

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ವರದಿಯಾಗಿದ್ದು ತಾನು ಪ್ರೀತಿಸಿದ್ದ ಹಿಂದೂ ಯುವತಿ 'ಮುಸ್ಲಿಂ ಮತಕ್ಕೆ ಮತಾಂತರವಾಗದಿದ್ರೆ ಆಕೆಯನ್ನು ಕೊಂದು 32 ತಂಡು ಮಾಡುತ್ತೇನೆ' ಎಂದು ಮುಸ್ಲಿಂ ಯುವಕನೋರ್ವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಸ್ವತಃ ಸಂತ್ರಸ್ಥ ಹಿಂದೂ ಯುವತಿ ಮಾಧ್ಯಮಗಳೊಂದಿಗೆ ತನ್ನ ಅಳಲು ತೋಡಿಕೊಂಡಿದ್ದು, ಮತಾಂತರಗೊಂಡರಷ್ಟೇ ಮದುವೆಯಾಗ್ತೀನಿ, ಇಲ್ಲವಾದ್ರೆ ದೆಹಲಿ ಮಾದರಿಯಲ್ಲಿ ಕೊಂದು 32 ಪೀಸ್ ಮಾಡಿ ಬಳಿಕ ಎರಡನೇ ಮದುವೆಯಾಗ್ತೀನಿ ಎಂದು ಯುವತಿಗೆ ಮನ ಬಂದಂತೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಬೆಂಗಳೂರಿನ ಸುದ್ದಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿ ಉಸ್ಮಾನ್ ಎಂಬಾತನ ಮೇಲೆ ಸಂತ್ರಸ್ಥ ಯುವತಿ ಲವ್ ಜಿಹಾದ್ ನ ಗಂಭೀರ ಆರೋಪ ಹೊರಿಸಿದ್ದಾರೆ. ಈ ಸಂಬಂಧ ಯುವತಿ ಸುದ್ದಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯುವತಿ ಕೊಟ್ಟಿದ ದೂರಿನ ಆಧಾರದ ಮೇಲೆ, ಪ್ರೀತಿ ಮಾಡಿ ಬಳಿಕ ಮದುವೆಯಾಗುವುದಾಗಿ ನಂಬಿಸಿ ಲಿವಿಂಗ್ ಟು ಗೆದರ್ ರಿಲೇಷನ್ ಶಿಪ್ನಲ್ಲಿದ್ದ ಅನ್ಯಕೋಮಿನ ಯುವಕ, ಯುವತಿಗೆ ಮತಾಂತರಗೊಳ್ಳುವಂತೆ ಚಿತ್ರಹಿಂಸೆ ನೀಡಿದ್ದಾನೆ ಎಂದು ದೂರು ದಾಖಲಾಗಿದೆ.
ಇಷ್ಟಕ್ಕೂ ಯುವತಿ ಆರೋಪವೇನು?
ಆರೋಪಿ ಉಸ್ಮಾನ್ ಸಂತ್ರಸ್ತೆಗೆ ಕಳೆದ ಎರಡು ವರ್ಷದ ಹಿಂದೆ ಸ್ನೇಹಿತರ ಮೂಲಕ ಪರಿಚಯ ಆಗಿದ್ದನಂತೆ. ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಆರಂಭದಲ್ಲಿ ಅನ್ಯಕೋಮಿನ ಯುವಕ ಎಂಬ ಕಾರಣಕ್ಕೆ ಯುವತಿ ಪ್ರೀತಿ ನಿರಾಕರಿಸಿದ್ದಳಂತೆ. ಈ ವೇಳೆ ಉಸ್ಮಾನ್, ತನ್ನ ಪ್ರೀತಿ ಒಪ್ಪಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದನಂತೆ.
ಬಳಿಕ ಮತಾಂತರ ಆಗುವುದು ಬೇಡ ಹಾಗೆ ಮದುವೆ ಆಗೋಣ ಎಂದು ಯುವತಿಯನ್ನ ನಂಬಿಸಿದ್ದ. ಉಸ್ಮಾನ್ ಮಾತಿಗೆ ಮರುಳಾದ ಯುವತಿ ನಂತರ ಪ್ರೀತಿಗೆ ಒಪ್ಪಿಕೊಂಡಿದ್ದಾಳೆ. ಇಬ್ಬರು 1.5 ವರ್ಷಗಳಿಂದ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದರು. ನಂತರ ಯುವತಿ ಮದುವೆಯಾಗು ಎಂದು ಉಸ್ಮಾನ್ ಬಳಿ ಕೇಳಿದಾಗ, ಮತಾಂತರಗೊಂಡರಷ್ಟೇ ಮದುವೆ ಎಂದು ಆತ ಉಲ್ಟಾ ಹೊಡೆದಿದ್ದ ಎಂದು ಸಂತ್ರಸ್ತೆ ದೂರಿದ್ದಾರೆ.
ಮತಾಂತರವಾಗದಿದ್ರೆ 32 ಪೀಸ್ ಮಾಡ್ತೀನಿ
ಯುವತಿ ಮತಾಂತರಕ್ಕೆ ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಆರೋಪಿ ಉಸ್ಮಾನ್ ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಮಾತ್ರವ್ಲಲ್ಲದೇ ಸಂತ್ರಸ್ತ ಯುವತಿಯಿಂದ ಈತ ಬರೊಬ್ಬರಿ 12.20 ಲಕ್ಷ ರೂ ಹಣವನ್ನು ಪಡೆದಿದ್ದನಂತೆ. ಬಳಿಕ ಇದು ಅಷ್ಟಕ್ಕೇ ನಿಲ್ಲದೇ ಆರೋಪಿ ಉಸ್ಮಾನ್ ಆಕೆಯ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ಪಡೆದು ಅಡವಿಟ್ಟಿದ್ದ ಎಂದು ಸಂತ್ರಸ್ಥೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಉಸ್ಮಾನ್ ಮಾತಿಗೆ ಮರುಳಾದ ಯುವತಿ ನಂತರ ಪ್ರೀತಿಗೆ ಒಪ್ಪಿಕೊಂಡಿದ್ದಾಳೆ. ಇಬ್ಬರು 1.5 ವರ್ಷಗಳಿಂದ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದರು. ನಂತರ ಯುವತಿ ಮದುವೆಯಾಗು ಎಂದು ಉಸ್ಮಾನ್ ಬಳಿ ಕೇಳಿದಾಗ, ಮತಾಂತರಗೊಂಡರಷ್ಟೇ ಮದುವೆ ಎಂದು ಆತ ಉಲ್ಟಾ ಹೊಡೆದಿದ್ದ. ಮತಾಂತರಗೊಳ್ಳಲು ಒಪ್ಪದಿದ್ದಾಗ ಯುವತಿಯ ಖಾಸಗಿ ಫೋಟೋಗಳನ್ನ ಇಟ್ಟುಕೊಂಡು ಬ್ಲ್ಯಾಕ್ ಮೇಲೆ ಮಾಡಿದ.
ಪ್ರೀತಿ-ಪ್ರೇಮ ಎಂದು ಸುತ್ತಾಡಿದ ಉಸ್ಮಾನ್ ಮದುವೆಯಾಗು ಅಂತಿದ್ದಂತೆ ವರಸೆ ಬದಲಿಸಿದ್ದನಂತೆ. ಮತಾಂತರಗೊಂಡರಷ್ಟೇ ಮದುವೆಯಾಗ್ತೀನಿ, ಇಲ್ಲವಾದ್ರೆ ದೆಹಲಿ ಮಾದರಿಯಲ್ಲಿ ಕೊಂದು ಎರಡನೇ ಮದುವೆಯಾಗ್ತೀನಿ ಎಂದು ಯುವತಿಗೆ ಮನ ಬಂದಂತೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ 32 ಪೀಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟು ನಂತರ ಇನ್ನೊಂದು ಮದುವೆ ಆಗ್ತೀನಿ ಎಂದು ಉಸ್ಮಾನ್ ಬೆದರಿಕೆ ಹಾಕಿದ್ದ ಎಂದು ಯುವತಿ ದೂರು ಕೊಟ್ಟಿದ್ದಾರೆ.
ಮಾದಕ ವ್ಯಸನಿ, ಲೈಂಕಿಗ ದೌರ್ಜನ್ಯ ಆರೋಪ
ಇದೇ ವೇಳೆ, ಉಸ್ಮಾನ್ ಡ್ರಗ್ ಅಡಿಕ್ಟ್ ಎಂಬ ವಿಚಾರ ಯುವತಿಗೆ ತಿಳಿದುಬಂದಿದ್ದು, ಹಣ ಮತ್ತು ಚಿನ್ನ ವಂಚಿಸಿದ್ದಲ್ಲದೆ, ಯುವತಿಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಮತ್ತು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದೂ ಆರೋಪಿಸಲಾಗಿದೆ.
ಆತ್ಮಹತ್ಯೆಗೆ ಯುವತಿ ಯತ್ನ!
ಉಸ್ಮಾನ್ ನಿಂದ ತೀವ್ರ ನೊಂದಿದ್ದ ಯುವತಿ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಮಾರ್ಚ್ ನಲ್ಲೇ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದ ಯುವತಿ ಇದೀಗ ಸರಿಯಾದ ಕ್ರಮ ತೆಗೆದುಕೊಳ್ಳಲು ಪೊಲೀಸರು ಹಿಂದೇಟು ಹಾಕ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಾನು ಹೇಳಿದಂತೆ ಎಫ್ ಐ ಆರ್ ಮಾಡದೇ ಚಾರ್ಜ್ ಶೀಟ್ ಮಾಡಿಲ್ಲ. ನನಗೆ ಸೂಕ್ತ ನ್ಯಾಯ ಕೊಡಿಸಿ ಎಂದು ಸಂತ್ರಸ್ತೆ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
Advertisement