ಅನನ್ಯಾ ಭಟ್ ನಾಪತ್ತೆ ಕೇಸ್‌ಗೆ ಟ್ವಿಸ್ಟ್: ಯಾರದ್ದೋ ಫೋಟೋ ಕೊಟ್ಟು ಸಿಕ್ಕಿಹಾಕಿಕೊಂಡ ಸುಜಾತ ಭಟ್; ಆ ಮಹಿಳೆ ಯಾರು?

ಧರ್ಮಸ್ಥಳ ಬುರುಡೆ ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸುಜಾತ ಭಟ್ ನನ್ನ ಮಗಳು ಅಂತ ಕೊಟ್ಟಿದ್ದ ಫೋಟೋ ಬಗ್ಗೆ ಗುಮಾನಿಗಳು ಎದ್ದಿದ್ದವು.
Sujatha Bhat
ಸುಜಾತ ಭಟ್
Updated on

ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದರ ಮಧ್ಯೆ ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸುಜಾತ ಭಟ್ ನನ್ನ ಮಗಳು ಅಂತ ಕೊಟ್ಟಿದ್ದ ಫೋಟೋ ಬಗ್ಗೆ ಗುಮಾನಿಗಳು ಎದ್ದಿದ್ದವು. ಯಾರದ್ದೋ ಫೋಟೋ ಕೊಟ್ಟು ಸುಜಾತ ಭಟ್ ಈಗ ಸಿಕ್ಕಿಹಾಕಿಕೊಂಡ್ರಾ ಎಂಬ ಪ್ರಶ್ನೆಗಳು ಎದ್ದಿವೆ.

ಹೌದು... ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ಆಗಿದ್ದವು. ಅಸಲಿಗೆ ಸುಜಾತ ಭಟ್ ಗೆ ಮಕ್ಕಳೆ ಇಲ್ಲ ಎಂದು ಅವರ ಸಂಬಂಧಿಗಳು ತಿಳಿಸಿದ್ದರು. ಹೀಗಾಗಿ ಸುಜಾತ ಭಟ್ ಒತ್ತಡಕ್ಕೆ ಸಿಲುಕ್ಕಿದ್ದು ತಾನು ಮಾಡಿದ್ದ ಆರೋಪಕ್ಕೆ ಯಾವುದಾದರೊಂದು ಸಾಕ್ಷಿ ಕೊಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಇದರ ಬೆನ್ನಲ್ಲೇ ಲಾಯರ್ ಜೊತೆ ಬಂದ ಸುಜಾತ ಭಟ್. ಇವಳೇ ನನ್ನ ಮಗಳು ಅನನ್ಯಾ ಭಟ್​ ಎಂದು ಫೋಟೋ ರಿಲೀಸ್ ಮಾಡಿದ್ದರು. ಆದರೆ ಈ ಫೋಟೋದಲ್ಲಿ ಇರೋದು ಅನನ್ಯಾ ಭಟ್ ಅಲ್ಲ. ನನ್ನ ತಂಗಿ ವಾಸಂತಿ ಎಂದು ಕೊಡಗಿನ ವಿಜಯ್ ಎಂಬುವರು ಹೇಳಿದ್ದಾರೆ.

2003ರಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ನನ್ನ ಮಗಳು ಅನನ್ಯಾ ಭಟ್​ ನಾಪತ್ತೆಯಾಗಿದ್ದಳು. ಆಕೆಯನ್ನು ಹುಡುಕಿಕೊಡಿ ಎಂದು ಮಹಿಳೆ ಸುಜಾತ ಭಟ್​ ಆರೋಪ ಮಾಡಿದ್ದರು. ಅಲ್ಲದೆ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದರು. ಇನ್ನು ಸುಜಾತ ಭಟ್ ತೋರಿಸಿರುವ ಫೋಟೋದಲ್ಲಿರುವುದು ನನ್ನ ತಂಗಿ ವಾಸಂತಿ. ಆಕೆ 2007ರಲ್ಲಿ ಮೃತಪಟ್ಟಿದ್ದಳು ಎಂದು ವಿಜಯ್ ಹೇಳಿದ್ದಾರೆ.

Sujatha Bhat
ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ಜನಾರ್ಧನ ರೆಡ್ಡಿ ಆರೋಪಕ್ಕೆ ತಮಿಳುನಾಡು ಕಾಂಗ್ರೆಸ್ ಸಂಸದ ತಿರುಗೇಟು! ಹೇಳಿದ್ದು ಏನು?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com