ವಸತಿ ಯೋಜನೆಯಡಿ 7.38 ಲಕ್ಷ ಮನೆಗಳ ಹಂಚಿಕೆ: ಸಚಿವ ರಾಮಲಿಂಗಾ ರೆಡ್ಡಿ

ಹಂಚಿಕೆಯಾದ ಮನೆಗಳಲ್ಲಿ ರಾಜ್ಯ ಪ್ರಾಯೋಜಿತ ವಸತಿ ಯೋಜನೆಗಳ ಅಡಿಯಲ್ಲಿ 36,150 ಮನೆಗಳು ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ 7,02,731 ಮನೆಗಳು ಸೇರಿವೆ.
Minister Ramalinga Reddy
ಸಚಿವ ರಾಮಲಿಂಗಾ ರೆಡ್ಡಿ
Updated on

ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಸತಿ ಯೋಜನೆಗಳ ಅಡಿಯಲ್ಲಿ ಈ ವರ್ಷ ರಾಜ್ಯದ ವಿವಿಧ ಜಿಲ್ಲೆಗಳಿಗೆ ಒಟ್ಟು 7,38,881 ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಈ ಪೈಕಿ 3,27,747 ಮನೆಗಳ ಮಂಜೂರು ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬುಧವಾರ ಹೇಳಿದ್ದಾರೆ.

ಸದನದಲ್ಲಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಪರವಾಗಿ ರಾಮಲಿಂಗಾ ರೆಡ್ಡಿಯವರು ಉತ್ತರಿಸಿದರು.

ಹಂಚಿಕೆಯಾದ ಮನೆಗಳಲ್ಲಿ ರಾಜ್ಯ ಪ್ರಾಯೋಜಿತ ವಸತಿ ಯೋಜನೆಗಳ ಅಡಿಯಲ್ಲಿ 36,150 ಮನೆಗಳು ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ 7,02,731 ಮನೆಗಳು ಸೇರಿವೆ ಎಂದು ಮಾಹಿತಿ ನೀಡಿದರು.

2024–25ನೇ ಸಾಲಿನಲ್ಲಿ ಅಲೆಮಾರಿ (ನೋಮಾಡಿಕ್) ಸಮುದಾಯಗಳಿಗೆ ಪ್ರತ್ಯೇಕ ವಸತಿ ಗುರಿಗಳನ್ನು ನಿಗದಿಪಡಿಸಲಾಗಿಲ್ಲ, ಆದರೆ ಗೃಹರಹಿತ ಎಲ್ಲಾ ಕುಟುಂಬಗಳಿಗೆ, ಅಲೆಮಾರಿ ಸಮುದಾಯದವರನ್ನೂ ಒಳಗೊಂಡಂತೆ, ವಸತಿ ಒದಗಿಸಲಾಗುತ್ತಿದೆ.

Minister Ramalinga Reddy
ರಾಜ್ಯದ ಎಲ್ಲಾ ಬಸ್‌ಗಳಲ್ಲಿ ತುರ್ತು ನಿರ್ಗಮನ ದ್ವಾರ ಕಡ್ಡಾಯ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಮನೆ ನಿರ್ಮಾಣದ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಸತಿ ಘಟಕ ವೆಚ್ಚ ಹಾಗೂ ಸಹಾಯಧನ ಹೆಚ್ಚಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದರು.

ಪ್ರಸ್ತುತ ಫಲಾನುಭವಿಗಳಿಗೆ ಸಿಮೆಂಟ್, ಸ್ಟೀಲ್ ಹಾಗೂ ಸಹಾಯಧನದ ರೂಪದಲ್ಲಿ ನೆರವು ನೀಡಲಾಗುತ್ತಿದ್ದು, ಇಂದಿನ ಮಾರುಕಟ್ಟೆ ಬೆಲೆಯಲ್ಲಿ ಮನೆ ನಿರ್ಮಾಣ ಮಾಡುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಹಣಕಾಸು ಸಹಾಯಧನ ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com