ಬ್ರೆಡ್ ಪ್ಯಾಕೆಟ್​​ನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ವಿದೇಶಿ ಯುವತಿ ಬಂಧನ: 1.20 ಕೋಟಿ ರೂ ಮೌಲ್ಯದ ಕೊಕೇನ್ ವಶ

ನೈಜೀರಿಯಾ ಮೂಲದ ಒಲಾಜಿಡೆ ಎಸ್ತಾರ್ ಬಂಧಿತ ವಿದೇಶಿ ಪ್ರಜೆ. ಈಕೆಯಿಂದ 1.20 ಕೋಟಿ ಮೌಲ್ಯದ 121 ಗ್ರಾಂ ಕೊಕೇನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
Esther
ಒಲಾಜಿಡೆ ಎಸ್ತಾರ್
Updated on

ಬೆಂಗಳೂರು: ಬ್ರೆಡ್ ಪ್ಯಾಕೆಟ್​​ನಲ್ಲಿ ಡ್ರಗ್ಸ್ ಅವಿತಿಟ್ಟು ಮುಂಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ವಿದೇಶಿ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, 1.20 ಕೋಟಿ ರೂ ಮೌಲ್ಯದ ಕೊಕೇನ್ ವಶಕ್ಕೆ ಪಡೆದಿದ್ದಾರೆ.

ನೈಜೀರಿಯಾ ಮೂಲದ ಒಲಾಜಿಡೆ ಎಸ್ತಾರ್ ಬಂಧಿತ ವಿದೇಶಿ ಪ್ರಜೆ. ಈಕೆಯಿಂದ 1.20 ಕೋಟಿ ಮೌಲ್ಯದ 121 ಗ್ರಾಂ ಕೊಕೇನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರೋಪಿತೆಯ ವಿರುದ್ಧ ಎನ್​​ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.

ಬಂಧಿತ ಯುವತಿ ವಿದ್ಯಾರ್ಥಿ ವೀಸಾದಡಿ 2024ರಲ್ಲಿ ವ್ಯಾಸಂಗಕ್ಕಾಗಿ ದೆಹಲಿಗೆ ಬಂದಿದ್ದಳು. ಕಾಲೇಜಿಗೆ ದಾಖಲಾಗದೆ, ಡ್ರಗ್ಸ್ ದಂಧೆಕೋರರ ನಂಟು ಬೆಳೆಸಿ ಮುಂಬೈನ ಹಲವು ಕಡೆಗಳಲ್ಲಿ ವಾಸವಾಗಿದ್ದಳು. ಮುಂಬೈನಲ್ಲಿದ್ದ ಸ್ನೇಹಿತ ನೀಡುವ ಮಾದಕವಸ್ತುಗಳನ್ನು ಹೇಳಿದ ಜಾಗಕ್ಕೆ ಡ್ರಗ್ಸ್ ಪೆಡ್ಲಿಂಗ್ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಳು.

ಅದೇ ರೀತಿ ಬೆಂಗಳೂರಿಗೆ ಕೊಕೇನ್ ಸಾಗಿಸಲು ಸಲುವಾಗಿ ಖಾಸಗಿ ಬಸ್ ಮೂಲಕ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದಳು. ಯಾರಿಗೂ ಅನುಮಾನ ಬರದಂತೆ ಬ್ರೆಡ್ ಪ್ಯಾಕೆಟ್​​ನಲ್ಲಿ ತುಂಡು ಮಾಡಿದ್ದ ಬ್ರೆಡ್​​ನಲ್ಲಿ 121 ಗ್ರಾಂ ಕೊಕೇನ್ ಅನ್ನ ಕವರ್​​ನಲ್ಲಿ ಬಚ್ಚಿಟ್ಟಿದ್ದಳು.

Esther
ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ 300 ವಿದೇಶಿ ಪ್ರಜೆಗಳ ಗಡಿಪಾರು: ಪರಿಷತ್ ನಲ್ಲಿ ಪರಮೇಶ್ವರ್ ಮಾಹಿತಿ

ಮಾದಕ ದ್ರವ್ಯಗಳ ಮಾರಾಟದ ಬಗ್ಗೆ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ, ಪೊಲೀಸರು ದಾಳಿ ನಡೆಸಿದರು. ಆರಂಭದಲ್ಲಿ ಯಾವುದೇ ಮಾದಕ ದ್ರವ್ಯಗಳು ಪತ್ತೆಯಾಗಿರಲಿಲ್ಲ. ನಂತರ ಸುದೀರ್ಘವಾಗಿ ಪರಿಶೀಲಿಸಿದಾಗ ಬ್ರೆಡ್ ತುಂಡುಗಳ ಒಳಗೆ ಬಚ್ಚಿಟ್ಟಿದ್ದ ಕೊಕೇನ್ ಪ್ಯಾಕೆಟ್‌ಗಳು ಕಂಡುಬಂದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com