ವಿಡಿಯೋ: ಬೆಂಗಳೂರಿನಲ್ಲಿ ದ್ರಾವಿಡ್ ಕಾರು ಅಪಘಾತ; ಗೂಡ್ಸ್ ಆಟೋ ಚಾಲಕನೊಂದಿಗೆ ವಾಗ್ವಾದ

ಇಂದು ಸಂಜೆ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಾರಿಗೆ ಗೂಡ್ಸ್ ಆಟೋ ಟಚ್ ಆದ ಬಳಿಕ ರಾಹುಲ್ ದ್ರಾವಿಡ್ ಕಾರಿನಿಂದ ಕೆಳಗಿಳಿದು ಪರಿಶೀಲನೆ ನಡೆಸಿದರು.
ಆಟೋ ಚಾಲಕನೊಂದಿಗೆ ವಾಗ್ವಾದ
ಆಟೋ ಚಾಲಕನೊಂದಿಗೆ ವಾಗ್ವಾದ
Updated on

ಬೆಂಗಳೂರು: ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಮಂಗಳವಾರ ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಕಾರಿಗೆ ಗೂಡ್ಸ್ ಆಟೋವೊಂದು ಡಿಕ್ಕಿ ಹೊಡೆದಿದೆ.

ಇಂದು ಸಂಜೆ ಈ ಘಟನೆ ನಡೆದಿದ್ದು, ಕಾರಿಗೆ ಗೂಡ್ಸ್ ಆಟೋ ಟಚ್ ಆದ ಬಳಿಕ ರಾಹುಲ್ ದ್ರಾವಿಡ್ ಕಾರಿನಿಂದ ಕೆಳಗಿಳಿದು ಪರಿಶೀಲನೆ ನಡೆಸಿದರು. ಈ ವೇಳೆ ದ್ರಾವಿಡ್ ಹಾಗೂ ಗೂಡ್ಸ್ ಆಟೋ ಚಾಲಕನ‌ ಮಧ್ಯೆ ಸಣ್ಣ ವಾಗ್ವಾದ ನಡೆದಿದೆ.

ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದ್ದು, ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಹೀಗಾಗಿ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

ಆಟೋ ಚಾಲಕನೊಂದಿಗೆ ವಾಗ್ವಾದ
Ranji trophy: ಕರ್ನಾಟಕ ರಣಜಿ ತಂಡದಲ್ಲಿ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಗೆ ಸ್ಥಾನ!

ಟ್ರಾಫಿಕ್ ಜಾಮ್ ವೇಳೆ ಕಾರಿಗೆ ಗೂಡ್ಸ್ ಆಟೋ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಘಟನೆ ನಂತರ ದ್ರಾವಿಡ್ ಕಾರಿನಿಂದ ಇಳಿದು ಬಂದು ಪರಿಶೀಲಿಸಿದರು. ಇನ್ನು ಟ್ರಾಫಿಕ್​ ಇದ್ದ ಕಾರಣ ದ್ರಾವಿಡ್ ಕಾರು ಮುಂದಿನ ವಾಹನಕ್ಕೆ ಟಚ್​ ಆಗಿದೆ ಎನ್ನಲಾಗಿದೆ. ಹೀಗಾಗಿ ದ್ರಾವಿಡ್ ತಮ್ಮ ಕಾರಿನ ಮುಂಭಾಗವನ್ನು ಪರಿಶೀಲಿಸುವುದನ್ನು ವಿಡಿಯೋನಲ್ಲಿ ಕಾಣಬಹುದು.

ಇನ್ನು ಇದರಲ್ಲಿ ಆಟೋ ಚಾಲಕನದ್ದು ತಪ್ಪಾ ಅಥವಾ ದ್ರಾವಿಡ್ ಅವರದ್ದು ತಪ್ಪಾ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಸದ್ಯ ರಾಹುಲ್ ದ್ರಾವಿಡ್, ಗೂಡ್ಸ್ ಆಟೋ ಚಾಲಕನ ನಂಬರ್ ಪಡೆದು ಅಲ್ಲಿಂದ ತೆರಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com