ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಕಡಿತಕ್ಕೆ ಕಾರಣವೇನು: ಬೆಸ್ಕಾಂ ಅಧಿಕಾರಿಗಳು ಏನಂತಾರೆ?

ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ಲಿಮಿಟೆಡ್ (BESCOM) ನಲ್ಲಿ ಕೆಲಸ ಮಾಡುವ ಲೈನ್‌ಮೆನ್‌ಗಳು ವಿದ್ಯುತ್ ಕೇಬಲ್‌ಗಳನ್ನು ಇಲಿಗಳು ಕಡಿಯುವ ಹಲವಾರು ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ ಎಂದು ಹೇಳುತ್ತಾರೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಪದೇ ಪದೇ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಇದು ದಿನನಿತ್ಯದ ನಿರ್ವಹಣಾ ಕಾರ್ಯದ ಪರಿಣಾಮವಾಗಿ ಅಲ್ಲ, ಬದಲಾಗಿ ಇಲಿ, ಹೆಗ್ಗಣಗಳ ಕಡಿತದ ಸಮಸ್ಯೆಯಿಂದಾಗಿರಬಹುದು ಎಂದು ಹೇಳಲಾಗುತ್ತಿದೆ.

ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ಲಿಮಿಟೆಡ್ (BESCOM) ನಲ್ಲಿ ಕೆಲಸ ಮಾಡುವ ಲೈನ್‌ಮೆನ್‌ಗಳು ವಿದ್ಯುತ್ ಕೇಬಲ್‌ಗಳನ್ನು ಇಲಿಗಳು ಕಡಿಯುವ ಹಲವಾರು ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ ಎಂದು ಹೇಳುತ್ತಾರೆ.

ವಿದ್ಯುತ್ ಕಡಿತವಾಗಿದೆ ಎಂದು ಡಕ್ಟ್‌ಗಳನ್ನು ತೆರೆದಾಗ ಇಲಿಗಳಿಂದಾಗಿ ಆಗಿರುತ್ತವೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಇಲಿಗಳು ತಂತಿಗಳನ್ನು ಕಡಿಯುವ ಘಟನೆಗಳು ಹೆಚ್ಚುತ್ತಿವೆ ಎಂದು ಅರಮನೆ ಮೈದಾನದ ಬಳಿ ಕೆಲಸ ಮಾಡುವ ಲೈನ್‌ ಮ್ಯಾನ್‌ ಒಬ್ಬರು ಹೇಳುತ್ತಾರೆ.

ನಾಗರಭಾವಿಯ ಮತ್ತೊಬ್ಬ ಲೈನ್‌ಮ್ಯಾನ್‌, ಪ್ರತಿ ಬಾರಿ ವಿದ್ಯುತ್ ಕಡಿತದ ದೂರು ಬಂದಾಗ, ನಾವು ಮೊದಲು ಪರಿಶೀಲಿಸುವುದು ಇಲಿಗಳಿಂದಾಗಿ ವಿದ್ಯುತ್ ಲೈನ್ ಹಾನಿಗೊಳಗಾಗಿದೆಯೇ ಎಂದು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ನಾವು ತಕ್ಷಣ ದೊಡ್ಡ ಪ್ರದೇಶಕ್ಕೆ ವಿದ್ಯುತ್ ಸರಬರಾಜನ್ನು ಆಫ್ ಮಾಡಿ ನಂತರ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂದರು.

ಬೆಸ್ಕಾಮ್ ದತ್ತಾಂಶದ ಪ್ರಕಾರ, ಜುಲೈ 2019 ರಿಂದ ಈ ವರ್ಷ ಜುಲೈಯವರೆಗೆ ಬೆಸ್ಕಾಮ್ ವ್ಯಾಪ್ತಿಯಲ್ಲಿ ಒಟ್ಟು 7,367.45 ಕಿ.ಮೀ. ಹೈಟೆನ್ಷನ್ ಅಂಡರ್ ಕೇಬಲ್‌ಗಳನ್ನು ಜಾಲವ್ಯಾಪ್ತಿಗೆ ಸೇರಿಸಲಾಗಿದೆ. ಅಲ್ಲದೆ, ಅದೇ ಅವಧಿಯಲ್ಲಿ 6,707.63 ಕಿ.ಮೀ. ಕಡಿಮೆ ಒತ್ತಡದ ಅಂಡರ್ ಕೇಬಲ್‌ಗಳನ್ನು ಸೇರಿಸಲಾಗಿದೆ.

Representational image
ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರಿಗೆ ನೀರು, ಕರೆಂಟ್ ಕಟ್: ಪಾಲಿಕೆ ಶಿಸ್ತು ಕ್ರಮಕ್ಕೆ BWSSB- BESCOM ಸಾಥ್!

ಖಾಸಗಿ ಸಂಸ್ಥೆಗಳು, ಇತರ ಏಜೆನ್ಸಿಗಳಿಂದ ಸಹ ವಿವಿಧ ಕಾಮಗಾರಿ ಮಾಡುವ ಸಂದರ್ಭಗಳಲ್ಲಿ ವಿದ್ಯುತ್ ತಂತಿಗಳು ಹಾನಿಗೀಡಾಗುತ್ತವೆ. ಖಾಸಗಿ ಸಂಸ್ಥೆಗಳು, ನಾಗರಿಕರು ಮತ್ತು ಅಗೆಯುವ ಕೆಲಸವನ್ನು ತೆಗೆದುಕೊಳ್ಳುವ ಇತರ ಸರ್ಕಾರಿ ಸಂಸ್ಥೆಗಳು ಸಹ ತಂತಿಗಳು ಮತ್ತು ಕೇಬಲ್‌ಗಳನ್ನು ಹಾನಿಗೊಳಿಸುತ್ತವೆ. ಆದರೆ ಇಲಿ, ಹೆಗ್ಗಣಗಳ ಕಾಟ ಹೆಚ್ಚಾಗಿರುತ್ತದೆ ಎಂದರು.

ನಗರದಲ್ಲಿ ಇಲಿ-ಹೆಗ್ಗಣಗಳ ಕಾಟ ಹೆಚ್ಚಾಗುತ್ತಿದೆ. ನಗರದಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆ ಕೂಡ ಇದಕ್ಕೆ ಕಾರಣವಾಗಿದೆ. ಈ ಸಮಸ್ಯೆ ಕೇವಲ ರೆಸ್ಟೋರೆಂಟ್‌ಗಳು ಮತ್ತು ತಿನಿಸು ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶಗಳಿಗೆ ಸೀಮಿತವಾಗಿಲ್ಲ, ವಸತಿ ಮತ್ತು ವಾಣಿಜ್ಯ ಸ್ಥಳಗಳಿಗೂ ವ್ಯಾಪಿಸಿದೆ.

Representational image
ವಿದ್ಯುತ್ ಸಂಪರ್ಕಕ್ಕೆ ನಕಲಿ Occupancy certificate ಸಲ್ಲಿಕೆ: Bescom-BBMP ಕ್ರಮಕ್ಕೆ ಮುಂದು, ದತ್ತಾಂಶ ಸಂಗ್ರಹ..!

ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಕಾಮಗಾರಿ ನೆಲ ಅಗೆಯುತ್ತವೆ. ನಂತರ ತ್ವರಿತವಾಗಿ ಮುಚ್ಚಲು ಸಾಧ್ಯವಾಗದಿರುವಾಗ ಸಂಪೂರ್ಣ ಮಾರ್ಗವನ್ನು ಬದಲಾಯಿಸಬೇಕಾಗುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ಈ ಸಮಸ್ಯೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಗಮನಕ್ಕೆ ತರಲಾಗಿದ್ದರೂ ಹೆಚ್ಚಿನ ಕ್ರಮ ಕೈಗೊಳ್ಳಲಾಗಿಲ್ಲ.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್ ಶಿವ ಶಂಕರ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(The New Indian Express) ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡಿ, ಲೈನ್‌ ಮ್ಯಾನ್ ಮತ್ತು ಸಿಬ್ಬಂದಿ ಇಲಿ ಕಡಿತದ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಮರಗಳ ಕೊಂಬೆ ಬೀಳುವುದು, ಮರದ ಕೊಂಬೆಗಳು ಲೈವ್ ತಂತಿಗಳೊಂದಿಗೆ ಸಂಪರ್ಕಕ್ಕೆ ಬರುವುದು, ಟ್ರಾನ್ಸ್‌ಫಾರ್ಮರ್‌ಗಳು ಹಳೆಯದಾಗಿರುವುದರಿಂದ ಅವು ಮುರಿದುಹೋಗುವುದು ಸಹ ವಿದ್ಯುತ್ ಕಡಿತಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com