ಬೆಳಗಾವಿ: ಕಿಯೋಸ್ಕ್‌‌ನಿಂದ ಎಟಿಎಂ ಯಂತ್ರ ಕಳ್ಳತನ; ಒಡೆಯಲು ಆಗದೆ ಬಿಸಾಡಿ ಹೋದ ಖದೀಮರು! Video

ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
two men were seen pushing the empty cart back towards the kiosk
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
Updated on

ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಇಂಡಿಯಾ ಬ್ಯಾಂಕ್‌ ಎಟಿಎಂ ಯಂತ್ರವನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಕಿಯೋಸ್ಕ್‌ನಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದ್ದು, ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿದೆ ಎಂದು ಅವರು ಹೇಳಿದರು.

ದುಷ್ಕರ್ಮಿಗಳು ಎಟಿಎಂ ಯಂತ್ರವನ್ನು ಕಿಯೋಸ್ಕ್‌ನಿಂದ ಹೊರತೆಗೆದುಕೊಂಡು ಬಂದು, ಅದನ್ನು ತಳ್ಳುವ ಗಾಡಿಯಲ್ಲಿಟ್ಟುಕೊಂಡು ಸುಮಾರು 200 ಮೀಟರ್ ದೂರ ತಳ್ಳಿಕೊಂಡು ಹೋಗಿದ್ದಾರೆ. ಬಳಿಕ ತಮ್ಮ ವಾಹನದಲ್ಲಿ ಯಂತ್ರವನ್ನು ಇರಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಗಳಲ್ಲಿ ಒಂದರಲ್ಲಿ, ಇಬ್ಬರು ವ್ಯಕ್ತಿಗಳು ಖಾಲಿ ಗಾಡಿಯನ್ನು ಕಿಯೋಸ್ಕ್ ಕಡೆಗೆ ತಳ್ಳಿಕೊಂಡು ಬರುತ್ತಿರುವುದು ಕಂಡುಬಂದಿದೆ.

ಪ್ರಾಥಮಿಕ ತನಿಖೆಗಳ ಆಧಾರದ ಮೇಲೆ, 1 ಲಕ್ಷ ರೂ.ಗೂ ಹೆಚ್ಚು ಹಣ ಹೊಂದಿದ್ದ ಯಂತ್ರವನ್ನು ಶಂಕಿತರು ತೆರೆಯಲು ಯತ್ನಿಸಿದ್ದಾರೆ. ಆದರೆ, ವಿಫಲವಾದಾಗ ಕೆಲವು ಮೀಟರ್ ದೂರದಲ್ಲಿ ಅದನ್ನು ಬಿಟ್ಟು ಹೋಗಿದ್ದಾರೆ. ನಂತರ ಅದನ್ನು ವಶಪಡಿಸಿಕೊಳ್ಳಲಾಗಿದ್ದು, ನಗದು ಹಾಗೆಯೇ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳ್ಳತನ ನಡೆದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಸುಮಾರು 15 ದಿನಗಳ ಹಿಂದೆ ಹೊಸ ಎಟಿಎಂ ಅನ್ನು ತೆರೆಯಲಾಗಿದ್ದರಿಂದ, ಈ ಕಿಯೋಸ್ಕ್ ಅನ್ನು ಮುಚ್ಚಲಾಗಿತ್ತು ಮತ್ತು ಎಲ್ಲ ಸೆನ್ಸಾರ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು ಎಂದು ಅಧಿಕಾರಿ ಹೇಳಿದರು.

ಹಳೆಯ ಕಿಯೋಸ್ಕ್‌ಗೆ ಕಾವಲುಗಾರ ಇರಲಿಲ್ಲ, ಇದು ಕಳ್ಳತನ ಮಾಡಲು ದುಷ್ಕರ್ಮಿಗಳಿಗೆ ಸುಲಭವಾಯಿತು.

ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

two men were seen pushing the empty cart back towards the kiosk
Watch | ಎಟಿಎಂ ವ್ಯಾನ್ ದರೋಡೆ: ಪೊಲೀಸ್ ಕಾನ್‌ಸ್ಟೆಬಲ್ ಸೇರಿ ಇಬ್ಬರ ಬಂಧನ; 5.76 ಕೋಟಿ ರೂ ವಶ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com