
ಬೆಂಗಳೂರು: ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಒಬ್ಬ ಖಾಸಗಿ ವ್ಯಕ್ತಿ 1 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಆರೋಪಿಗಳನ್ನು ಪೊಲೀಸ್ ಇನ್ಸ್‌ಪೆಕ್ಟರ್ ರಾಜಶೇಖರ್ (48), ಸಬ್ ಇನ್ಸ್‌ಪೆಕ್ಟರ್ ರುಮಾನ್ ಪಾಷಾ (32) ಮತ್ತು ದೇವರ ಜೀವನಹಳ್ಳಿಯ ಇಮ್ರಾನ್ ಬಾಬು (32) ಎಂದು ಗುರುತಿಸಲಾಗಿದೆ.
ಕೇಳಿದ್ದ ಹಣದಲ್ಲಿ 1 ಲಕ್ಷ ರೂ. ಪಡೆಯುತ್ತಿದ್ದಾಗ ಶನಿವಾರ ಸಿಕ್ಕಿಬಿದ್ದಿದ್ದು, ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಕೆಆರ್ ಪುರಂ ನಿವಾಸಿ ಮಂಜುನಾಥ್ (47) ಎಂಬುವವರು ಲೋಕಾಯುಕ್ತ ಅಧಿಕಾರಿಗಳನ್ನು ಸಂಪರ್ಕಿಸಿ, ಆಭರಣ ಮತ್ತು ನಗದು ಕಾಣೆಯಾದ ಬಗ್ಗೆ ಮನೆ ವಿವಾದಕ್ಕೆ ಸಂಬಂಧಿಸಿದ ದೂರಿನ ತನಿಖೆಗಾಗಿ ಆರೋಪಿಗಳು 2 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement