40 ಲಕ್ಷ ರೂ ವೆಚ್ಚದ ಅದ್ಧೂರಿ ಮದುವೆ.. ಹನಿಮೂನ್ ಅರ್ಧಕ್ಕೇ ಮೊಟಕು, ನವವಿವಾಹಿತೆ ಆತ್ಮಹತ್ಯೆ! ಆಗಿದ್ದೇನು?

ಮಂಡ್ಯ ಜಿಲ್ಲೆಯ ಮದ್ದೂರಿನ ಸಿಕೆ ಐಶ್ವರ್ಯ ಎಂಬ ಮಹಿಳೆ ಡಿಪ್ಲೊಮಾ ಪದವೀಧರರಾದ 27 ವರ್ಷದ ಪತಿ ಲಿಖಿತ್ ಸಿಂಹ ಅವರನ್ನು ವಿವಾಹವಾಗಿದ್ದರು.
Newly-wed woman dies by suicide in Bengaluru
ನವವಿವಾಹಿತೆ ಆತ್ಮಹತ್ಯೆ
Updated on

ಬೆಂಗಳೂರು: ಕಳೆದ ತಿಂಗಳು ವಿವಾಹವಾದ 24 ವರ್ಷದ ಎಂಬಿಎ ಪದವೀಧರೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಸಂದ್ರದಲ್ಲಿರುವ ತನ್ನ ಪತಿಯ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಮಂಡ್ಯ ಜಿಲ್ಲೆಯ ಮದ್ದೂರಿನ ಸಿಕೆ ಐಶ್ವರ್ಯ ಎಂಬ ಮಹಿಳೆ ಡಿಪ್ಲೊಮಾ ಪದವೀಧರರಾದ 27 ವರ್ಷದ ಪತಿ ಲಿಖಿತ್ ಸಿಂಹ ಅವರನ್ನು ವಿವಾಹವಾಗಿದ್ದರು. ಇದೀಗ ನಿಗೂಢ ಸಾವಿನ ಪ್ರಕರಣ ಸಂಬಂಧ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಐಶ್ವರ್ಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಐಶ್ವರ್ಯ ಅವರ ಪೋಷಕರು, ಅವರ ಪತಿ ಮತ್ತು ಅವರ ಕುಟುಂಬದವರು ಅವರನ್ನು ಕೊಂದು ಆತ್ಮಹತ್ಯೆಯಂತೆ ಬಿಂಬಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಐಶ್ವರ್ಯ ಅವರ ಮದುವೆಯ ಮರುದಿನದಿಂದಲೇ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಕೆಯ ಪತಿ ಮತ್ತು ಅತ್ತೆ ಆಕೆಯ ಪೋಷಕರಿಗೆ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ಹೇಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಬುಧವಾರ ಬೆಳಿಗ್ಗೆ, ಐಶ್ವರ್ಯ ಅವರ ಪೋಷಕರು ಲಿಖಿತ್ ಅವರ ಮನೆಗೆ ಮಧ್ಯಸ್ಥಿಕೆಗಾಗಿ ಬಂದಿದ್ದರು. ನಂತರ, ಅವರು ಮದ್ದೂರಿಗೆ ತೆರಳಿದ್ದರು. ನಂತರ ಲಿಖಿತ್ ಅವರ ಸಹೋದರ ಕರೆ ಮಾಡಿ ಐಶ್ವರ್ಯ ಅವರ ಸಾವಿನ ಬಗ್ಗೆ ತಿಳಿಸಿದ್ದಾರೆ.

ಕೂಡಲೇ ದೌಡಾಯಿಸಿದ ಐಶ್ವರ್ಯಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಅಲ್ಲದೆ ಐಶ್ವರ್ಯ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

Newly-wed woman dies by suicide in Bengaluru
ಜನರಿಂದ 'ಚಪ್ಪಲಿ'ಯಲ್ಲಿ ಹೊಡೆಸ್ತೇನೆ: ಮಾಗಡಿ ತಹಶೀಲ್ದಾರ್ ಗೆ ಕಾಂಗ್ರೆಸ್ ಶಾಸಕ HC ಬಾಲಕೃಷ್ಣ ಆವಾಜ್! ವಿಡಿಯೋ ವೈರಲ್

ಮತ್ತೊಂದು ಪ್ರಕರಣ: 26 ವರ್ಷದ ನವವಿವಾಹಿತೆ ಆತ್ಮಹತ್ಯೆ

ಮತ್ತೊಂದು ಪ್ರಕರಣದಲ್ಲಿ ಮತ್ತೋರ್ವ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಪತಿ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ಸಂತ್ರಸ್ಥ ನವವಿವಾಹಿತೆಯನ್ನು ಘನವೈ ಎಂದು ಗುರುತಿಸಲಾಗಿದೆ. ಆಕೆ ಅಕ್ಟೋಬರ್ 29 ರಂದು ಸೂರಜ್ ಎಂಬುವವರನ್ನು ವಿವಾಹವಾಗಿದ್ದರು. ಸೂರಜ್ ಅವರ ಪೋಷಕರ ಬೇಡಿಕೆಯ ಮೇರೆಗೆ ನವೆಂಬರ್ 23 ರಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ವಿವಾಹ ಆರತಕ್ಷತೆ ಏರ್ಪಡಿಸಲಾಗಿತ್ತು.

40 ಲಕ್ಷ ರೂ ವೆಚ್ಚದ ಅದ್ಧೂರಿ ಮದುವೆ..

ಕಳೆದ ಅಕ್ಟೋಬರ್ 29ರಂದು ಸೂರಜ್ ಜೊತೆ ಘನವೈ ಮದುವೆ ಆಗಿತ್ತು, ಮದುವೆಯಾಗಿ ಬಹುತೇಕ ಒಂದು ತಿಂಗಳ ನಂತರ ಗಂಡನ ಮನೆಯವರ ಬೇಡಿಕೆಯಂತೆ ಸುಮಾರು 40 ಲಕ್ಷ ಖರ್ಚು ಮಾಡಿ ನವೆಂಬರ್ 23 ರಂದು ಪ್ಯಾಲೇಸ್ ಗ್ರೌಂಡ್ಸ್​​ನಲ್ಲಿ ಅದ್ದೂರಿಯಾಗಿ ರಿಸೆಪ್ಶನ್ ಮಾಡಿದ್ದರು. ನಂತರ ನವದಂಪತಿಗಳು ಹತ್ತು ದಿನಗಳ ಕಾಲ ಶ್ರೀಲಂಕಾಗೆ ಹನಿಮೂನ್ ಹೋಗಿದ್ದರು.

ಆದರೆ ಇನ್ನೂ ಐದು ದಿನ ಇರುವಾಗಲೇ ಅರ್ಧದಲ್ಲೇ ಇಬ್ಬರು ವಾಪಸ್​​ ಬಂದಿದ್ರು. ಈ ಬಗ್ಗೆ ಯುವತಿಯ ಕುಟುಂಬದವರು ಸೂರಜ್​ ಮನೆಯವರಿಗೆ ಪ್ರಶ್ನೆ ಮಾಡಿದ್ರೆ ನಿಮ್ಮ ಮಗಳನ್ನ ಕರೆದುಕೊಂಡು ಹೋಗ್ರಿ ಎಂದಿದ್ದರು ಎಂಬ ಆರೋಪ ಕೇಳಿಬಂದಿದೆ.

ಈ ನಡುವೆ ದಂಪತಿಗಳು ಯಾವುದೋ ವೈಯಕ್ತಿಕ ವಿಷಯದ ಬಗ್ಗೆ ಜಗಳವಾಡಿರಬೇಕು ಎಂದು ಶಂಕಿಸಲಾಗಿದೆ. ಹಿಂದಿರುಗಿದ ತಕ್ಷಣ, ಸೂರಜ್ ಅವರ ಕುಟುಂಬವು ಆಕೆಯ ಪೋಷಕರನ್ನು ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿತು. ಇದರಿಂದ ಮನನೊಂದ ಮಹಿಳೆ ಬುಧವಾರ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Newly-wed woman dies by suicide in Bengaluru
ಬೆಂಗಳೂರು: ಮಗಳ ಮದುವೆ ಮಾಡಿಕೊಡಲು ನಿರಾಕರಿಸಿದ ಯುವತಿಯ ತಾಯಿಗೆ ಬೆಂಕಿ ಹಚ್ಚಿದ ಪ್ರೇಮಿ!

ಆಸ್ಪತ್ರೆಯಲ್ಲಿ ಯುವತಿ ಸಾವು, ಪೋಷಕರ ಪ್ರತಿಭಟನೆ

ಇನ್ನು ಆಸ್ಪತ್ರೆಯಲ್ಲಿದ್ದ ಯುವತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಆಕೆಯ ಸಾವಿಗೆ ಸೂರಜ್ ಕುಟುಂಬಸ್ಥರೇ ಕಾರಣ ಎಂದು ಘನವೈ ಪೋಷಕರು ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಅವರು ಪ್ರತಿಭಟನೆ ನಡೆಸುತ್ತಿದ್ದು, ಸೂರಜ್ ಕುಟುಂಬಸ್ಥರನ್ನು ಶಿಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com