
ಬೆಂಗಳೂರು: ಧರ್ಮಸ್ಥಳ ವಿಚಾರವಾಗಿ ಯೂಟ್ಯೂಬರ್ ಎಂಡಿ ಸಮೀರ್ (MD Sameer) ವಿರುದ್ಧ ಎಫ್ ಐಆರ್ ದಾಖಲಾಗುತ್ತಿದ್ದಂತೆಯೇ ಈ ಹಿಂದೆ ಆತನನ್ನು ಬೆಂಬಲಿಸಿ ವಿಡಿಯೋ ಮಾಡಿದ್ದ ಕನ್ನಡದ Content Creators ಯೂಟರ್ನ್ ಹೊಡೆದಿದ್ದಾರೆ.
ಹೌದು.. ಈ ಹಿಂದೆ ಧರ್ಮಸ್ಥಳ ವಿಚಾರವಾಗಿ ಎಐ ವಿಡಿಯೋ ಮಾಡಿ ವ್ಯಾಪಕ ವೈರಲ್ ಆಗಿದ್ದ ಎಂಡಿ ಸಮೀರ್ ವಿರುದ್ಧ ಬೆದರಿಕೆ ಆರೋಪಗಳು ಕೇಳಿಬಂದಿದ್ದವು.
ಈ ವೇಳೆ ಸಮೀರ್ ಗೆ ಬೆಂಬಲ ಸೂಚಿಸಿ ಹಲವು ಕಂಟೆಂಟ್ ಕ್ರಿಯೇಟರ್ ಗಳು ವಿಡಿಯೋ ಮಾಡಿದ್ದರು. ಕಟೆಂಟ್ ಕ್ರಿಯೇಟರ್ ಗಳಾದ ದೀಪಕ್, ಮಧು, ತೇಜಸ್ ಗೌಡ ಸೇರಿದಂತೆ ಹಲವರು ಎಂಡಿ ಸಮೀರ್ ಭೇಟಿ ಮಾಡಿ ಬೆಂಬಲ ಸೂಚಿಸಿದ್ದರು.
ಇದೀಗ ಸಮೀರ್ ವಿರುದ್ಧವೇ ಎಫ್ ಐಆರ್ ದಾಖಲಾಗಿದ್ದು, ಅಂದು ಸಮೀರ್ ಗೆ ಬೆಂಬಲ ನೀಡಿದ್ದ ಈ ಕಂಟೆಂಟ್ ಕ್ರಿಯೇಟರ್ ಗಳ ವಿರುದ್ಧವೂ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಅತ್ತ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಲೇ ಇತ್ತ ಈ ಕುರಿತು ಸ್ಪಷ್ಟನೆ ನೀಡಿರುವ ಕಂಟೆಂಟ್ ಕ್ರಿಯೇಟರ್ಸ್, 'ನಾವು ಅಂದು ಸೌಜನ್ಯ ಪ್ರಕರಣದ ವಿಚಾರವಾಗಿ ಮಾತ್ರ ಸಮೀರ್ ಗೆ ಬೆಂಬಲ ನೀಡಿದ್ದೆವು. ಸಮೀರ್ ಏನು ಮಾಡಿದ್ದಾರೆ ನಮಗೆ ಗೊತ್ತಿಲ್ಲಾ.. ನಾವು ಅಂದು ಸಮೀರ್ ಬೆಂಬಲಕ್ಕೆ ನಿಂತಿರಲಿಲ್ಲ ಎಂದು ಹೇಳಿದ್ದಾರೆ.
ಸಮೀರ್ ಗೆ ನಿರೀಕ್ಷಣಾ ಜಾಮೀನು
ಇನ್ನು ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಕುರಿತು AI ವಿಡಿಯೋ ಮಾಡಿ, ಬಂಧನ ಭೀತಿಯಲ್ಲಿದ್ದ ಯುಟ್ಯೂಬರ್ ಎಂಡಿ ಸಮೀರ್ಗೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ನಿನ್ನೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಧರ್ಮಸ್ಥಳ ವಿರುದ್ಧ ವಿಡಿಯೋ ಮೂಲಕ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಜುಲೈ 12ರಂದು ಸಮೀರ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ಅಲ್ಲದೆ ಸಮೀರ್‌ನನ್ನು ವಶಕ್ಕೆ ಪಡೆಯಲು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ಕೂಡ ನಡೆಸಿದ್ದರು. ಇದಕ್ಕೂ ಮೊದಲೇ ಸಮೀರ್ ಗೆ ನಿರೀಕ್ಷಣಾ ಜಾಮೀನು ಮಂಜಾರಾಗಿದೆ.
Advertisement