Carpooling: 2 ವರ್ಷವಾದರೂ ಮಾರ್ಗಸೂಚಿ ಹೊರಡಿಸದ ಸರ್ಕಾರ..!

2023ರಲ್ಲಿ ಕಾರ್ ಪೂಲಿಂಗ್'ಗೆ ನಿಷೇಧಿಸಿ, ನಂತರ ಆದೇಶವನ್ನು ರದ್ದುಗೊಳಿಸಿದ್ದ ಸಾರಿಗೆ ಇಲಾಖೆ, ತಕ್ಷಣವೇ ಮಾರ್ಗಸೂಚಿಗಳನ್ನು ಹೊರಡಿಸಬೇಕಿತ್ತು.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆಗೆ ನಿಷೇಧ ಹೇರಿದ ಬಳಿಕ ನಗರದಲ್ಲಿ ಕಾರ್ ಪೂಲಿಂಗ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ರಾಜ್ಯ ಸಾರಿಗೆ ಇಲಾಖೆ ಮಾತ್ರ ಈ ಬಗ್ಗೆ ಇನ್ನೂ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿಲ್ಲ,

2023ರಲ್ಲಿ ಕಾರ್ ಪೂಲಿಂಗ್'ಗೆ ನಿಷೇಧಿಸಿ, ನಂತರ ಆದೇಶವನ್ನು ರದ್ದುಗೊಳಿಸಿದ್ದ ಸಾರಿಗೆ ಇಲಾಖೆ, ತಕ್ಷಣವೇ ಮಾರ್ಗಸೂಚಿಗಳನ್ನು ಹೊರಡಿಸಬೇಕಿತ್ತು, ಆದರೆ, ಎರಡು ವರ್ಷಗಳು ಕಳೆದರೂ ಮಾರ್ಗಸೂಚಿಗಳನ್ನು ಹೊರಡಿಸಿಲ್ಲ.

ಬಳಿಕ ಈ ಮಾರ್ಗಸೂಚಿ ಹೊರಡಿಸಬೇಕಿತ್ತು. ಆದರೆ, 2 ವರ್ಷಗಳು ಕಳೆದರೂ ಇನ್ನೂ ಮಾರ್ಗಸೂಚಿ ಹೊರಡಿಸಿಲ್ಲ.

ಕಾರ್ ಪೂಲಿಂಗ್'ಗೆ ಹಲವಾರು ಆಟೋ ಹಾಗೂ ಕ್ಯಾಬ್ ನಿರ್ವಾಹಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಇಲಾಖೆಯು 2023 ರ ಅಕ್ಟೋಬರ್‌ನಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ನೀಡಲಾಗುವ ಕಾರ್‌ಪೂಲಿಂಗ್ ಸೇವೆಗಳ ನಿಷೇಧವನ್ನು ಘೋಷಿಸಿತ್ತು. ಈ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. ನಂತರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸ್ಪಷ್ಟನೆ ನೀಡಿದ್ದರು.

ಕಾರ್‌ಪೂಲಿಂಗ್ ನಿಷೇಧಿಸಿಲ್ಲ, ಇದು ಸುಳ್ಳು ಸುದ್ದಿ. ಮೊದಲು ಅವರು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಲಿ. ಅವರು ಅನುಮತಿಯನ್ನು ತೆಗೆದುಕೊಳ್ಳದಿರುವಾಗ ನಿಷೇಧದ ಪ್ರಶ್ನೆ ಎಲ್ಲಿದೆ? ಪ್ರತಿಯೊಬ್ಬರೂ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಬಿಳಿ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯೇತರ ಖಾಸಗಿ ವಾಹನಗಳನ್ನು ಕಾರ್‌ಪೂಲಿಂಗ್ ಉದ್ದೇಶಗಳಿಗಾಗಿ ಬಳಸುವುದು ಕಾನೂನುಬಾಹಿರವಾಗಿದೆ. ಹಳದಿ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯ ವಾಹನಗಳನ್ನು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಕಾರ್‌ಪೂಲಿಂಗ್‌ಗೆ ಬಳಸಬಹುದು. ಸೇವಾ ಪೂರೈಕೆದಾರರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸಾರಿಗೆ ಇಲಾಖೆ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ ಎಂದು ಹೇಳಿದ್ದರು.

ಈ ನಡುವೆ ಇತ್ತೀಚೆಗೆ ಹೈಕೋರ್ಟ್ ಬೈಕ್ ಟ್ಯಾಕ್ಸಿ ಸೇವೆಗಳ ಮೇಲೆ ನಿಷೇಧ ಹೇರಿತ್ತು. ಇದರ ಬೆನ್ನಲ್ಲೇ ಇದೂ ಕಾರ್ ಪೂಲಿಂಗ್ ಸೇವೆಯತ್ತ ಜನರು ಮತ್ತೆ ಮುಖ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಕಾರ್‌ಪೂಲಿಂಗ್ ವಿಚಾರ ರಾಜ್ಯ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪವಾಯಿತು. ಬಿಜೆಪಿ ಎಂಎಲ್‌ಸಿ ಡಿ.ಎಸ್. ಅರುಣ್ ಅವರು, ಈ ವಿಷಯವನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಗಮನಕ್ಕೆ ತಂದರು, ಸರಿಯಾದ ಕಾನೂನು ಮಾರ್ಗಸೂಚಿಗಳನ್ನು ರೂಪಿಸಬೇಕು ಮತ್ತು ಕಾರ್‌ಪೂಲಿಂಗ್ ಸೇವೆಗಳನ್ನು ರಚಿಸಬೇಕು ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ರಾಮಲಿಂಗಾ ರೆಡ್ಡಿಯವರು ರಾಜ್ಯದಲ್ಲಿ ಕಾರ್‌ಪೂಲಿಂಗ್‌ಗೆ ಯಾವುದೇ ನಿಷೇಧವಿಲ್ಲ ಎಂದು ಹೇಳಿದರು.

ಪ್ರತಿದಿನ ಸುಮಾರು 45,000 ಜನರು ಕಾರ್ ಪೂಲಿಂಗ್ ಸೇವೆಗಳನ್ನು ಪಡೆಯುತ್ತಿದ್ದಾರೆಂದು ಬೆಂಗಳೂರಿನಲ್ಲಿ ಕಾರ್‌ಪೂಲಿಂಗ್ ಸೇವೆಗಳನ್ನು ಒದಗಿಸುವ ಕಂಪನಿಗಳು ಮಾಹಿತಿ ನೀಡಿದೆ.

File photo
ಖಾಸಗಿ ಆಂಬ್ಯುಲೆನ್ಸ್'ಗಳಿಗೆ ಸರ್ಕಾರ ಶಾಕ್: ಸೇವಾ ದರ ನಿಗದಿಪಡಿಸಿ, Ola-Uber ರೀತಿ ಸೇವೆ ಪ್ರಾರಂಭಿಸಲು ಮುಂದು, ಶೀಘ್ರದಲ್ಲೇ ಮಸೂದೆ ಮಂಡನೆ

ಏನಿದು ಕಾರ್ ಪೂಲಿಂಗ್?

ನಾಲ್ಕು ಜನರು ತಮ್ಮ ಕಾರ್​ ಗಳನ್ನು ರಸ್ತೆಗೆ ಇಳಿಯುವದಕ್ಕಿಂತ ತಮ್ಮದೇ ಮಾರ್ಗದಲ್ಲಿ ಹೋಗುತ್ತಿರುವ ಮತ್ತೋರ್ವ ವ್ಯಕ್ತಿಯ ಕಾರ್​ ನಲ್ಲಿ ಪ್ರಯಾಣಿಸುವುದು ಕಾರ್ ಪೂಲಿಂಗ್ ಆಗಿದೆ.

ನಾಲ್ವರು ನಾಲ್ಕು ಕಾರ್​ ತೆಗೆದುಕೊಂಡು ರಸ್ತೆಗೆ ಬಂದರೆ ಸಹಜವಾಗಿಯೇ ಟ್ರಾಫಿಕ್ ಹೆಚ್ಚಳವಾಗಬಹುದು. ಆದರೆ, ಕಾರ್ ಪೂಲಿಂಗ್ ಮೂಲಕ ಒಂದೇ ಕಾರ್ ನಲ್ಲಿ ಶೇರ್ ಮಾಡಿಕೊಂಡು ಪ್ರಯಾಣ ಮಾಡುವುದರಿಂದ ಹಣ ಕೂಡ ಉಳಿತಾಯ ಮಾಡಬಹುದಾಗಿದೆ. ಈ ಲಾಭಗಳಿಂದಾಗಿ ಬಹುತೇಕರು ಕಾರ್ ಪೂಲಿಂಗ್ ಬಳಸಲು ಮುಂದಾಗಿದ್ದಾರೆ.

ಕಾರ್ ಪೂಲಿಂಗ್ ಅಥವಾ ಕಾರ್ ಶೇರಿಂಗ್ ಮಾಹಿತಿ ಪಡೆದುಕೊಳ್ಳಲು ಆನ್​ಲೈನ್​ ಹಲವು ಆ್ಯಪ್​ ಗಳಿವೆ. ಕ್ವಿಕ್ ರೈಡ್, ಬ್ಲಾ ಬ್ಲಾ ಕಾರ್, ಕಮ್ಯೂಟ್ ಈಸಿ, ರೈಡ್ ಶೇರ್, ಕಾರ್​ ಪೂಲ್ ಅಡ್ಡಾ ಸೇರಿದಂತೆ ಹಲವು ಆ್ಯಪ್​​ ಗಳು ಪ್ಲೇಸ್ಟೋರ್​ ನಲ್ಲಿ ಸಿಗುತ್ತವೆ.

ಈ ಆ್ಯಪ್ ಗಳನ್ನು ಡೌನ್​​ಲೋಡ್ ಮಾಡಿಕೊಂಡು ನಿಮ್ಮ ಲೋಕೇಶನ್ ಬಳಿ ಯಾವುದಾದರೂ ಕಾರ್ ಇದೆಯಾ ಎಂದು ಚೆಕ್ ಮಾಡಿ, ಬುಕ್ ಮಾಡಿಕೊಳ್ಳಬಹುದು. ಕಾರ್ ಚಾಲಕನಿಗೆ ನಿಗದಿತ ಮೊತ್ತವನ್ನು ನೀಡಬೇಕು. ಒಂದು ರೀತಿ ಓಲಾ, ಊಬರ್ ರೀತಿಯಲ್ಲಿ ಕಾರ್ ಪೂಲಿಂಗ್ ಕೆಲಸ ಮಾಡುತ್ತದೆ.

ಕಾರ್ ಪೂಲಿಂಗ್​ಗೆ ವೈಟ್​ ಬೋರ್ಡ್ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದರಿಂದ ಆಟೋ, ಓಲಾ, ಊಬರ್ ಗಳ ಮೇಲೆ ಹೊಡೆತ ಬೀಳುತ್ತದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಕಾರ್ ಪೂಲಿಂಗ್ ಮೇಲೆ ನಿಷೇಧ ವಿಧಿಸಬೇಕೆಂದು ಆಟೋ ಸಂಘಟನೆಗಳು ಒತ್ತಾಯಿಸುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com