
ಬೆಂಗಳೂರು: ಬನ್ನೇರುಘಟ್ಟ ಕಾಡಿನಲ್ಲಿರುವ ಶಿವ ಮತ್ತು ಆಂಜನೇಯ ದೇವಸ್ಥಾನ ಬಳಿ ಸುವರ್ಣಮುಖಿ ಕೊಳದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಸುವರ್ಣಮುಖಿಗೆ ಬಂದಿದ್ದ ಯೋಗೇಶ್ ಮತ್ತು ದೀಪು ಎಂಬುವರು ಕೊಳದಲ್ಲಿ ಈಜಲು ಇಳಿದಿದ್ದಾರೆ. 20ಕ್ಕೂ ಹೆಚ್ಚು ಅಡಿ ಆಳವಿರುವ ಕೊಳದಲ್ಲಿ ಯೋಗೇಶ್ ಮುಳುಗಿದ್ದರು. ಈ ವೇಳೆ ಆತನನ್ನು ರಕ್ಷಿಸಲು ಮುಂದಾದ ದೀಪು ಸಹ ಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಸದ್ಯ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Advertisement