉದ್ದಿನ ಬೆಳೆಗಳು ನಾಶವಾಗಿವೆ. ಹೀಗಾಗಿ ಈ ಋತುವಿನಲ್ಲಿ ಹೆಸರುಕಾಳು ಮತ್ತು ಉದ್ದಿನ ಬೇಳೆ ಸಿಗುವ ಸಾಧ್ಯತೆಯಿಲ್ಲ. ಇದನ್ನು ಪರಿಗಣಿಸಿ, ರಾಜ್ಯ ಸರ್ಕಾರ ಸಚಿವರ ತಂಡವನ್ನು ದೆಹಲಿಗೆ ಕಳುಹಿಸಬೇಕು, ಕೇಂದ್ರ ಸರ್ಕಾರ ತಕ್ಷಣ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸಬೇಕೆಂದು ಒತ್ತಾಯಿಸಬೇಕು, ಇದರಿಂದ ರೈತರಿಗೆ ತಕ್ಷಣ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ಈ ವರ್ಷ ಉತ್ತರ ಕರ್ನಾಟಕದಲ್ಲಿ ವಾಡಿಕೆಯಂತೆ 280 ಮಿಮಿ ಮಳೆಯಾಗಬೇಕಿತ್ತು, ಆದರೆ 318 ಮಿಮಿ ನಷ್ಟು ಹೆಚ್ಚಾಗಿದೆ, ಅದರಂತೆ ಕಲಬುರಗಿಯಲ್ಲಿ 62 ಮಿಮಿ ನಷ್ಟು ಆಗಬೇಕಾಗಿದ್ದ ಮಳೆ 108 ಮಿಮಿನಷ್ಟು ಹೆಚ್ಚಾಗಿ ಹಳ್ಳ, ಕೊಳ್ಳ, ನದಿಗಳು ತುಂಬಿ ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ.

ಉತ್ತರ ಕರ್ನಾಟಕದಿಂದ ಕೇಂದ್ರದ ಕ್ಯಾಬಿನೆಟ್ ದರ್ಜೆ ಸಚಿವರಾಗಿರುವ ಪ್ರಹ್ಲಾದ್‌ ಜೋಶಿ ಅವರು ಕೇವಲ ತಮ್ಮ ಮತ ಕ್ಷೇತ್ರವಾಗಿರುವ ಹುಬ್ಬಳ್ಳಿ ಧಾರವಾಡಗೆ ಮಾತ್ರ ಸೀಮಿತವಾಗಿದ್ದಾರೆ, ಸಂಪುಟ ಸಚಿವರಾಗಿ ಪಾರ್ಲಿಮೆಂಟ್‌ನಲ್ಲಿ ಧ್ವನಿಯೆತ್ತಿ ಮಳೆಯಿಂದಾಗಿರುವ ಹಾನಿಯ ಕುರಿತು ಮಾತನಾಡಿ ಪರಿಹಾರ ಕಂಡುಕೊಳ್ಳದಿರುವುದು ಖಂಡನೀಯ, ಕೂಡಲೇ ಅತೀವೃಷ್ಟಿಯಾಗಿರುವ ಕುರಿತಾಗಿ ಸಮೀಕ್ಷೆಗೆ ಅಧ್ಯಯನ ತಂಡ ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿಕೊಳ್ಳಬೇಕು ಎಂದು ಒತ್ತಾಯಿಸಿದರು.

BR patil
ಹವಾಮಾನ ವೀಕ್ಷಕರಿಗೆ ಕಳೆದ 2 ವರ್ಷಗಳಿಂದ ಸಿಗದ ಗೌರವಧನ: ಮಳೆ ವರದಿ, ದತ್ತಾಂಶ ವರದಿ ಪೂರೈಕೆಯಲ್ಲಿ ವ್ಯತ್ಯಯ

ರಾಜ್ಯದಿಂದ 17 ಬಿಜೆಪಿ ಸಂಸದರಿದ್ದರೂ ಕೇಂದ್ರ ಸರಕಾರದ ಮುಂದೆ ತುಟಿ ಬಿಚ್ಚದಿರುವುದು ನೋಡಿದರೆ ಜನರ ಬಗ್ಗೆ ಅವರ ಕಾಳಜಿ ಇಲ್ಲದಿರುವುದು ಗೊತ್ತಾಗುತ್ತದೆ, ಅಲ್ಲದೆ, ಇವರೆಲ್ಲ ನಿಷ್ಕ್ರಿಯ ಸಂಸದರಾಗಿದ್ದಾರೆ. ಶೋಭಾ ಕರಂದ್ಲಾಜೆ ಮತ್ತು ಸೋಮಣ್ಣನವರು ಸಹ ಸಚಿವರಾಗಿದ್ದರೂ ರಾಜ್ಯದ ಜನರ ನೋವಿಗೆ ಸ್ಪಂದಿಸುವ ವ್ಯವದಾನವಿಲ್ಲದ ಬಿಜೆಪಿಯ ಸಂಸದ ಸಚಿವರ ವಿರುದ್ದ ಬೇಸರ ವ್ಯಕ್ತಪಡಿಸಿದರು.

ಮಳೆಯಿಂದ ಹಾನಿಯಾದ ಪ್ರದೇಶಗಳ ಜನರಿಗೆ ಎನ್‌ಡಿಆರ್‌ಎಫ್‌ ನಿಯಮದಂತೆ ತಾತ್ಕಾಲಿಕವಾಗಿ ಕೇವಲ 5 ಸಾವಿರ ರೂ. ಪರಿಹಾರ ನೀಡಬಹುದು, ಆದರೆ ಹೆಚ್ಚಿನ ನಷ್ಟ ಸಂಭವಿಸಿದ್ದಲ್ಲಿ ಜನರು ಸಂಕಷ್ಟ ಪಡುವ ತಾಪತ್ರಯವಿದೆ, ಹಾಗಾಗಿ ಕೇಂದ್ರ ಸರಕಾರ ಕಳೆದ ಬಾರಿ ಬರಬೇಕಾಗಿರುವ ಹಣ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಡ ಹೇರಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com